ಸುಮಾರು 50 ವಾಹನಗಳಲ್ಲಿ ಹತ್ತು ಅಧಿಕಾರಿಗಳನ್ನೊಳಗೊಂಡ ಐದು ತಂಡಗಳು ಏಕಕಾಲಕ್ಕೆ ರೇಡ್‌ ನಡೆಸಿದ್ದಾರೆ. ಅಲ್ಲದೆ, ಶೋಭಾ ಡೆವಲಪರ್ಸ್‌ ಕಚೇರಿಗಳ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಕಡತಗಳನ್ನ ಪರಿಶೀಲನೆ ನಡೆಸ್ತಿದ್ದಾರೆ ಎಂದೂ ತಿಳಿದುಬಂದಿದೆ. 

ಬೆಂಗಳೂರು (ಮಾರ್ಚ್‌ 20, 2023): ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ರೇಡ್‌ ನಡೆಸಿದ್ದಾರೆ. ಪ್ರಮುಖ ಉದ್ಯಮ ಸಂಸ್ಥೆಯಾದ ಶೋಭಾ ಡೆವಲಪರ್ಸ್ ಕೇಂದ್ರ ಕಚೇರಿ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಕಚೇರಿಗಳ ಮೇಲೆ ರೇಡ್‌ ನಡೆಸಿದ್ದಾರೆ. ಆದಾಯ ತೆರಿಗೆ ವಂಚನೆ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ನಗರದ ವೈಟ್ ಫೀಲ್ಡ್ ರಸ್ತೆಯ ಹೂಡಿ, ಬಾಣಸವಾಡಿ, ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿಯ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. 

ಬೆಂಗಳೂರು ಹಾಗೂ ಚೆನ್ನೈ ವಿಭಾಗದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಭಾ ಡೆವಲಪರ್ಸ್‌ ಕೇರಿ ಮೇಲೆ ರೇಡ್‌ ನಡೆಸಿದ್ದು, ಬೆಳಗ್ಗೆ 8 ಗಂಟೆ ಸುಮಾರಿಗೆ ಐಟಿ ಟೀಂ ತಮ್ಮ ರೇಡ್‌ ಅನ್ನು ಆರಂಭಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಸುಮಾರು 50 ವಾಹನಗಳಲ್ಲಿ ಹತ್ತು ಅಧಿಕಾರಿಗಳನ್ನೊಳಗೊಂಡ ಐದು ತಂಡಗಳು ಏಕಕಾಲಕ್ಕೆ ರೇಡ್‌ ನಡೆಸಿದ್ದಾರೆ. 

ಇದನ್ನು ಓದಿ: ಬಿಬಿಸಿ ತೆರಿಗೆ ವಂಚನೆ ಪತ್ತೆ; ಲೆಕ್ಕಪತ್ರಗಳಲ್ಲಿ ಭಾರಿ ಲೋಪದೋಷ : ಐಟಿ ಇಲಾಖೆ

ಅಲ್ಲದೆ, ಶೋಭಾ ಡೆವಲಪರ್ಸ್‌ ಕಚೇರಿಗಳ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಕಡತಗಳನ್ನ ಪರಿಶೀಲನೆ ನಡೆಸ್ತಿದ್ದಾರೆ ಎಂದೂ ತಿಳಿದುಬಂದಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಶೋಭಾ ಡೆವಲಪರ್ಸ್ ಮುಖ್ಯ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದೂ ತಿಳಿದುಬಂದಿದೆ.