Asianet Suvarna News Asianet Suvarna News

ಮೀನು ಪ್ರಿಯರೇ ಎಚ್ಚರ, ಸದ್ದಿಲ್ಲದೇ ನಿಮ್ಮ ಹೊಟ್ಟೆ ಸೇರ್ತಿದೆ ಕ್ಯಾಟ್‌ ಫಿಶ್‌: ಇದನ್ನ ತಿಂದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ!

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಮೀನು ಮಾರಾಟ ದಂಧೆ ನಡೆಯುತ್ತಿದೆ. ಹಣದಾಸೆಗೆ ದಲ್ಲಾಳಿಗಳು ಮಾಂಗೂರ್ ಮೀನು ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ನಿಷೇಧಿಸಿದ ಮೀನುಗಳನ್ನ ದಲ್ಲಾಳಿಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಹೋರಾಟಗಾರ ಶಿವಲಿಂಗ ಟರಕಿ ಆರೋಪಿಸಿದ್ದಾರೆ. 

Illegal sale of catfish in Bagalkot grg
Author
First Published Oct 5, 2024, 4:59 PM IST | Last Updated Oct 5, 2024, 4:59 PM IST

ಬಾಗಲಕೋಟೆ(ಅ.05):  ಮಾನವ ಜೀವ ಮತ್ತು ಪರಿಸರಕ್ಕೆ ಕುತ್ತು ತರುವ ಕ್ಯಾಟ್ ಪಿಶ್‌ಅನ್ನು ದಲ್ಲಾಲಿಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಹೋರಾಟಗಾರ ಶಿವಲಿಂಗ ಟರಕಿ ಆರೋಪಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಮೀನು ಮಾರಾಟ ದಂಧೆ ನಡೆಯುತ್ತಿದೆ. ಹಣದಾಸೆಗೆ ದಲ್ಲಾಳಿಗಳು ಮಾಂಗೂರ್ ಮೀನು ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ನಿಷೇಧಿಸಿದ ಮೀನುಗಳನ್ನ ದಲ್ಲಾಳಿಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪವಾಡ ಪುರುಷ ಲಡ್ಡು ಮುತ್ಯಾ ಟ್ರೋಲ್ ಮಾಡುವ ಮುನ್ನ ಸತ್ಯ ತಿಳ್ಕೊಳ್ಳಿ! ಫ್ಯಾನ್ ನಿಲ್ಲಿಸೋರು ಯಾರು ಗೊತ್ತಾ? 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಿದರೂ ಮೀನು ಮಾರಾಟಗಾರರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಅಕ್ರಮ ಕ್ಯಾಟ್ ಪೀಶ್ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಮೀನು ಪ್ರಿಯರ ಸಂಖ್ಯೆ ಹೆಚ್ಚಳದಿಂದ ದಲ್ಲಾಳಿಗಳು ನಿಷೇಧಿತ ಮಾಂಗೂರ್‌ ಮೀನು ಮಾರಾಟಕ್ಕೆ ಮುಂದಾಗಿದ್ದಾರೆ. 

ಮಾಂಗೂರ್‌ ಮೀನು(ಕ್ಯಾಟ್‌ ಫಿಶ್‌) ಸೇವನೆಯಿಂದ ಮಾರಕ ರೋಗಗಳ ಮೂಲಕ ಮಾನವ ಜೀವಕ್ಕೆ ಕುತ್ತು ಬರುತ್ತದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಾನೂನು ರೀತಿ ಪರಿಶೀಲಿಸಿ, ಕ್ರಮವಹಿಸಲಿ ಎಂದು ಹೋರಾಟಗಾರ ಶಿವಲಿಂಗ ಟರಕಿ ಆಗ್ರಹಿಸಿದ್ದಾರೆ. 

Latest Videos
Follow Us:
Download App:
  • android
  • ios