ಲಾಕ್‌ಡೌನ್ ನಡುವೆಯೇ ಗೋಮಾಂಸ ತಂದು ನೆರೆ ಮನೆಯವ್ರಿಗೂ ಹಂಚಿದ್ರು..!

ಜೋಯಿಡಾ ಜನತಾ ಕಾಲನಿಯಲ್ಲಿ ಗೋಮಾಂಸ ಅಕ್ರಮ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಸ್ಥಳೀಯ ಯುವಕರು ಪೊಲೀಸರಿಗೆ ದೂರು ನೀಡುವ ಮೂಲಕ ಆರೋಪಿಯನ್ನು ಬಂಧಿಸಿದ ಘಟನೆ ಶುಕ್ರವಾರ ಸಂಭವಿಸಿದೆ.

 

Illegal Beef Meat transportation

ಕಾರವಾರ(ಮೇ 09): ಜೋಯಿಡಾ ಜನತಾ ಕಾಲನಿಯಲ್ಲಿ ಗೋಮಾಂಸ ಅಕ್ರಮ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಸ್ಥಳೀಯ ಯುವಕರು ಪೊಲೀಸರಿಗೆ ದೂರು ನೀಡುವ ಮೂಲಕ ಆರೋಪಿಯನ್ನು ಬಂಧಿಸಿದ ಘಟನೆ ಶುಕ್ರವಾರ ಸಂಭವಿಸಿದೆ.

ಆರೋಪಿ ಜೋಯಿಡಾ ಜನತಾ ಕಾಲನಿಯ ಅಬ್ದುಲ್‌ ಅಲ್ಲಾವುದ್ದೀನ್‌ ಮಕಾಂದರ (35) ಎಂದು ಗುರುತಿಸಲಾಗಿದೆ. ಈತ ಕಳೆದ ಅನೇಕ ದಿನಗಳಿಂದ ದಾಂಡೇಲಿ, ಗಣೇಶಗುಡಿ ಭಾಗಗಳಿಂದ ಜೋಯಿಡಾ ಕೇಂದ್ರಕ್ಕೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಯುವಕರಾದ ಅರುಣ ಕಾಂಬ್ರೇಕರ್‌, ಸೂರಜ್‌ ಹಿರೇಗೌಡರ್‌, ಶುಭಂ ಪವಾರ, ವೈಭವ ನಾಯ್ಕ ಮುಂತಾದವರು ಈತನ ಈ ಅಕ್ರಮ ಚಟುವಟಿಕೆಯ ಮೇಲೆ ನಿಗಾ ಇಟ್ಟಿದ್ದರು.

ಕಾಫಿನಾಡಿನಲ್ಲಿ ಸುರಿಯಿತು ಧಾರಾಕಾರ ಮಳೆ

ಶುಕ್ರವಾರ ಬೆಳಗಿನಜಾವ 8.30ಕ್ಕೆ ಗೋಮಾಂಸ ತಂದಿರುವ ಸುದ್ದಿ ತಿಳಿದಿದ್ದ ಈ ಯುವಕರ ತಂಡ ಕೂಡಲೇ ಇವರ ಮನೆಗೆ ಹೋಗಿ ವಿಚಾರಿಸಿದಾಗ ಅವರ ಮನೆಯ ಪಕ್ಕದ ಎರಡು ಕುಟುಂಬಸ್ತರಿಗೆ ಗೋಮಾಂಸ ನೀಡಿದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಗೋಮಾಂಸ ವಸಪಡಿಸಿಕೊಂಡು, ಈತನ ವಿರುದ್ಧ ದೂರು ದಾಖಲಿಸಿದ ಘಟನೆ ನಡೆದಿದೆ.

ಈ ಆಪಾದಿತ ವ್ಯಕ್ತಿ ಅಬ್ದುಲ್‌ ಮಕಾಂದರ್‌ ಅಲ್ಲಿನ ನಬಿಲಾಲ್‌ (38) ಹಾಗೂ ಮಹಮದ್‌ ಸಾಬ್‌ ಜಾಫರ್‌ (42) ಇವರಿಗೂ ನೀಡಿದ್ದು, ಈ ಪ್ರಕರಣದಲ್ಲಿ ದೂರುದಾರರ ದೂರಿನಂತೆ ಇವರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ. ಸಿಆರ್‌ ನಂ. ಕಲಂ. 5, 8, 11(ಡಿ) ಪ್ರಾಣಿ ಹತ್ಯೆ, ಪ್ರಾಣಿ ಸಂರಕ್ಷಣಾ ಆಯ್ದೆ 1964 ಹಾಗೂ ಪ್ರಾಣಿ ಮಾಂಸಾ ಪ್ರತಿರಕ್ಷಣಾ ಆಯ್ದೆ 1960 ಮತ್ತು 295(ಕ) ಐಪಿಸಿ ಅಡಿ ಕೇಸ್‌ ದಾಖಲಿಸಿಕೊಂಡ ಪಿಎಸ್‌ಐ ಲಕ್ಷ್ಮಣ ಪೂಜಾರ ಮಾಂಸದ ಅಕ್ರಮ ಸಾಗಾಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios