Asianet Suvarna News Asianet Suvarna News

ಭ್ರೂಣ ಹತ್ಯೆ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕ್ರಮ: ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್

ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ, ಲಿಂಗಪತ್ತೆ ಪ್ರಕರಣಗಳು ಕಂಡು ಬಂದಲ್ಲಿ ಅಂತಹ ವೈದ್ಯಾಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಡಿ.ಎನ್. ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

If there are cases of fetal murder, action will be taken: Family Welfare Officer Dr. Manjunath snr
Author
First Published Feb 15, 2024, 12:22 PM IST

 ತುಮಕೂರು :  ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ, ಲಿಂಗಪತ್ತೆ ಪ್ರಕರಣಗಳು ಕಂಡು ಬಂದಲ್ಲಿ ಅಂತಹ ವೈದ್ಯಾಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಡಿ.ಎನ್. ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಸಲಹಾ ಸಮಿತಿ ಸಭೆ ಪಿಸಿ & ಪಿಎನ್ ಡಿಟಿ ಕಾಯ್ದೆ ಕಾರ್ಯಕ್ರಮದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೀಕರಣಕ್ಕೆ ಬಂದಿರುವ ಸ್ಕ್ಯಾನಿಂಗ್ ಕೇಂದ್ರಗಳಿಗೆ ನೋಂದಣಿ ಪತ್ರ ನೀಡುವ ಬಗ್ಗೆ ಹೊಸದಾಗಿ ಸ್ಕ್ಯಾನಿಂಗ್ ಮಿಷನ್ ನೀಡಿರುವ ಉಪಕರಣಗಳಿಗೆ ಹಾಗೂ ಡೆಮೊ ಕೇಳುತ್ತಿರುವ ಮಿಷನ್ ಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ನವೀಕರಣಕ್ಕಾಗಿ ಬಂದಿರುವ 3 ಸೆಂಟರ್‌ಗಳಿಗೆ ಪಿಸಿ & ಪಿಎನ್‌ಡಿಟಿ ಕಾಯ್ದೆಯಡಿ ನವೀಕರಣ ಮಾಡಿಕೊಡಲು ಅನುಮತಿ ನೀಡಲಾಯಿತು. ಎಂಪಾನಲ್ ಬಂದಿರುವ ವೈದ್ಯರಿಗೆ ನ್ಯಾಯಾಲಯದ ಆದೇಶದಂತೆ 2 ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುವಂತೆ ಅನುಮತಿ ನೀಡಲಾಯಿತು.

ಹೊಸದಾಗಿ ಸ್ಕ್ಯಾನಿಂಗ್ ಯಂತ್ರ ಖರೀದಿಸುತ್ತಿರುವ ಸೆಂಟರ್‌ಗಳಿಗೆ ಹಾಗೂ ಡೆಮೋ ನೀಡಲು ಅನುಮತಿ ಕೋರಿರುವ ಸ್ಕ್ಯಾನಿಂಗ್ ಯಂತ್ರಗಳಿಗೆ ಪಿಸಿ & ಪಿಎನ್‌ಡಿಟಿ ಕಾಯ್ದೆಯನ್ವಯ ನಿಬಂಧನೆಗಳಿಗನುಗುಣವಾಗಿ ಅನುಮತಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಂತರ ಜಿಲ್ಲೆಯ ಎಲ್ಲಾ ಹಾಸ್ಪಿಟಲ್ ಸೇರಿ ಸ್ಕ್ಯಾನಿಂಗ್ ವೈದ್ಯರನ್ನು ಎಂಪಾನಲ್ ಮಾಡಲು ಬಂದಿರುವ ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲನೆ ಮಾಡಿ ನಂತರ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ಸಭೆಯಲ್ಲಿ ಮಕ್ಕಳ ತಜ್ಞೆ ಡಾ. ಮುಕ್ತಾಂಭ, ಸಮಾಜ ಸೇವಕರಾದ ಮಲ್ಲಿಕಾ ಜಿ, ಕುಮಾರ ಸ್ವಾಮಿ ಎಂ.ಎನ್., ರಾಣಿ ಚಂದ್ರಶೇಖರ್ ಹಾಜರಿದ್ದರು.

Follow Us:
Download App:
  • android
  • ios