ಏಪ್ರಿಲ್ 18ಕ್ಕೆ ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆ
ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಏಪ್ರಿಲ್ 17 ರಂದು ಚುನಾವಣೆ ಮುಗಿಯಲಿದೆ. 18 ರಂದು ರಾಜಕೀಯ ಬದಲಾವಣೆ ವಿಚಾರದ ಬಗ್ಗೆ ಮಾತನಾಡುವ ಬಗ್ಗೆ ಮುಖಂಡರೋರ್ವರು ಹೇಳಿದ್ದಾರೆ.
ವಿಜಯಪುರ (ಏ.15): ಸಿಎಂ ಆಗುವ ಎಲ್ಲ ಅರ್ಹತೆಗಳು ನನ್ನಲ್ಲಿವೆ. ನಾನ್ಯಾಕೆ ಸಿಎಂ ಆಕಾಂಕ್ಷಿಯಾಗಬಾರದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿಎಂ ಆಗಲು ಉತ್ತರ ಕರ್ನಾಟಕದವರೂ ಸಮರ್ಥರಿದ್ದಾರೆ. ಹಾಗಾಗಿ ನಾನು ಸಿಎಂ ಹುದ್ದೆ ಆಕಾಂಕ್ಷಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಶೀಘ್ರ ರಾಜ್ಯದ ನಾಯಕತ್ವ ಬದಲಾವಣೆ : ಯಾರಿಗೆ ಸಿಎಂ ಪಟ್ಟ..? ...
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೈಕಮಾಂಡ್ ಅವಕಾಶ ನೀಡಿದರೆ ಕರ್ನಾಟಕದಲ್ಲಿ 150 ಸ್ಥಾನಗಳನ್ನು ಗೆಲ್ಲಿಸುತ್ತೇನೆ. ಪ್ರಧಾನಿ ಮೋದಿಗೆ ಗೌರವ ತರುವ ಕೆಲಸ ಮಾಡುತ್ತೇನೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ರೀತಿಯಲ್ಲಿ ಉತ್ತಮ ಆಡಳಿತವನ್ನು ಕರ್ನಾಟಕದಲ್ಲಿ ನೀಡುವೆ ಎಂದು ತಿಳಿಸಿದರು.
ಇದೇವೇಳೆ ಏ.17ರಂದು ಉಪ ಚುನಾವಣೆ ಮುಗಿಯುವುದರಿಂದ ಏ.18ರಂದು ನಾನು ರಾಜ್ಯ ರಾಜಕಾರಣ ಭವಿಷ್ಯ ನುಡಿಯುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು