ವರುಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲು
ವರುಣ ಕ್ಷೇತ್ರದ ಅಭ್ಯರ್ಥಿ ಎಸ್.ಎಂ. ಅಭಿಷೇಕ್ ಅವರನ್ನು ಬದಲಿಸಿ ಟಿ. ನರಸೀಪುರದ ಮಾಜಿ ಶಾಸಕ ಡಾ.ಎನ್.ಎಲ್. ಭಾರತೀಶಂಕರ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಸಾಮಾನ್ಯ ಕ್ಷೇತ್ರದಲ್ಲಿ ಪ.ಜಾತಿಗೆ ಸೇರಿದವರಿಗೆ ಟಿಕೆಟ್ ನೀಡಿರುವುದು ವಿಶೇಷ.
ಮೈಸೂರು : ವರುಣ ಕ್ಷೇತ್ರದ ಅಭ್ಯರ್ಥಿ ಎಸ್.ಎಂ. ಅಭಿಷೇಕ್ ಅವರನ್ನು ಬದಲಿಸಿ ಟಿ. ನರಸೀಪುರದ ಮಾಜಿ ಶಾಸಕ ಡಾ.ಎನ್.ಎಲ್. ಭಾರತೀಶಂಕರ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಸಾಮಾನ್ಯ ಕ್ಷೇತ್ರದಲ್ಲಿ ಪ.ಜಾತಿಗೆ ಸೇರಿದವರಿಗೆ ಟಿಕೆಟ್ ನೀಡಿರುವುದು ವಿಶೇಷ.
ವೀರಶೈವ- ಲಿಂಗಾಯತ ಜನಾಂಗಕ್ಕೆ ಸೇರಿದ ಅಭಿಷೇಕ್ ಕಳೆದ ಬಾರಿ ಕೂಡ ಅಭ್ಯರ್ಥಿಯಾಗಿ 28,123 ಮತಗಳನ್ನು ಪಡೆದಿದ್ದರು. ಈ ಬಾರಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಎಂದು ಗೊತ್ತಾದ ನಂತರ ನಿಷ್ಕಿ್ರಯರಾಗಿದ್ದರು. ಹೀಗಾಗಿ ಅಭ್ಯರ್ಥಿಯನ್ನು ಬದಲಿಸಲಾಗಿದೆ. ಭಾರತೀಶಂಕರ್ ಅವರು ಈ ಬಾರಿ ಟಿ. ನರಸೀಪುರದಿಂದ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು.
ದಿವಂಗತ ಎಂ. ರಾಜಶೇಖರಮೂರ್ತಿ ಅವರ ಕಟ್ಟಾಬೆಂಬಲಿಗರಾಗಿದ್ದ ಡಾ.ಭಾರತೀಶಂಕರ್ ಅವರು 1999 ರಲ್ಲಿ ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಸೋಲಿಸಿದ್ದರು.
ಭಾರತಿಶಂಕರ್- 28,858, ಎಚ್.ಸಿ. ಮಹದೇವಪ್ಪ - 21,372 ಮತಗಳನ್ನು ಪಡೆದಿದ್ದರು. ಆಗ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ
ಟಿ.ಎನ್. ನರಸಿಂಹಮೂರ್ತಿ- 16,798, ಜೆಡಿಯುನ ಎಚ್. ವಾಸು- 13,302, ಕನ್ನಡ ಚಳವಳಿ ವಾಟಾಳ್ ಪಕ್ಷದ
ಶಶಿಕಲಾ ನಾಗರಾಜು - 2,925, ಬಿಎಸ್ಪಿಯ ಕೆ.ಎನ್. ಪ್ರಮೋದ್‌ಚಂದರ್ (ಬಿಎಸ್ಪಿ)- 552, ಪಕ್ಷೇತರ ಎಸ್.ಎಂ. ಶೇಷಣ್ಣ- 331 ಮತ ಪಡೆದಿದ್ದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಕಾಂಗ್ರೆಸ್ ಬೆಂಬಲಿಸಿದ್ದಕ್ಕಾಗಿ ಅವರಿಗೆ 2004ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗಲಿಲ್ಲ. ಹೀಗಾಗಿ ವಿಜಯ ಮಲ್ಯ ನೇತೃತ್ವದ ಜನತಾಪಕ್ಷದಿಂದ ಸ್ಪರ್ಧಿಸಿ, 9,708 ಮತಗಳನ್ನು ಪಡೆದು ಸೋತಿದ್ದರು. ಜೆಡಿಎಸ್‌ನ ಎಚ್.ಸಿ. ಮಹದೇವಪ್ಪ - 37,956 ಮತWಳನ್ನು ಪಡೆದು ವಿಜೇತರಾಗಿದ್ದರು. ಕಾಂಗ್ರೆಸ್‌ನ ಎಂ. ಶ್ರೀನಿವಾಸಯ್ಯ- 23,699, ಬಿಜೆಪಿಯ ಟಿ. ಗೋಪಾಲ್- 15,880, ಬಿಎಸ್ಪಿಯ ಕೆ.ಎನ್. ಪ್ರಮೋದ್‌ಚಂದರ್- 6,815, ಪಕ್ಷೇತರರಾದ ಚಿತ್ತಬೋದ್- 4,173, ಅರಸು ಸಂಯುಕ್ತ ಪಕ್ಷದ ಎ.ಎಂ. ರಾಜು- 1,411, ಕನ್ನಡನಾಡು ಪಕ್ಷದ ಸೋಮಯ್ಯ ಮಲೆಯೂರು- 1,282 ಮತಗಳನ್ನು ಗಳಿಸಿದ್ದರು.
ಮತ್ತೊಂದು ವಿಕೆಟ್ ಪತನ
ಬೆಂಗಳೂರು(ಏ.15): ಟಿ. ನರಸೀಪುರದ ಮಾಜಿ ಶಾಸಕ ಭಾರತಿ ಶಂಕರ್ ಅವರು ಇಂದು(ಶನಿವಾರ) ಅಧಿಕೃತವಾಗಿ ಜೆಡಿಎಸ್ ಸೇರಲಿದ್ದಾರೆ. ಕ್ಷೇತ್ರ ಪುನರ್‌ವಿಂಗಡನೆಗೂ ಭಾರತಿ ಶಂಕರ್ ಮುನ್ನ ಶಾಸಕರಾಗಿದ್ದರು. ಆಗ ವರುಣಾ ಕೂಡ ಟಿ. ನರಸೀಪುರದಲ್ಲಿ ಇತ್ತು. ಭಾರತಿ ಶಂಕರ್ ಈಗ ವರುಣಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಭಾರತಿ ಶಂಕರ್ ಇಂದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ.
ವರುಣಾದಲ್ಲಿ ಮಾಜಿ ಸಿಎಮ ಸಿದ್ದರಾಮಯ್ಯ ವಿರುದ್ಧ ಭಾರತಿ ಶಂಕರ್ ಸ್ಪರ್ಧೆ ಮಾಡಲಿದ್ದಾರೆ. ಜೆಡಿಎಸ್ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರಕ್ಕೆ ಅಭಿಷೇಕ್ ಎಂಬ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಅಭಿಷೇಕ್ ಕಳೆದ ಒಂದು ವಾರದಿಂದ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ, ಪಕ್ಷದ ನಾಯಕರಿಗೂ ಸಿಗುತ್ತಿಲ್ಲ, ಹೀಗಾಗಿ ಜೆಡಿಎಸ್ ನಾಯಕರು ಅಭ್ಯರ್ಥಿಯನ್ನ ಬದಲಾವಣೆ ಮಾಡಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಭವಾನಿಗೆ ಪರಿಷತ್ ಸ್ಥಾನ?
ಜೆಡಿಎಸ್ ಭರವಸೆ ಪತ್ರ ಬಿಡುಗಡೆ
ದೇವೇಗೌಡರು ಜೆಡಿಎಸ್ ಪಕ್ಷದ 'ಭರವಸೆ ಪತ್ರ' ಬಿಡುಗಡೆ ಮಾಡ್ತಾರೆ. ಕುಮಾರಸ್ವಾಮಿ ಅವರು ಪಕ್ಷದ ಪ್ರಣಾಳಿಕೆಯನ್ನ ಬಿಡುಗಡೆ ಮಾಡ್ತಾರೆ ಅಂತ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಿಳಿಸಿದ್ದಾರೆ. ಕುಮಾರಸ್ವಾಮಿ ಪ್ರಣಾಳಿಕೆ ಬಿಡುಗಡೆ ಮಾಡ್ತಾರೆ. ಈಗ ನಾನು ಹನ್ನೆರಡು ಭರವಸೆಗಳನ್ನು ಬಿಡುಗಡೆ ಮಾಡ್ತೀನಿ. ಅಧಿಕಾರಕ್ಕೆ ಬಂದಾಗ ಏನು ಮಾಡಬೇಕೆಂದು ಒಂದು ಕಮಿಟಿ ಮಾಡಿ ಅದರ ಮಾಡಿ ಅದರ ಮೂಲಕ ಕಾರ್ಯಕ್ರಮ ಗಳನ್ನು ಜಾರಿ ಮಾಡಲಿದ್ದಾರೆ. ಈಗ ಕಾರ್ಯಕ್ರಮಗಳ ಭರವಸೆಗಳನ್ನು ಬಿಡುಗಡೆ ಮಾಡುತ್ತೇವೆ ಅಂತ ತಿಳಿಸಿದ್ದಾರೆ.