ಬಿಜೆಪಿ ತ್ಯಜಿಸುತ್ತಾರಾ ಸಚಿವ ಗೋಪಾಲಯ್ಯ
- ಬಿಜೆಪಿ ನಮಗೆ ಸಾಕಷ್ಟು ಸ್ಥಾನಮಾನಗಳನ್ನು ನೀಡಿದೆ
- ಬಿಜೆಪಿ ಬಿಡುವ ಗಾಸಿಪ್ ಬಗ್ಗೆ ಸಚಿವ ಗೋಪಾಲಯ್ಯ ಪ್ರತಿಕ್ರಿಯೆ
ಸಕಲೇಶಪುರ(ಜು.25): ಬಿಜೆಪಿ ನಮಗೆ ಸಾಕಷ್ಟುಸ್ಥಾನಮಾನಗಳನ್ನು ನೀಡಿದೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನಮಗೆ ಎಲ್ಲ ಸ್ಥಾನಮಾನ ನೀಡಿದ್ದು ಪಕ್ಷ ಬಿಡುವ ಮಾತೆ ಇಲ್ಲ. ಮುಖ್ಯಮಂತ್ರಿ ರೇಸ್‌ನಲ್ಲಿ ನಾನಿಲ್ಲ. ಹೈಕಮಾಂಡ್ ಸಮರ್ಥ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಿದೆ.
ಮುಖ್ಯಮಂತ್ರಿ ಬದಲಾವಣೆ ಮುಹೂರ್ತವನ್ನು ಯಡಿಯೂರಪ್ಪನವರೆ ಹೇಳಿದ್ದಾರೆ. ನಮ್ಮೆಲ್ಲ ಗಮನ ನೆರೆಯತ್ತ ಇದೆ ಎಂದರು.
ಬಿಎಸ್‌ವೈ ಪರ ಇಂದು 1,000 ಸ್ವಾಮೀಜಿಗಳ ಶಕ್ತಿ ಪ್ರದರ್ಶನ!
ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಿದೆ. ಇಂದೇ ಸಿಎಂ ಯಡಿಯೂರಪ್ಪ ಅವರಿಗೆ ಹೈ ಕಮಾಂಡ್‌ನಿಂದ ಸಂದೇಶ ಒಂದು ಬರಲಿದ್ದು, ಈ ಸಂದೇಶ ಅಧರಿಸಿ ಜುಲೈ 26 ರಂದು ಸಿಎಂ ಹುದ್ದೆ ತ್ಯಜಿಸುತ್ತಾರಾ ಎನ್ನುವುದು ನಿರ್ಧಾರವಾಗಲಿದೆ.
ಇನ್ನು ಇದೇ ವೇಳೆ ವಲಸಿಗ ಮುಖಂಡರ ಬಗ್ಗೆಯೂ ಕೂಡ ಸಾಕಷ್ಟು ಚರ್ಚೆಯಾಗುತ್ತಿದ್ದುಮ, ಮುಂದೆ ಅವರ ನಿಲುವೇನು ಎನ್ನುವ ಪ್ರಶ್ನೆ ಕಾಡುತ್ತಿದೆ.