ದೇಶಕ್ಕೆ ಮತ್ತೆ ಮೋದಿ ನಾಯಕತ್ವ ಅವಶ್ಯಕ: ಚಕ್ರವರ್ತಿ ಸೂಲಿಬೆಲೆ
ಇನ್ನೂ 5 ವರ್ಷಗಳ ನರೇಂದ್ರ ಮೋದಿ ಅವರ ನಾಯಕತ್ವ ಇರಬೇಕು ಎಂದು ಸಂಕಲ್ಪ ಮಾಡಿ ಸುಮಾರು ಮೂರುವರೆ ಸಾವಿರ ಕಿ.ಮೀ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ
ದೇವರಹಿಪ್ಪರಗಿ(ಅ.07): ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮನೆ-ಮನೆಗೆ ಮುಟ್ಟಿಸುವುದು ಜನ-ಗಣ-ಮನ ಬೆಳೆಸೋಣ ರ್ಯಾಲಿಯ ಉದ್ದೇಶ. ಇನ್ನೂ 5 ವರ್ಷಗಳ ಅವರ ನಾಯಕತ್ವ ಇರಬೇಕು ಎಂದು ಸಂಕಲ್ಪ ಮಾಡಿ ಸುಮಾರು ಮೂರುವರೆ ಸಾವಿರ ಕಿ.ಮೀ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಜನ-ಗಣ-ಮನ ಬೆಳೆಸೋಣ ಕಾರ್ಯಕ್ರಮದ ಹಿನ್ನೆಯಲ್ಲಿ ಪ್ರಾರಂಭಿಸಿರುವ ಬ್ರಿಗೇಡಿನ ಬೈಕ್ ಯಾತ್ರೆ ದೇವರಹಿಪ್ಪರಗಿ ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ್ದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು. ನಂತರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಅವರು ಮಾತನಾಡಿದರು. ಪಟ್ಟಣಕ್ಕೆ ಆಗಮಿಸಿತ್ತಿದ್ದಂತೆ ಪರದೇಶಿ ಮಠದ ಪ.ಪೂ.ಶಿವಯೋಗಿ ಮಹಾಸ್ವಾಮಿಗಳು ನೇತೃತ್ವದಲ್ಲಿ ಪುಷ್ಪವೃಷ್ಟಿ ಮಾಡಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಸ್ವಾಗತ ಮಾಡಲಾಯಿತು.
ಜಾತಿಗಳ ಹೆಸರಿನಲ್ಲಿ ಹಿಂದುಗಳನ್ನು ಒಡೆಯುವ ಹುನ್ನಾರ ರಾಹುಲ್ ಗಾಂಧಿಯದ್ದು: ಚಕ್ರವರ್ತಿ ಸೂಲಿಬೆಲೆ
ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಿಬಿನಾಳ ಅವರು ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ ಅವರ ಅವಶ್ಯಕತೆಯಿದ್ದು ಎಲ್ಲರು ಜೊತೆಗೂಡಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು-ನೀವೆಲ್ಲರೂ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಸೂಲಿಬೆಲೆ ಅವರು ಮಾಡುವ ಬೈಕ್ ರ್ಯಾಲಿಗೆ ನಮ್ಮದು ಬೆಂಬಲವಿದೆ. ದೇಶ ಉಳಿದರೆ ಎಲ್ಲರೂ ಬದುಕಲೂ ಸಾಧ್ಯವೆಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಸೋಮು ಹಿರೇಮಠ, ಶಿವಪದ್ಮ ಕೊಕಟನೂರ,ಚೇತನ್ ಇಂಡಿ, ಕಲ್ಮೇಶ ಬುದ್ನಿ, ಸೋಮು ದೇವೂರ, ಪುನೀತ್ ಹಿಪ್ಪರಗಿ, ಪವನ್ ಹೊನವಾಡ, ಸಚಿನ್ ಬುದ್ನಿ, ಚಿದಾನಂದ ಕುಂಬಾರ, ಪಿಂಟು ಬಸುತ್ಕಾರ, ಶ್ರೀಶೈಲ್ ಯಂಬತನಾಳ, ಸಾಗರ ತೋಟದ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.