ಮಂಡ್ಯ(ಜು.18): ಪರಿಸರ ಕಾಳಜಿಗಾಗಿ ಪ್ರಧಾನಿ ಮೋದಿಯಿಂದ ಶ್ಲಾಘನೆಗೊಳಗಾಗಿದ್ದ ಮಳವಳ್ಳಿಯ ಕಾಮೇಗೌಡರ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ನಡೆದ ಕಾಮೇಗೌಡ ಮತ್ತು ದಾಸನದೊಡ್ಡಿ ಗ್ರಾಮಸ್ಥರ ನಡುವಿನ ಅಸಮಾಧಾನ ಸಂಬಂಧ ಉಪವಿಭಾಗಾಧಿಕಾರಿ ಸೂರಜ್‌ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಕಾಮೇಗೌಡರ ವಿರುದ್ಧ ದೂರುಗಳ ಸುರಿಮಳೆಗೈದರು.

ದ.ಕ. ಜಿಲ್ಲೆಗೆ 25 ಸಾವಿರ ಕೋವಿಡ್‌ ಟೆಸ್ವ್‌ ಕಿಟ್‌: ಅಶ್ವತ್ಥನಾರಾಯಣ

ಗ್ರಾಮಸ್ಥರ ದೂರುಗಳ ಸತ್ಯಾಸತ್ಯತೆ, ಕಾಮೇಗೌಡರು ನಿರ್ಮಿಸಿದ್ದಾರೆ ಎನ್ನಲಾದ ಕಟ್ಟೆಗಳು ಸತ್ಯವೇ ಸುಳ್ಳೆ ಎಂಬುದನ್ನು ತಿಳಿಯಲು ನಾನೇ ಖುದ್ದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತೇನೆ.

ಅಲ್ಲದೇ, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತಂಡವನ್ನು ಜುಲೈ 21ರೊಳಗೆ ರಚಿಸಿ, ಆದಷ್ಟುಬೇಗ ವರದಿ ತರಿಸಿಕೊಂಡು ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡುವುದಾಗಿ ಉಪವಿಭಾಗಾಧಿಕಾರಿ ಸೂರಜ್‌ ತಿಳಿಸಿದರು.