Asianet Suvarna News Asianet Suvarna News

ಕೋಲಾರ ಡಿಸಿಸಿ ಬ್ಯಾಂಕ್​ನ ವಹಿವಾಟಿನಲ್ಲಿ‌ ಅವ್ಯವಹಾರ: ತನಿಖೆಗೆ ಆದೇಶ

ಬಯಲು ಸೀಮೆ ಜಿಲ್ಲೆಗಳ ರೈತರ ಆರ್ಥಿಕ ಆಧಾರವಾಗಿರುವ ಕೋಲಾರ ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್ ಪದೇ ಪದೇ ಚರ್ಚೆಗೆ‌ ಬರುತ್ತಿದೆ. ಇದೀಗ ಮತ್ತೊಮ್ಮೆ ಈ ಬ್ಯಾಂಕ್ ಚರ್ಚೆಗೆ ಕಾರಣವಾಗಿದೆ. ಏತಕ್ಕೆ ಎಂದುಕೊಂಡ್ರೆ ಇಲ್ಲಿದೆ ನೋಡಿ ಒಂದು ವರದಿ. 

Irregularity in Kolar DCC Bank transactions Order for investigation gvd
Author
Bangalore, First Published Aug 23, 2022, 12:30 AM IST

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಆ.23): ಬಯಲು ಸೀಮೆ ಜಿಲ್ಲೆಗಳ ರೈತರ ಆರ್ಥಿಕ ಆಧಾರವಾಗಿರುವ ಕೋಲಾರ ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್ ಪದೇ ಪದೇ ಚರ್ಚೆಗೆ‌ ಬರುತ್ತಿದೆ. ಇದೀಗ ಮತ್ತೊಮ್ಮೆ ಈ ಬ್ಯಾಂಕ್ ಚರ್ಚೆಗೆ ಕಾರಣವಾಗಿದೆ. ಏತಕ್ಕೆ ಎಂದುಕೊಂಡ್ರೆ ಇಲ್ಲಿದೆ ನೋಡಿ ಒಂದು ವರದಿ. ಹೌದು! ಸಾಲ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಈಗ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ‌ ಬ್ಯಾಂಕ್ ಚರ್ಚೆಗೆ ಕಾರಣವಾಗಿರೋದು. ಅವಳಿ ಜಿಲ್ಲೆಯ ರಾಜಕಾರಣದಲ್ಲಿಯೂ ಈ ಬ್ಯಾಂಕ್ ವಿಚಾರ ಈಗ ಕೆಸರೆರೆಚಾಟಕ್ಕೆ ಕಾರಣವಾಗಿದೆ. 

ಆರೋಗ್ಯ ಸಚಿವ ಡಾ.ಸುಧಾಕರ್ ,ಕೋಲಾರ ಜಿಲ್ಲೆಯ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಸಂಪಂಗಿ‌ ಸೇರಿದಂತೆ ವಿವಿದ ಬಿಜೆಪಿ ನಾಯಕರು ಬ್ಯಾಂಕ್ ಆಡಳಿತ ಮಂಡಳಿ ತಾರತಮ್ಯ ಮಾಡುತ್ತಿರುವ ಕುರಿತು ಆಗಾಗ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ‌ ತಮಗೆ ಬೇಕಾದವರಿಗೆ ಮಾತ್ರ ಸಾಲ‌ ನೀಡಲಾಗುತ್ತಿದೆ ಎಂದು ಆರೋಪ ಪದೇ ಪದೇ ಮಾಡುತ್ತಲೆ‌ ಬಂದಿದ್ದಾರೆ. ಈ ಹಿಂದೆ ಬ್ಯಾಂಕ್‌ ಸಿಬ್ಬಂದಿ‌ ನೇಮಕಾತಿಯಲ್ಲಿ ಅಕ್ರಮ ನಡೆದ ಕುರಿತು ದೂರು ನ್ಯಾಯಾಲಯಕ್ಕೂ ಹೋಗಿತ್ತು. ಇತ್ತೀಚೆಗೆ ರೈತರಿಗೆ ನೀಡುವ ಸಾಲದಲ್ಲಿ ಸರ್ಕಾರ ನೀಡುವ ಸಬ್ಸಿಡಿ ಹಣವನ್ನು ಸಹ ಅವ್ಯವಹಾರ ಮಾಡಿರುವ ಆರೋಪ‌ ಕೇಳಿಬಂದಿತ್ತು. 

ಸಿದ್ದರಾಮಯ್ಯ ಘಟಬಂಧನ್‌ ಸಿದ್ದುಗೇ ಖೆಡ್ಡಾ ತೋಡುತ್ತಿದೆ: ನಾರಾಯಣಸ್ವಾಮಿ

ಜಿಲ್ಲೆಯ ಬಿಜೆಪಿ ನಾಯಕರು ಸಾಕಷ್ಟು ಈ ಕುರಿತು ಆರೋಪಗಳನ್ನು ಮಾಡುತ್ತಲೆ ಇದ್ದರು. ಇದೀಗ ತಮ್ಮ ಪಕ್ಷದ ನಾಯಕರುಗಳ ಕೂಗು ಕೇಳಿಸಿಕೊಂಡ ಸಹಕಾರಿ‌ ಸಚಿವರು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನ ವಹಿವಾಟಿನಲ್ಲಿ‌ ಅವ್ಯವಹಾರ ಆರೋಪ ಕುರಿತು ತನಿಖೆಗೆ ಆದೇಶಿಸಿದ್ದಾರೆ. ತುಮಕೂರು ಮತ್ತು ಕೋಲಾರ ಡಿಸಿಸಿ ಬ್ಯಾಂಕ್‌ಗಳಿಗೆ ಹೆಚ್ಚುವರಿ ರಿಜಿಸ್ಟ್ರಾರ್ ಆಗಿ ರವೀಂದ್ರ ಎಂಬುವರನ್ನು‌ ನೇಮಿಸಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ರಾಜಕೀಯವಾಗಿ ಬ್ಯಾಂಕ್‌ ವಿಚಾರ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೋಲಾರ ಚಿಕ್ಕಬಳ್ಳಾಪುರ ಸಹಕಾರಿ‌ ಬ್ಯಾಂಕ್‌ ಹಣಕಾಸಿನ ವಹಿವಾಟು ಅಷ್ಟೇ ಅಲ್ಲ. 

ಅದು ಎರಡೂ ಅವಳಿ ಜಿಲ್ಲೆಗಳ ರೈತರು, ಬಡವರ್ಗದವರಿಗೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಕೇಂದ್ರ ಎನ್ನೊದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ರಾಜ್ಯದಲ್ಲಿಯೇ ಅತೀ ಹೆಚ್ಚು ಸಾಲವನ್ನು ಈ ಬ್ಯಾಂಕ್‌ನಿಂದ ಈಗಾಗಲೆ ನೀಡಲಾಗಿದೆ. ರಾಜ್ಯದಲ್ಲಿ ಇರುವ 21 ಸಹಕಾರಿ ಬ್ಯಾಂಕ್‌ಗಳ ಮೂಲಕ 33 ಲಕ್ಷ ರೈತರಿಗೆ ಸಾಲ ನೀಡಲು 24 ಸಾವಿರ ಕೋಟಿಗಳನ್ನು ಮೀಸಲು ಇಡಲಾಗಿದೆ. ಇದರಲ್ಲಿ ಕೋಲಾರ ಜಿಲ್ಲೆಯೊಂದಕ್ಕೆ 623 ಕೋಟಿ‌ ನಿಗದಿ ಮಾಡಲಾಗಿದೆ. ಹೀಗಿದ್ದಾಗ ಹಿಂದೆ ಅಂದ್ರೆ 2004ರಲ್ಲಿ ದೀವಾಳಿಯಾಗಿದ್ದ ಬ್ಯಾಂಕ್ ನಂತರ‌ ಮತ್ತೊಮ್ಮೆ ಪುಟಿದೆದ್ದು ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಶೇಖಡಾ 44ರಷ್ಟು ವಸೂಲಿ ಆಗದ ಸಾಲದ ಖಾತೆಗಳನ್ನು ಹೊಂದಿದ್ದ ಬ್ಯಾಂಕ್ ಈಗ ಕೇವಲ 1.5ರಷ್ಟು ಮಾತ್ರ ಎನ್‌ಪಿಎ ಇದೆ.

ಕೋಲಾರದಲ್ಲಿ ಬೃಹದಾಕಾರದ​ ಮರದ ಕೊಂಬೆ ಬಿದ್ದು ಇಬ್ಬರು ಸಾವು

ಅವಳಿ ಜಿಲ್ಲೆಗಳಲ್ಲಿ ಪ್ರತಿ ತಾಲೂಕಿನಲ್ಲಿಯೂ ಬ್ರಾಂಚ್‌ಗಳು ಅತ್ಯುತ್ತಮ ವಾಗಿ ನಿರ್ವಹಿಸಲಾಗುತ್ತಿದೆ. ಎನ್ನುತ್ತಾರೆ ಬ್ಯಾಂಕ್‌ನ ಅಧ್ಯಕ್ಷರು. ಸರಿ ಹತ್ತು ವರ್ಷಗಳ ಹಿಂದೆ ದೀವಾಳಿಯ ಅಂಚಿನಲ್ಲಿದ್ದ ಕೋಲಾರ ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್ ಈಗ ವಾರ್ಷಿಕ‌ ಲಕ್ಷ ಕೋಟಿ ವಹಿವಾಟು ಮಾಡುತ್ತಿದೆ. ಆದ್ರೆ ರಾಜಕೀಯ ದಾಳವಾಗುತ್ತಾ ರಾಜಕಾರಿಣಿಗಳಿಗೆ ಮಾತನಾಡಲು ಅವಕಾಶ ನೀಡಿದ ಬ್ಯಾಂಕ್‌ಗೆ ಈಗ ತನಿಖೆಯ ಸರದಿ ಬಂದಿದೆ. ನಿಜವಾಗಲೂ ಬ್ಯಾಂಕ್‌ನಲ್ಲಿನ ವಹಿವಾಟಿನಲ್ಲಿ ಅವ್ಯವಹಾರ,  ಸ್ವಜನ ಪಕ್ಷಪಾತ, ರಾಜಕೀಯ ನಡೆದಿದೆಯಾ ಎನ್ನುವುದು ತನಿಖೆಯಲ್ಲಿ‌ ಹೊರಬರಬೇಕಿದೆ.

Follow Us:
Download App:
  • android
  • ios