ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಪರಿಹಾರ : ತಿಮ್ಮರಾಯಪ್ಪ
ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತಾವಧಿಯ ರೈತ ಹಾಗೂ ಜನಪರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅಲೆ ವ್ಯಾಪಕವಾಗಿದ್ದು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ತಾಲೂಕಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ತನ್ನಿ. ನಿಮ್ಮ ಸಮಸ್ಯೆ ನಿವಾರಣೆಗೆ ಬದ್ಧರಾಗುವುದಾಗಿ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಭರವಸೆ ನೀಡಿದರು.
ಪಾವಗಡ : ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತಾವಧಿಯ ರೈತ ಹಾಗೂ ಜನಪರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅಲೆ ವ್ಯಾಪಕವಾಗಿದ್ದು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ತಾಲೂಕಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ತನ್ನಿ. ನಿಮ್ಮ ಸಮಸ್ಯೆ ನಿವಾರಣೆಗೆ ಬದ್ಧರಾಗುವುದಾಗಿ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಭರವಸೆ ನೀಡಿದರು.
ಶುಕ್ರವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ಮತ್ತು ಇತರೆ ವಿವಿಧ ವಲಯಗಳ ಕಾರ್ಮಿಕರನ್ನು ಜೆಡಿಎಸ್‌ಗೆ ಸೇರ್ಪಡೆಯಾಗಿಸಿ ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಅಲೆ ವ್ಯಾಪಕವಾಗಿ ಚುನಾವಣೆ ಬಳಿಕ ಸ್ಪಷ್ಟಬಹುಮತದಿಂದ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ತಾಲೂಕು ಜೆಡಿಎಸ್ ಅಧಿಕಾರಕ್ಕೆ ಬಂದ ಬಳಿಕವೇ ಹಮಾಲಿ ಹಾಗೂ ವಿವಿಧ ವಲಯದ ಕಾರ್ಮಿಕರ ಸಮಸ್ಯೆ ನಿವಾರಣೆಗೆ ಬದ್ದರಾಗಿರುವುದಾಗಿ ಹೇಳಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ,ಕಾರ್ಯಾಧ್ಯಕ್ಷ ಎನ್.ಎ.ಈರಣ್ಣ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು ಮಾತನಾಡಿದರು.
ಹಮಾಲಿ ಸಂಘದ ಹಿರಿಯರಾದ ಸುಬ್ಬರಾಯಪ್ಪ, ಓ.ನಾಗರಾಜು, ಪೆದ್ದಯ್ಯ, ಸೇವಾನಾಯ್‌್ಕ, ಬಲರಾಮನಾಯ್ಕ…, ನಾಗರಾಜ, ಗೋಪಿನಾಯ್ಕ…, ಎಚ್.ಮಂಜುನಾಥ್, ರಾಮಾಂಜಿನಪ್ಪ, ಎಂ.ಗೋವಿಂದಪ್ಪ, ಶಿವಪ್ಪ, ಶ್ರೀರಾಮನಾಯ್‌್ಕ, ರಾಮಕೃಷ್ಣನಾಯ್ಕ…, ಮಂಜುನಾಥ್, ಆರ್.ಗೋಪಾಲನಾಯ್ಕ…, ತೋಳಸನಾಯ್ಕ…, ನಾರಾಯಣನಾಯ್ಕ…, ಡಾಕ್ಯಾನಾಯ್ಕ…, ಗೋವಿಂದನಾಯ್ಕ…, ನಂದಾನಾಯ್ಕ…, ದಾಸಪ್ಪ, ಕೃಷ್ಣಾನಾಯ್ಕ…, ವೆಂಕಟೇಶ್ ನಾಯ್ಕ…, ಶಂಕರಪ್ಪ, ನಾರಾಯಣಪ್ಪ, ನಾರಾಯಣಪ್ಪ , ಲಕ್ಷ್ಮಣ, ಸಣ್ಣರಾಮಪ್ಪ, ಸುಬ್ರಾನಾಯ್ಕ…, ಸುಬ್ರಮಣಿ, ನಾಗಾರಾಜು, ಕೆಂಚಪ್ಪ,ನಾಗಾರಾಜು, ರಾಮಾನಾಯ್ಕ…, ಸುಬ್ರಮಣಿ, ವೆಂಕಟೇಶ್ ನಾಯ್ಕ…, ಬಾಬು, ನಲ್ಲಪ್ಪ, ಶ್ರೀರಾಮನಾಯ್ಕ…, ಹಾಗೂ ಬಸ್ಟ್ಯಾಂಡ್ ಹಮಾಲಿ ಸಂಘದ ಅದ್ಯಕ್ಷ ರಾಮಾಂಜಿನಪ್ಪ, ಮದ್ಲೇಟಪ್ಪ, ರಾಮಾಂಜಿನಪ್ಪ, ಬಾಬು, ಕಾಂತಪ್ಪ, ನಾಗರಾಜಪ್ಪ, ಸುರೇಶ್, ಜಗ್ಗಪ್ಪ,ನಾಗರಾಜ, ಇಮಾಂಸಾಬ…, ಅಲ್ತಾಪ್ ರಸೂಲ್ ಸಾಬ…, ಚಾಂದ್ ಬಾಷಾ, ದುಗ್ಗಪ್ಪ, ನರಸಿಂಹಪ್ಪ, ಜಿ.ಗಂಗಪ್ಪ, ಹೊನ್ನೂರಪ್ಪ, ಮದ್ಲೇಟಪ್ಪ ಇತರೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು, ಪಕ್ಷದ ತತ್ವ ಸಿದ್ಧಾಂತಗಳ ಹಿನ್ನೆ್ನಲೆಯಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿ ಅಭ್ಯರ್ಥಿಯ ಗೆಲುವಿಗೆ ಸಹಕರಿಸುವುದಾಗಿ ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಲರಾಮರೆಡ್ಡಿ, ಗೌರವಾಧ್ಯಕ್ಷ ರಾಜಶೇಖರಪ್ಪ,ಅಕ್ಕಲಪ್ಪನಾಯ್ಡ್,ಯುವ ಮುಖಂಡ ಅರಸೀಕೆರೆ ಗೋವರ್ಧನ್ ಗುಟ್ಟಹಳ್ಳಿ ಮಣಿ, ಮನುಮಹೇಶ್ ಜಿ.ಎ.ವೆಂಕಟೇಶ್, ವಸಂತ್‌ಕುಮಾರ್, ಗೋಪಾಲ್, ಕಾವಲಗೆರೆ ರಾಮಾಂಜಿನಪ್ಪ, ಕೆ.ಟಿ.ಹಳ್ಳಿ ಸೋಡಾ ಮಂಜುನಾಥ್ ಸಹಿತ ಇತರೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಬಹುಮತದೊಂದಿಗೆ ಜೆಡಿಎಸ್ ಸರ್ಕಾರ ರಚನೆ
ಯಲ್ಲಾಪುರ(ಏ.08): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಧುರೀಣ ಕುಮಾರಸ್ವಾಮಿ ನ್ಝೇ=ತ್ವದಲ್ಲಿ ಚುನಾವಣೆಯ ಹೊಸ ಗಾಳಿ ಬೀಸತೊಡಗಿದ್ದು, ಈ ಚುನಾವಣೆಯಲ್ಲಿ ನಿಶ್ಚಿತವಾಗಿ ಜನತಾದಳ ಅತ್ಯಂತ ಭಲಿಷ್ಠ ಪಕ್ಷವಾಗಿ ಹೊರ ಹೊಮ್ಮಲಿದೆ. ಅಲ್ಲದೇ ವಿಪಕ್ಷಗಳ ನೆರವು ಪಡೆದು ಸರ್ಕಾರ ರಚಿಸುವ ಪರಿಸ್ಥಿತಿ ಬಾರದೇ ಸಂಪೂರ್ಣ ಬಹುಮತ ಪಡೆದು ನಮ್ಮದೇ ಸರ್ಕಾರ ರಚನೆಯಾಗುವುದು ಖಂಡಿತ ಎಂದು ಜೆಡಿಎಸ್ ರಾಜ್ಯ ವಕ್ತಾರ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಎಂ.ಬಿ. ಸದಾಶಿವ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಪಟ್ಟಣದಲ್ಲಿ ಹಮ್ಮಿಕೊಂಡ ಸದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚರತ್ನ ಯಾತ್ರೆಯಿಂದ ಜೆಡಿಎಸ್‌ಗೆ ಅಪಾರ ಜನಬೆಂಬಲ ವ್ಯಕ್ತವಾಗುತ್ತಿದ್ದು, ಅದು ಮತವಾಗಿ ಪರಿವರ್ತಿತವಾಗುವುದರಲ್ಲಿ ಯಾವ ಅನುಮಾನಗಳೂ ಇಲ್ಲ ಎಂದ ಅವರು, ಈ ನೆಲ- ಜಲದ ಅಸ್ಮಿತೆಯನ್ನು ಉಳಿಸಿಕೊಂಡು, ಪ್ರಾದೇಶಿಕ ಹಿನ್ನಲೆಯಲ್ಲಿ ಬಡವರ, ರೈತರ ಪರವಾದ ಸರ್ಕಾರ ರಚಿಸುತ್ತೇವೆ. ಪಕ್ಷದ ಹಳೆಯ ಕಾರ್ಯಕರ್ತರು, ಮತ್ತೆ ಮಂಚೂಣಿಯಲ್ಲಿ ಬರುತ್ತಿದ್ದು ಮಿಷನ್ 123 ಗುರಿ ತಲುಪಿಯೇ ತಲುಪುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
KARNATAKA ELECTION 2023: ಹೊಸ ಚುನಾವಣೆ, ಹಳೆಯ ಕಲಿಗಳ ಕಾಳಗ
ನಮ್ಮ ಸರ್ಕಾರ ಬಂದ ನಂತರದಲ್ಲಿ ರೈತರು ಕೃಷಿಯಲ್ಲಿ ಉನ್ನತಿ ಸಾಧಿಸಲು ನೆರವಾಗುವ ನಿಟ್ಟಿನಲ್ಲಿ ರೈತರಿಗೆ .10 ಸಾವಿರ ಆರ್ಥಿಕ ನೆರವು, ಮಹಿಳೆಯರ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮತ್ತಿತರ ಉಪಯುಕ್ತ ಯೋಜನೆಗಳನ್ನು ಜನರಿಗೆ ತಲುಪಿಸಲಿದೆ. ಇದು ರೈತರಿಗೆ ಉಚಿವಾಗಿರದೇ, ಉತ್ಪಾದಕತೆಗೆ ಪೂರಕವಾಗಿ ನೀರಾವರಿ, ರಸಗೊಬ್ಬರಕ್ಕೆ ಸಹಾಯಧನವಾಗಿದೆ ಎಂದರು. ಪಕ್ಷ ಸಂಘಟನೆಗಾಗಿ ಕುಮಾರಸ್ವಾಮಿ ಅವರು ಏಪ್ರಿಲ್ ಎರಡನೇ ವಾರ ಜಿಲ್ಲೆಗೆ ಆಗಮಿಸಿ ಜೋಯಿಡಾ, ದಾಂಡೇಲಿ, ಶಿರಸಿ, ಕುಮಟಾಗಳಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.