ರಾಜಕೀಯ ಲಾಭ ನಷ್ಟಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಬಣ್ಣಿಸಿದರು.

ಹೊಸಪೇಟೆ (ಅ.10): ರಾಜಕೀಯ ಲಾಭ ನಷ್ಟಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಬಣ್ಣಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಳ ಮಾಡುವುದು ಜೇನುಗೂಡಿಗೆ ಕಲ್ಲು ಒಡೆಯದಂತೆ ಎಂಬ ಮಾತುಗಳು ಕೇಳಿ ಬಂದಿದ್ದವು. 

ಆದರೂ ಇದ್ಯಾವುದನ್ನು ಲೆಕ್ಕಿಸದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎಸ್‌ಸಿಗೆ ಶೇ.15ರಿಂದ 17 ಮತ್ತು ಎಸ್‌ಟಿಗೆ 3ರಿಂದ 7ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಐತಿಹಾಸಿಕ ನಿರ್ಣಯಕ್ಕೆ ಸಾಕ್ಷಿಯಾದರು ಎಂದು ಕೊಂಡಾಡಿದರು. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕುರಿತು ಸಚಿವ ಶ್ರೀರಾಮುಲು ಪಾತ್ರ ದೊಡ್ಡದಿದೆ.ಅವರ ವಿರುದ್ಧ ಕೆಲವರು ಟೀಕೆ-ಟಿಪ್ಪಣಿಗಳು ನೇರವಾಗಿಯೇ ಮಾಡಿದರು.ಅವರ ಬಗ್ಗೆ ಹಾಸ್ಯ ಕೂಡ ಮಾಡಿದರು.ಟೀಕೆ ಮಾಡುವ ಜನರು ಇದೀಗ ಅವರನ್ನು ಪ್ರಶಂಸೆ ಮಾಡುವ ಸನ್ನಿವೇಶ ಬಂದಿರುವುದು ಸಂತಸ ವಿಷಯ ಎಂದರು.

ಪ್ರತಿ ಚುನಾವಣೆಯಲ್ಲಿ ಕೇಂದ್ರ ಬಿಂದುವಾಗೋ ಬಳ್ಳಾರಿ: ರಾಜಕಾರಣಿಗಳಿಗೆ ಈ ಜಿಲ್ಲೆಯ ಮೇಲೆ ವಿಶೇಷ ಪ್ರೀತಿ!

ಸುರಪುರ ಶಾಸಕ ರಾಜುಗೌಡ ಅವರು ಕೂಡ ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ಅನೇಕ ಬಾರಿ ಒತ್ತಡ ಹಾಕಿದ್ದರು ಎಂದು ಸ್ಮರಿಸಿದರು.ವಿಶ್ವಕ್ಕೆ ಮಹಿರ್ಷಿ ವಾಲ್ಮೀಕಿ ಕೊಡುಗೆ ಅಪಾರವಿದೆ. ಅವರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು. ಜಿಲ್ಲಾಧಿಕಾರಿ ಅನಿರುದ್‌ ಶ್ರವಣ್‌ ಮಾತನಾಡಿ, ಶ್ರೀಮಹರ್ಷಿ ವಾಲ್ಮೀಕಿ ಅವರು ರಚಿಸಿದಂತಹ ರಾಮಾಯಣ ಕೇವಲ ಭಾರತ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಥೈಲಾಂಡ್‌, ಇಂಡೋನೇಷಿಯಾ ಹಾಗೂ ಕಾಂಬೋಡಿಯಾ ಸೇರಿದಂತೆ ಹಲವಾರು ಕಡೆ ರಾಮಾಯಣದ ಬಗ್ಗೆ ವಿಶೇಷ ಗೌರವವಿದೆ ಎಂದರು.

ಬಿಜೆಪಿಯೆಂದರೆ ಅಭಿವೃದ್ಧಿ, ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ: ಸಚಿವ ಶ್ರೀರಾಮುಲು

ಕನ್ನಡ ವಿವಿಯ ಚರಿತ್ರೆ ವಿಭಾಗದ ಪ್ರಾಧ್ಯಾಪಕ ವಿರೂಪಾಕ್ಷಿ ಪೂಜಾರಳ್ಳಿ ವಿಶೇಷ ಉಪನ್ಯಾಸ ನೀಡಿ, ಸ್ವಾತಂತ್ರ ಸಂಗ್ರಮಕ್ಕೆ ರಾಮನ ಆದರ್ಶವೇ ಮಹಾತ್ಮ ಗಾಂಧಿಜಿಯವರಿಗೆ ಸ್ಪೂರ್ತಿಯಾಗಿತ್ತು.ರಾಮ ಆದರ್ಶ, ಆದರ್ಶ ಕುಟುಂಬ ಸಹೋದರತ್ವ, ಆದರ್ಶ ಗೆಳೆತನ ಜಗತ್ತಿಗೆ ಆದರ್ಶ ಪ್ರಾಯವಾಗಿದೆ. ಇವುಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌.ಕೆ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೋಯರ್‌ ಹರ್ಷಲ್‌, ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜ್‌ ಆನಂದರೆಡ್ಡಿ ಇನ್ನಿತರರಿದ್ದರು.