ಪ್ರಾಮಾಣಿಕವಾಗಿ ಕ್ಷೇತ್ರ ಜನರ ಋುಣ ತೀರಿಸುವ ಕೆಲಸ : ಪರಮೇಶ್ವರ್

ಕ್ಷೇತ್ರದ ಜನತೆಗೆ ನನ್ನ ಅಭಿವೃದ್ಧಿಯ ಲೆಕ್ಕವನ್ನು ಕೊಡುತ್ತೇನೆ. ವಡ್ಡಗೆರೆ ಪಂಚಾಯಿತಿಗೆ 5 ವರ್ಷಗಳಲ್ಲಿ ಸುಮಾರು 21 ಕೋಟಿ 80 ಲಕ್ಷ ರು. ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

I will Work For My Constituency People Says G Parameshwar snr

  ಕೊರಟಗೆರೆ(ಡಿ. 10):  ಕ್ಷೇತ್ರದ ಜನತೆಗೆ ನನ್ನ ಅಭಿವೃದ್ಧಿಯ ಲೆಕ್ಕವನ್ನು ಕೊಡುತ್ತೇನೆ. ವಡ್ಡಗೆರೆ ಪಂಚಾಯಿತಿಗೆ 5 ವರ್ಷಗಳಲ್ಲಿ ಸುಮಾರು 21 ಕೋಟಿ 80 ಲಕ್ಷ ರು. ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ರಂಗನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ಹಾಗೂ ಹಾಲು (Milk)  ಉತ್ಪಾದಕರ ಸಹಕಾರ ಸಂಘದ ಕಟ್ಟಡಗಳ ಶಂಕುಸ್ಥಾಪನೆ ಮಾಡಿ ಕಲ್ಕರೆ ಗ್ರಾಮದಲ್ಲಿ (Village) ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಮತ್ತೆ ಆಯ್ಕೆ ಮಾಡಿದಾಗ ರಾಜ್ಯದ ಉಪಮುಖ್ಯಮಂತ್ರಿಯಾದೆ. ಕ್ಷೇತ್ರಕ್ಕೆ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ನಮ್ಮ ಸಮ್ಮಿಶ್ರ ಸರ್ಕಾರ ಪತನವಾದರೂ ಸಹ ಕ್ಷೇತ್ರದ ಅಭಿವೃದ್ಧಿಯನ್ನು ನಿಲ್ಲಿಸದೇ ಸಾಕಷ್ಟುಶ್ರಮವಹಿಸಿದ್ದೇನೆ. ಇನ್ನು ಹಲವಾರು ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಿವೆ.ನಾನು ಮಧುಗಿರಿಯಲ್ಲಿ 20 ವರ್ಷ, ಕೊರಟಗೆರೆ ಕ್ಷೇತ್ರದಲ್ಲಿ 15 ವರ್ಷ ರಾಜಕೀಯ ಮಾಡಿ ಜನರ ಒಡನಾಟ ಹೊಂದಿದ್ದೇನೆ. ಆದರೆ ಇತ್ತೀಚೆಗೆ ರಾಜಕೀಯಕ್ಕೆ ಕೆಲವರು ಜನರ ಬಳಿ ನೃತ್ಯಗಳನ್ನು ಮಾಡಲು ಬರುತ್ತಿದ್ದಾರೆ. ಜನರು ಅದನ್ನು ತೀರ್ಮಾನಿಸುತ್ತಾರೆ. ಕ್ಷೇತ್ರದ ಜನರ ಋುಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆæ ಎಂದರು.

ತಾಲೂಕಿನ ನರಸಿಂಹಗಿರಿ ಕ್ಷೇತ್ರದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಡಾ.ಜಿ. ಪರಮೇಶ್ವರÜರಂತ ಜನಪ್ರತಿನಿಧಿಗಳ ಅತ್ಯಗತ್ಯವಿದೆ. ಮುಂದೆ ತುಮಕೂರು ಜಿಲ್ಲೆಯಲ್ಲೇ ರಾಜ್ಯದಲ್ಲಿ ಉನ್ನತ ಪದವಿಗೆ ಹೋಗುವ ಏಕೈಕ ವ್ಯಕ್ತಿಯೆಂದರೆ ಅದು ಪರಮೇಶ್ವರ್‌. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಕೆಲಸ ಮಾಡಿರುವ ಪರಮೇಶ್ವರರನ್ನು ಜನರು ಆಶೀರ್ವದಿಸಬೇಕಿದೆ ಎಂದರು.

ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪರಮೇಶ್ವರ್‌ರವರು ರಾಜ್ಯ ಕಂಡ ಸಜ್ಜನ ರಾಜಕಾರಣಿ. ಎಲ್ಲಾ ಪಕ್ಷದವರಲ್ಲೂ ಉತ್ತಮ ಬಾಂಧವ್ಯವುಳ್ಳವರು. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಭೇದ ಮಾಡದೇ ರಾಜಕೀಯವನ್ನು ಚುನಾವಣೆ ಸಮಯದಲ್ಲಿ ಮಾತ್ರ ಮಾಡುವ ವ್ಯಕ್ತಿ. ನಮ್ಮ ಸಿದ್ದರಬೆಟ್ಟಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲೂ ಪಕ್ಷ ಭೇದ ಭಾವ ಮಾಡದೇ ಅವರು ಶಾಸಕರಾಗಿದ್ದ ಕಾಲದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಕ್ಷೇತ್ರಕ್ಕೆ ಬರುವಲ್ಲಿ ಕಾರಣೀಕರ್ತರು. ಇಂತಹ ರಾಜಕಾರಣಿಗಳು ಅಪರೂಪ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್‌್ಥ  ನಾರಾಯಣ, ಗ್ರಾಪಂ ಅಧ್ಯಕ್ಷ ವಸಂತರಾಜು, ಉಪಾಧ್ಯಕ್ಷೆ ಗೌರಮ್ಮ, ಸದಸ್ಯೆ ಶಾಂತಮ್ಮ, ತುಮುಲ್‌ ನಿರ್ದೇಶಕ ಈಶ್ವರಯ್ಯ, ಪಪಂ ಸದಸ್ಯ ಎ.ಡಿ ಬಲರಾಮಯ್ಯ, ಮುಖಂಡರಾದ ಪುಟ್ಟಹರಿಯಪ್ಪ, ಸಿದ್ದಲಿಂಗಪ್ಪ, ಎಲ್‌.ರಾಜಣ್ಣ, ಗಟ್ಲಹಳ್ಳಿ ಕುಮಾರ್‌ ಸೇರಿದಂತೆ ಇತರರು ಹಾಜರಿದ್ದರು.

ಪೋಟೋ: ಕೊರಟಗೆರೆ ತಾಲೂಕಿನ ರಂಗನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಗಳ ಶಂಕುಸ್ಥಾಪನೆ ಮಾಡಿ ಶಾಸಕ ಪರಮೇಶ್ವರ್‌ ಕಲ್ಕರೆ ಗ್ರಾಮದ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು.

ಪರಮೇಶ್ವರ್‌ಗೆ ಜವಾಬ್ದಾರಿ

ಬೆಂಗಳೂರು (ನ.21): ರಾಜ್ಯ ಕಾಂಗ್ರೆಸ್‌ ಪಕ್ಷವು ಚುನಾವಣೆ ದೃಷ್ಟಿಯಿಂದ ದಲಿತರ ಮತಗಳನ್ನು ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದು, ಚಿತ್ರದುರ್ಗದಲ್ಲಿ ‘ಐಕ್ಯತಾ ಸಮಾವೇಶ’ ಹೆಸರಿನಲ್ಲಿ 2023ರ ಜನವರಿ ಮೊದಲ ವಾರ ಬೃಹತ್‌ ದಲಿತ ಸಮಾವೇಶ ನಡೆಸಲು ನಿರ್ಧಾರ ಮಾಡಿದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆ’ ವೇಳೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಜತೆಗೆ, ಈ ಕುರಿತ ಸಂಪೂರ್ಣ ಜವಾಬ್ದಾರಿಯನ್ನು ಪರಮೇಶ್ವರ್‌ ಹೆಗಲಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಸೇರಿದಂತೆ ಹಲವು ಕ್ರಮಗಳಿಂದ ಆಡಳಿತಾರೂಢ ಬಿಜೆಪಿಯು ದಲಿತ ಮತಗಳಿಗೆ ಆಪ್ತವಾಗುವ ಪ್ರಯತ್ನ ನಡೆಸುತ್ತಿದೆ. ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ಸಹ ದಲಿತ ಸಮಾವೇಶಗಳನ್ನು ನಡೆಸಿ ಹಿಂದಿನ ಸರ್ಕಾರದಲ್ಲಿ ದಲಿತ ವರ್ಗಕ್ಕೆ ನೀಡಿದ್ದ ಕಾರ್ಯಕ್ರಮಗಳನ್ನು ನೆನಪಿಸಬೇಕು ಎಂದು ಹೈಕಮಾಂಡ್‌ ಸೂಚನೆ ನೀಡಿದೆ. ಹೀಗಾಗಿ ಚಿತ್ರದುರ್ಗದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡು ದಲಿತರನ್ನು ಕಾಂಗ್ರೆಸ್‌ನತ್ತ ಸೆಳೆಯಲು ತೀರ್ಮಾನಿಸಲಾಗಿದೆ.

Latest Videos
Follow Us:
Download App:
  • android
  • ios