ಬೇಲೂ​ರು:(ಮೇ.24): ರಂಜಾನ್‌ ತಿಂಗಳು ಪ್ರತಿಯೊಬ್ಬ ಮುಸ್ಲಿಮರಿಗೆ ಪವಿತ್ರ ತಿಂಗಳಾಗಿದ್ದು ಅಲ್ಹಾನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವಾಗಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ. 

ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮುಸ್ಲಿಂ ಬಾಂಧವರಿಗೆ ರಂಜಾನ್‌ ಹಬ್ಬದ ಪ್ರಯುಕ್ತ ಇಫ್ತಿಯಾರ್‌ ಕೂಟದಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಜೆಡಿಎಸ್‌ ವತಿಯಿಂದ ಇಪ್ತಿಯಾರ್‌ ಕೂಟ ಏರ್ಪಡಿಸಿದ್ದೇವೆ. ಆದರೆ ಈ ವರ್ಷ ಕೊರೋನಾ ವೈರಸ್‌ನಿಂದಾಗಿ ಯಾವುದೇ ಅದ್ಧೂರಿ ಕಾರ್ಯಕ್ರಮವಿಲ್ಲದೆ ಅತ್ಯಂತ ಸರಳವಾಗಿ, ಸಾಮಾಜಿಕ ಅಂತರದೊಂದಿಗೆ ಈ ಕೂಟ ಏರ್ಪಡಿಸಿದ್ದೇವೆ. ನಮಗೆ ಯುಗಾದಿ ಹಬ್ಬದಂತೆ ಮುಸ್ಲಿಮರಿಗೂ ಸಹ ರಂಜಾನ್‌ ಹಬ್ಬ ಪ್ರಮುಖವಾಗಿದೆ ಎಂದರು.

ರಸ್ತೆಗಿಳಿದಿವೆ KSRTC;ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಯಾಣಿಕರ ಸ್ಪಂದನೆ ಹೀಗಿದೆ

ಬಡವರಿಗೆ ದಾನ, ಧರ್ಮ ಮಾಡಿ ತಮ್ಮ ಕೈಲಾದಷ್ಟುಸಹಾಯ ಮಾಡುವ ಮೂಲಕ ಹಬ್ಬ ಆಚರಣೆ ಮಾಡುತ್ತಾರೆ. ಇದು ಕೋಮು ಸೌಹಾರ್ದತೆಯ ಸಂಕೇತವಾಗಿದ್ದು ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಆಚರಿಸಿದರೆ ಸಮಾಜದಲ್ಲಿ ಸಂತೋಷ ನೆಮ್ಮದಿ ಶಾಂತಿ ಸದಾಕಾಲ ನೆಲಸಲಿದೆ, ಹಾಗೂ ನಮ್ಮ ಪಕ್ಷದ ವತಿಯಿಂದ ಮುಸಲ್ಮಾನ್‌ ಭಾಂದವರಿಗೆ 10 ಸಾವಿರಕ್ಕು ಹೆಚ್ಚು ಬಿರಿಯಾನಿ ಕಿಟ್‌ ವಿತರಿಸಿದ್ದೇವೆ ಎಂದರು.

ಶಾಸಕ ಕೆಎಸ್‌ ಲಿಂಗೇಶ್‌ ಮಾತನಾಡಿ ಕೊರೋನಾ ಎಂಬ ಮಹಾಮಾರಿ ವೈರಸ್‌ ರೋಗ ಎಲ್ಲಾ ಕಡೆ ಹಬ್ಬುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಹಬ್ಬವನ್ನು ಮನೆಯಲ್ಲೇ ಮಾಡಬೇಕು. ನಮ್ಮ ಪಕ್ಷದ ವತಿಯಿಂದ ಅರೇಹಳ್ಳಿ, ಚೀಕನಹಳ್ಳಿ, ಗೆಂಡೇಹಳ್ಳಿ , ನಾಗೇನಹಳ್ಳಿ ಮತ್ತು ಪಟ್ಟಣದ 23 ವಾರ್ಡಗಳಲ್ಲಿ ಮುಸಲ್ಮಾನ್‌ ಭಾಂದವರಿಗೆ ರಂಜಾನ್‌ ಹಬ್ಬದ ಕಿಟ್‌ ವಿತರಿಸಿದ್ದೇವೆ. ಸಾಮಾಜಿಕ ಅಂತರದೊಂದಿಗೆ ರಂಜಾನ್‌ಆಚರಣೆ ಮಾಡಿ ಎಂದು ಹೇಳಿದರು

ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಹಾಸನ ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಎಂ ಎ ನಾಗರಾಜ್‌, ಮುಖಂಡರಾದ ,ನಟರಾಜ್‌, ಸುಭಾನ್‌, ಅಬ್ದುಲ್‌ ಖಾದರ್‌, ಫಾರೂಕ್‌, ಅಕೀಂ, ಮಂಜುನಾಥ್‌, ಜಗದೀಶ್‌ ಇತರರು ಇದ್ದ​ರು.