ರಂಗಕಲೆ ಉಳಿಬೇಕಾದರೆ ಕಲೆ ಕಲಾವಿದನ ಉಸಿರಾಗಬೇಕು : ವೈ. ಎನ್. ಪುಟ್ಟಣ್ಣ

ತಾಲೂಕು ರಂಗ ಭೂಮಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಬುಧುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಲವಾರು ಕಲಾವಿದರ ಸಮ್ಮುಖದಲ್ಲಿ ಅಧ್ಯಕ್ಷ ವೈ. ಎನ್. ಪುಟ್ಟಣ್ಣ ಅವರು ವಿದ್ಯುಕ್ತ ವಾಗಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

If theater is to survive, art must become the breath of the artist: Y. N. Puttanna snr

 ಕೊರಟಗೆರೆ :  ತಾಲೂಕು ರಂಗ ಭೂಮಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಬುಧುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಲವಾರು ಕಲಾವಿದರ ಸಮ್ಮುಖದಲ್ಲಿ ಅಧ್ಯಕ್ಷ ವೈ. ಎನ್. ಪುಟ್ಟಣ್ಣ ಅವರು ವಿದ್ಯುಕ್ತ ವಾಗಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಕಲೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸುಪ್ತವಾಗಿರುತ್ತದೆ. ಸೂಕ್ತ ವೇದಿಕೆ ದೊರೆತಾಗ ಕಲೆ ಪ್ರಕಾಶಗೊಳ್ಳುತ್ತದೆ, ಕಲೆ ಕಲಾವಿದನ ಉಸಿರಾಗಬೇಕು. ಆಗ ಮಾತ್ರ ರಂಗ ಭೂಮಿ ಕಲೆ ಉಳಿಯುತ್ತದೆ. ಎಲ್ಲರು ಸೇರಿ ಒಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಪ್ರಸಾದ್, ಕಲಾವಿದರಾದ ಪ್ರಸನ್ನ, ನರಸಪ್ಪ, ತಿಮ್ಮಯ್ಯ, ಮುದ್ರೆ ಗೋವಿಂದಪ್ಪ, ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಎಸ್.ಎನ್. ಮಂಜುನಾಥ್, ಖಜಾಂಚಿ ರಂಗರಾಜು ಕೆ.ಆರ್‌., ಸಂಘಟನಾ ಕಾರ್ಯದರ್ಶಿ ಕೃಷ್ಣ ಮೂರ್ತಿ, ಪ್ರಚಾರಸಮಿತಿ ಕಾರ್ಯದರ್ಶಿ ಚಿಕ್ಕಪ್ಪಯ್ಯ ಹಾಗೂ ಸಂಘದ ನಿರ್ದೇಶಕ ಕೆ.ಆರ್‌. ಓಬಳರಾಜು, ಕುಂಭಯ್ಯ, ಸಿ. ರಂಗಶಾಮಯ್ಯ, ಕೆ. ನರೇಂದ್ರ, ರಾಮಮೂರ್ತಿ, ಎ.ಆರ್‌. ಚಿದಂಬರ್, ಎಸ್. ಚೇತನ್ ಕುಮಾರ್, ಎಂ. ನಾಗರಾಜು ಹೋಟೆಲ್, ಡಿ.ಪಿ. ನರಸಿಂಹಮೂರ್ತಿ, ಅನುಪನಹಳ್ಳಿ ನಾಗರಾಜು ಇನ್ನೂ ಹಲವಾರು ಗಣ್ಯರು ಸಮಾಜ ಸೇವಕರು ಉಪಸ್ಥಿತರಿದ್ದು ಸಂಘಕ್ಕೆ ಶುಭ ಕೋರಿದರು.

Latest Videos
Follow Us:
Download App:
  • android
  • ios