Asianet Suvarna News Asianet Suvarna News

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದ ಚಿಕಿತ್ಸೆಗೆ ಬೇಡಿಕೆ

ಕೇವಲ ಭಾರತವಷ್ಟೆ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಆರ್ಯುವೇದ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕೊಣಸೂರು ಆರ್ಯುವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್ ತಿಳಿಸಿದರು.

International demand for Ayurvedic treatment snr
Author
First Published Oct 9, 2023, 8:41 AM IST

  ಬೆಟ್ಟದಪುರ :  ಕೇವಲ ಭಾರತವಷ್ಟೆ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಆರ್ಯುವೇದ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕೊಣಸೂರು ಆರ್ಯುವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಹೋಬಳಿ ಕೊಣಸೂರು ಆಯುರ್ವೇದ ಚಿಕಿತ್ಸಾಲಯದಲ್ಲಿ ಜಿಪಂ, ಆಯುಷ್ ಇಲಾಖೆ ವತಿಯಿಂದ ನಡೆದ ಆಯುಷ್ಮಾನ್‌ಭವ ಕಾರ್ಯಕ್ರಮದಲ್ಲಿ ರೋಗಿಗಳ ತಪಾಸಣೆ ನಡೆಸಿ ಮಾತನಾಡಿದರು. ಆರ್ಯವೇದದ ಮಹತ್ವವನ್ನು ಅರಿಯುವಲ್ಲಿ ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದು. ಯಾವುದೆ ರೋಗದ ಚಿಕಿತ್ಸೆಯಿಂದ ಇತರೆ ಪ್ರಭಾವಕ್ಕೆ ದೇಹ ಒಳಗಾಗದಂತೆ ಆರ್ಯುವೇದ ಪದ್ದತಿಯ ಚಿಕಿತ್ಸಾ ಪದ್ದತಿಯಾಗಿದ್ದು. ಆರ್ಯುವೇದ ಆಸ್ಪತ್ರೆಗಳಲ್ಲಿ ವಿವಿಧ ರೋಗಗಳಿಗೆ ಹೆಚ್ಚಿನ ಚಿಕಿತ್ಸೆ ದೊರಕಿಸಲಾಗುತ್ತಿದೆ. ಪಂಚಕರ್ಮದಂತಹ ಚಿಕಿತ್ಸೆಗಳು ಕೆಲ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ದೊರಕುವಂತೆ ಮಾಡಿದ್ದು ಹಲವಾರು ರೋಗಗಳಿಗೆ ಆರ್ಯುವೇದ ಚಿಕತ್ಸೆಯೆ ಪರಿಪೂರ್ಣ ಪರಿಹಾರ ಒದಗಿಸುತ್ತಿದೆ ಎಂದು ಅವರು ತಿಳಿಸಿದರು.

ಅಲ್ಲದೆ ಯೋಗ ತರಬೇತುದಾರರನ್ನು ನೇಮಿಸಿಕೊಂಡು ಮಕ್ಕಳಿಗೆ ಪಾಠ ಪ್ರವಚನಗಳಷ್ಟೆ ಅಲ್ಲದೆ ಅದರೊಂದಿಗೆ ಯೋಗ ಧ್ಯಾನದ ತರಗತಿಗಳನ್ನು ಆಯುಷ್ ಇಲಾಖೆ ವತಿಯಿಂದ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಕೆ. ರಾಜಶೇಖರ್, ರೈತ ಸಂಘದ ಅಧ್ಯಕ್ಷ ಆನಂದ್, ವೀರಪ್ಪ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಧನಲಕ್ಷ್ಮಿ ಮತ್ತು ಯೋಗ ತರಬೇತುದಾರೆ ಆಶಾ ಮಹದೇವರಾವ್ ಮೊದಲಾದವರು ಇದ್ದರು.

Follow Us:
Download App:
  • android
  • ios