Mandya : ನಾನು ಕೂಡ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾನು ಕೂಡ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ ಹಾಗೂ ಶಾಸಕ ಎಂ.ಶ್ರೀನಿವಾಸ್‌ ನಿಲುವಿಗೆ ಬದ್ಧನಾಗಿದ್ದೇನೆ ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಮಹಾಲಿಂಗೇ ಗೌಡ ಮುದ್ದನ ಘಟ್ಟ ಹೇಳಿದರು.

Im Also JDS Ticket Aspirant Says Mahalingegowda snr

 ಮಂಡ್ಯ (ಅ.30):ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾನು ಕೂಡ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ ಹಾಗೂ ಶಾಸಕ ಎಂ.ಶ್ರೀನಿವಾಸ್‌ ನಿಲುವಿಗೆ ಬದ್ಧನಾಗಿದ್ದೇನೆ ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಮಹಾಲಿಂಗೇ ಗೌಡ ಮುದ್ದನ ಘಟ್ಟ ಹೇಳಿದರು.

ತಾಲೂಕಿನ ಬಸರಾಳು ಹೋಬಳಿ ವ್ಯಾಪ್ತಿಯ ಮುತ್ತೇಗೆರೆ ಗ್ರಾಮದಲ್ಲಿ ಶನಿವಾರ ವಿಶೇಷ ಚೇತನರಿಗೆ ವ್ಹೀಲ್‌ಚೇರ್‌ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ (JDS) ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ವರಿಷ್ಠರು ನನಗೆ ಟಿಕೆಟ್‌ (Ticket)  ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷವು ಟಿಕೆಟ್‌ ಯಾರಿಗೆ ನೀಡುತ್ತದೋ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ನನ್ನ ತಂದೆ 40 ವರ್ಷ ಹಾಗೂ ನಾನು ಕೂಡ 25 ವರ್ಷ ಜೆಡಿಎಸ್‌ ಕಾರ್ಯ ತರ್ಕರಾಗಿ ದುಡಿದಿದ್ದೇವೆ. ಪಕ್ಷದಲ್ಲಿ ನನಗೆ ಹಲವು ಹುದ್ದೆಗಳು ದೊರೆತಿವೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನನ್ನ ಆರಾಧ್ಯ ದೈವ. ಕುಮಾರಣ್ಣ ಮತ್ತು ದೊಡ್ಡಗೌಡರ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ ಎಂದು ತಿಳಿಸಿದರು.

ಶಾಸಕರಾದ ಎಂ.ಶ್ರೀನಿವಾಸ್‌ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಜನರ ಸೇವೆಯಲ್ಲಿ ನಿರತನಾಗಿದ್ದೇನೆ. ಅವರ ಮಾತಿನಂತೆ ನಡೆಯುತ್ತೇನೆ. ಜೆಡಿಎಸ್‌ ಪಕ್ಷವು ನನಗೆ ಟಿಕೆಟ್‌ ನೀಡಿದರೂ ಅಥವಾ ನೀಡದಿದ್ದರೂ ಪಕ್ಷದಲ್ಲಿಯೇ ಪಕ್ಷದ ಪರವಾಗಿಯೇ ದುಡಿಯುತ್ತೇನೆ ಎಂಬ ಭರವಸೆ ನೀಡಿದರು.

ದಶಕದಿಂದಲೂ ನಾನು ಮಾಡುತ್ತಿರುವ ಸಮಾಜಸೇವೆಗೂ, ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಸಾರ್ವಜನಿಕ ಜೀವನದಲ್ಲಿ ಆಸೆ, ಆಕಾಂಕ್ಷೆ ಸಹಜ. ಅದರಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸಿದೆ. ಪಕ್ಷದ ವರಿಷ್ಠರು ಮತ್ತು ಶಾಸಕ ಎಂ.ಶ್ರೀನಿವಾಸ್‌ ನಿಲುವಿಗೆ ನಾನು ಬದ್ಧನಾಗಿದ್ದೇನೆ ಎಂದರು.

ಪಕ್ಷದಲ್ಲಿ ಸಾಕಷ್ಟು ನಿಷ್ಟಾವಂತ ಕಾರ್ಯಕರ್ತರಿದ್ದಾರೆ. ಪಕ್ಷವು ಯಾರಿಗೇ ಅವಕಾಶ ಕೊಟ್ಟರೂ ನಾವು ಅವರೊಂದಿಗೆ ನಿಲ್ಲುತ್ತೇವೆ. ಅಹಿಂದ ವರ್ಗದ ಅಭ್ಯುದಯಕ್ಕಾಗಿ ಕುಮಾರಣ್ಣನ ನೇತೃತ್ವದ ಸರಕಾರ ಬರಲೇಬೇಕು. ಇದಕ್ಕಾಗಿ 2023ಕ್ಕೆ ರೈತಪರ ನಾಯಕರಾದ ಕುಮಾರಸ್ವಾಮಿ ಅವರ ಸಿಎಂ ಆಗಬೇಕು ಎಂದು ಪ್ರತಿಪಾದಿಸಿದರು.

ನೆಮ್ಮದಿಗಾಗಿ ಸಮಾಜ ಸೇವೆ:

ಗ್ರಾಮಕ್ಕೆ ನಾನು ಈ ಹಿಂದೆ ಭೇಟಿ ನೀಡಿದ್ದಾಗ ವಿಶೇಷಚೇತನ ಚಂದ್ರಶೇಖರ್‌ ಅವರ ಪರಿಸ್ಥಿತಿ ತಿಳಿಯಿತು. ಅವರಿಗೆ ವೀಲ್‌ಚೇರ್‌ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದೇನೆ. ವಿಶೇಷಚೇತನರು ತಮಗೆ ಅಗತ್ಯವಾದ ಸಾಧನ ಸಲಕರಣೆಗಳು ಹಾಗೂ ಔಷಧಿಗಳನ್ನು ನನ್ನ ಕಚೇರಿಯಲ್ಲಿ ನೊಂದಣಿ ಮಾಡಿಸಿಕೊಂಡು ಪಡೆಯಬಹುದು ಎಂದರು.

ಮಂಡ್ಯ ತಾಲೂಕು ಮಟ್ಟದಲ್ಲಿ ಸಮಾಜ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಂತರ ಜಿಲ್ಲಾ ಮಟ್ಟಕ್ಕೆ ವಿತರಿಸಲಾಗುವುದು. ನನ್ನದು ನಿಸ್ವಾರ್ಥ ಸಮಾಜಸೇವೆ, ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ. ಬಡವರು, ದುರ್ಬಲರಿಗೆ ಅನುಕೂಲ ಆಗಲೆಂದು ಅಗತ್ಯ ಸಲಕರಣೆಗಳನ್ನು ನೀಡುತ್ತಿದ್ದೇನೆ. ಈ ಕೆಲಸದಲ್ಲಿ ನನಗೆ ನೆಮ್ಮದಿಯಿದೆ. ಜನರು ನೆಮ್ಮದಿಯಿಂದ ಇದ್ದರೆ ನನಗೆ ಸಂತೋಷವಾಗುತ್ತದೆ ಎಂದರು.

ಈ ವೇಳೆ ಮುತ್ತೇಗೆರೆ ಗ್ರಾಮದ ವಿಶೇಷ ಚೇತನರಿಗೆ ವೀಲ್ ಚೇರ್‌ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹುಳಿಗೌಡ, ಅಭಿಷೇಕ್‌, ಮುತ್ತೇಗೆರೆ ಮಹಾಲಿಂಗು, ಬಸರಾಳು ಮೋಹನ್‌, ವೆಂಕಟೇಶ್‌ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.

 ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾನು ಕೂಡ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ

, ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ ಹಾಗೂ ಶಾಸಕ ಎಂ.ಶ್ರೀನಿವಾಸ್‌ ನಿಲುವಿಗೆ ಬದ್ಧನಾಗಿದ್ದೇನೆ

ಮಂಡ್ಯ ತಾಲೂಕು ಬಸರಾಳು ಹೋಬಳಿ ವ್ಯಾಪ್ತಿಯ ಮುತ್ತೇಗೆರೆ ಗ್ರಾಮದಲ್ಲಿ ಜೆಡಿಎಸ್‌ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಹೇಳಿಕೆ

Latest Videos
Follow Us:
Download App:
  • android
  • ios