ಬಡವರ ಪಾಲಿಗೆ ಬೆಳಕಾಗಿದ್ದ ಇಂದಿರಾ ಗಾಂಧಿ: ಹೆಚ್.ಎಸ್.ಸುಂದರೇಶ್
- ‘ಬಡವರ ಪಾಲಿಗೆ ಬೆಳಕಾಗಿದ್ದ ಇಂದಿರಾ ಗಾಂಧಿ’
- ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಿ.ಇಂದಿರಾಗಾಂಧಿ ಜನ್ಮದಿನಾಚರಣೆ
- ಕಾಂಗ್ರೆಸ್ಗೆ ಮತ್ತೆ ಅಧಿಕಾರ ನಿಶ್ಚಿತ: ಸುಂದರೇಶ್ ವಿಶ್ವಾಸ
ಶಿವಮೊಗ್ಗ (ನ.20) : ಸಂವಿಧಾನಕ್ಕೆ ಅತ್ಯಂತ ಗೌರವ ನೀಡಿದ ಇಂದಿರಾ ಗಾಂಧಿ ದೇಶದ ಬಡವರ ಪಾಲಿಗೆ ಬೆಳಕಾಗಿದ್ದರು. ಅವರು ಇಂದಿಗೂ,ಎಂದಿಗೂ ಶಾಶ್ವತವಾಗಿ ನಮ್ಮ ಮನದಲ್ಲಿ ಉಳಿಯುತ್ತಾ ರೆ. ದೇಶದಲ್ಲಿ ಇಂದು ಹಲವು ತಲ್ಲಣಗಳ ನಡುವೆ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಇಂದಿರಾ ಗಾಂಧಿ ಅವರ ಜನಪ್ರಿಯ ಕಾರ್ಯಕ್ರಮಗಳ ಕೊಡುಗೆಯ ರೂಪದಲ್ಲಿ ಇಂದಿಗೂ ಶೇ.30ರಷ್ಟುಮತಗಳು ಕಾಂಗ್ರೆಸ್ಸಿನ ಬುನಾದಿಯಾ ಗಿವೆ. ಅವರ ಮೊಮ್ಮಗ ರಾಹುಲ್ ಅವರು ತಮ್ಮ ಅಜ್ಜಿಯ ಹಾದಿಯಲ್ಲಿಯೇ ನಡೆದು ಇಡೀ ದೇಶದ ತುಂಬ 2 ಸಾವಿರಕ್ಕೂ ಹೆಚ್ಚು ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
Karnataka Politics: ಬಿಜೆಪಿಗೆ ಮತ್ತೆ ಅಧಿಕಾರ ನಿಶ್ಚಿತ: ಬಿ.ಎಸ್.ಯಡಿಯೂರಪ್ಪ
ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಇಂದಿರಾ ಅವರು 17 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದವರು. ಬಡವರ ದೀನದಲಿತರ ಹಿಂದುಳಿದ ವರ್ಗಗಳ ಅಪಾರ ಪ್ರೀತಿಯನ್ನು ಗಳಿಸಿದ್ದವರು. ಅವರ ಜನಪ್ರಿಯ ಕಾರ್ಯಕ್ರಮಗಳ ಕೊಡುಗೆಯ ರೂಪದಲ್ಲಿ ಇಂದಿಗೂ ಶೇ.30ರಷ್ಟುಮತಗಳು ಕಾಂಗ್ರೆಸ್ಸಿನ ಬುನಾದಿಯಾಗಿವೆ ಎಂದರು.
ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್ ಮಾತನಾಡಿ, ಇಂದಿರಾಗಾಂಧಿ ಅನೇಕ ಯೋಜನೆಗಳನ್ನು ಜಾರಿಗೆ ತಂದವರು ಅವರ 20 ಅಂಶದ ಕಾರ್ಯಕ್ರಮಗಳನ್ನೇ ಇಂದು ಎಲ್ಲ ಪಕ್ಷಗಳೂ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸುತ್ತಿವೆ. ಅವರ ಪಡಿತರ ಚೀಟಿ, ವೃದ್ಧಾಪ್ಯ ವೇತನ, ಎಲ್ಲರಿಗೂ ಸೂರಿನ ವ್ಯವಸ್ಥೆ, ಹಸಿರು ಕ್ರಾಂತಿ, ಉಳುವವನೇ ಭೂಮಿಯ ಒಡೆಯ ಮುಂತಾದ ಯೋಜನೆಗಳು ಆದರ್ಶಪ್ರಾಯವಾಗಿವೆ. ಅವರು ಜನಮಾನಸದಲ್ಲಿ ಎಂದಿಗೂ ‘ಪ್ರಿಯದರ್ಶಿನಿ’ಯಾಗಿಯೇ ಉಳಿಯುತ್ತಾರೆ ಎಂದರು.
ಕಾಂಗ್ರೆಸ್ ಮುಖಂಡ ಎನ್. ರಮೇಶ್ ಮಾತನಾಡಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಳಿಸಲಾಗದ ಹೆಸರು ಇಂದಿರಾ ಅವರದ್ದು. ಇಂಡಿಯಾ ಎಂದರೆ ಇಂದಿರಾ ಎನ್ನುವಷ್ಟರ ಮಟ್ಟಿಗೆ ಅವರು ಖ್ಯಾತಿ ಹೊಂದಿದ್ದರು. ಪಾಕಿಸ್ತಾನಿ ದಂಗೆಕೋರರನ್ನು ಸಮರ್ಥವಾಗಿ ಎದುರಿಸಿದವರು. ತಾವು ಪ್ರಧಾನಿಯಾಗುವ ಅರ್ಹತೆ ಇದ್ದರೂ ಕೂಡ ಶಾಸ್ತಿಯವರಿಗೆ ಪ್ರಧಾನಿ ಯಾಗುವಂತೆ ನೋಡಿಕೊಂಡವರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.
ವೀರಶೈವ ಪರಂಪರೆ ಮುಂದಿನ ಪೀಳಿಗೆಗೆ ತಲುಪಿಸಿ: ಬಿಎಸ್ವೈ
ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂದ್ರಭೂಪಾಲ…, ಖಲೀಂ ಉಲ್ಲಾ, ಶಿವಲಿಂಗಮೂರ್ತಿ, ನೇತಾಜಿ, ಸ್ಟೆಲ್ಲಾ ಮಾರ್ಟಿನ್, ಎನ್.ಡಿ. ಪ್ರವೀಣ…, ಅರ್ಚನ, ಚಂದ್ರಿಕಾ ಮುಂತಾದವರಿದ್ದರು.
ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ತಂದÜರು ಎಂದು ಬೊಬ್ಬೆ ಇಡುವ ಬಿಜೆಪಿಯವರು ಈಗ ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಂದು ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿದ್ದು, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಗಾಂಧೀಜಿ ಸೇರಿದಂತೆ ಅನೇಕ ನಾಯಕರನ್ನು ಮೂಲೆ ಗುಂಪಾಗಿಸಲು ಬಿಜೆಪಿ ಹುನ್ನಾರ ನಡೆಸಿದೆ.
-ಹೆಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ