Ramanagara: ಹೊರ ರಾಜ್ಯಕ್ಕೆ ಅಕ್ರಮ ಗೋ ಸಾಗಾಟ, ಮೂವರ ಬಂಧನ
ರಾಮನಗರ ಜಿಲ್ಲೆಯ ಜಯಪುರ ಗ್ರಾಮದ ಬಳಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನ ಪೊಲೀಸರ ವಶಕ್ಕೆ ಪಡೆದು ಮೂರು ಜನ ಆರೋಪಿಗಳ ಬಂಧಿಸಿರುವ ಘಟನೆ ನಡೆದಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ರಾಮನಗರ (ಜ.10): ರಾಮನಗರ ಜಿಲ್ಲೆಯ ಜಯಪುರ ಗ್ರಾಮದ ಬಳಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನ ಪೊಲೀಸರ ವಶಕ್ಕೆ ಪಡೆದು ಮೂರು ಜನ ಆರೋಪಿಗಳ ಬಂಧಿಸಿರುವ ಘಟನೆ ನಡೆದಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ತಾಲೂಕಿನ ಜಾಲಮಂಗಲ ರಸ್ತೆಯ ಜಯಪುರ ಬಳಿ ಸೋಮವಾರ ಸಂಜೆ 3:30ರ ಸಮಯದಲ್ಲಿ ಹಸು ಹಾಗೂ ಕರುಗಳನ್ನು ಕಟಾವು ಮಾಡಲು ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಾಗೂ ವಾಹನದ ಚಾಲಕ ಸೇರಿದಂತೆ ಮೂರು ಜನ ಆರೋಪಿಗಳನ್ನು ರಾಮನಗರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಹೊರ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ತಮಿಳುನಾಡು ಮೂಲದ ಕೃಷ್ಣಗಿರಿ ಜಿಲ್ಲೆಯ ಚಾಲಕ ಮಾದೇಶ, ರಮೇಶ, ಹಾಗೂ ನಾರಾಯಣ ಎಂಬ ಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದು ಐ ಎಂ ವಿ ಕಾಯ್ದೆ ಜೊತೆಗೆ ಕರ್ನಾಟಕ ಗೋಹತ್ಯೆ ತಡೆ ಕಾಯ್ದೆಯಡಿ ರಾಮನಗರ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿದ್ದಾರೆ.
ರಾಗಿ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಿ
ರಾಮನಗರ: ಕರ್ನಾಟಕ ಸರ್ಕಾರವು 2022-23ನೇ ಸಾಲಿನ ಮುಂಗಾರು ಋುತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಮಾರ್ಗಸೂಚಿಯನ್ವಯ ಜಿಲ್ಲೆಯ ರೈತರಿಂದ ರಾಗಿ ಮತ್ತು ಭತ್ತ ಖರೀದಿಸಲಾಗಿದ್ದು, ಖರೀದಿ ಕೇಂದ್ರಗಳನ್ನು ಶೀಘ್ರವಾಗಿ ಆರಂಭಿಸುವಂತೆ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎರಡನೇ ಜಿಲ್ಲಾ ಟಾಸ್‌್ಕ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 110 ರೈತರಿಂದ 3091 ಕ್ವಿಂಟಲ್ ಭತ್ತ ಖರೀದಿಸಲು ನೋಂದಾಯಿಸಿಕೊಳ್ಳಲಾಗಿದೆ ಹಾಗೂ 19314 ರೈತರಿಂದ 288009.50 ಕ್ವಿಂಟಲ್ ರಾಗಿ ಖರೀದಿಸಲು ನೋಂದಾಯಿಸಿಕೊಳ್ಳಲಾಗಿದೆ ಎಂದರು.
31 ಗೋವುಗಳ ದತ್ತು ಪಡೆದ ಸಚಿವ ಸುಧಾಕರ್
ಜಿಲ್ಲೆಯಲ್ಲಿ ಒಟ್ಟು ನಾಲ್ಕು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರಾಮನಗರ ಜಿಲ್ಲೆಯ ರಾಮನಗರ ಹಾಗೂ ಚನ್ನಪಟ್ಟಣ ತಾಲೂಕಿಗೆ ರಾಮನಗರ ಬಿ.ಎಂ.ರಸ್ತೆಯ ಜಾನಪದ ಲೋಕದ ಸಮೀಪವಿರುವ ಕೆಎಫ್‌ಸಿಎಸ್‌ಸಿ ನಿಗಮದ ಸಗಟು ಮಳಿಗೆ, ಕನಕಪುರ ತಾಲೂಕಿಗೆ ಕನಕಪುರದ ಮೆಳೆಕೋಟೆಯಲ್ಲಿರುವ ಕೆಎಫ್‌ಸಿಎಸ್‌ಸಿ ನಿಗಮದ ಸಗಟು ಮಳಿಗೆ ಹಾಗೂ ಮಾಗಡಿ ತಾಲೂಕಿಗೆ ಮಾಗಡಿಯ ಗುಡೆಮಾರನಹಳ್ಳಿ ರಸ್ತೆಯ ಬಾಲಾಜಿ ಗೋದಾಮಿನ ಕೆಎಫ್‌ಸಿಎಸ್‌ಸಿ ನಿಗಮದ ಸಗಟು ಮಳಿಗೆಗಳನ್ನು ತೆರೆಯಲಾಗಿದೆ. ರೈತರಿಂದ ಖರೀದಿಸಿದ ಭತ್ತವನ್ನು ಫೋರ್ಟಿಫೈಡ್ ಅಕ್ಕಿಯನ್ನಾಗಿ ಒದಗಿಸಲು ಬ್ಲೆಂಡರ್ ಮಿಷನ್ ಅನ್ನು ಖರೀದಿಸುವಂತೆ ಚನ್ನಪಟ್ಟಣ ತಾಲೂಕಿನ ರೈಸ್ ಮಿಲ್ ಮಾಲೀಕರು ತಿಳಿಸಿರುತ್ತಾರೆ ಎಂದು ರಾಮನಗರದ ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರು ಸಭೆಗೆ ಮಾಹಿತಿ ನೀಡಿದರು.
ಹೊನ್ನಾವರ: ಗೋವುಗಳನ್ನ ಸ್ವಂತ ಮಕ್ಕಳಂತೆ ಸಾಕುತ್ತಿರುವ ಸುಬ್ರಾಯ ಶೆಟ್ಟಿ ಕುಟುಂಬ..!
ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಿ.ಆರ್.ರಮ್ಯ, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.