2024ಕ್ಕೆ ನಾನೇ ಸಿಎಂ ಎಂದ ಬಿಜೆಪಿ ಶಾಸಕ !
2024ಕ್ಕೆ ನಾನು ನಂಬರ್ 1 ಸ್ಥಾನದಲ್ಲಿ ಇರುತ್ತೇನೆ. ಆದ್ದರಿಂದ ನಾನೇ ಸಿಎಂ ಆಗುವುದುದು ಖಚಿತ ಎನ್ನುವಂತೆ ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ.
ವಿಜಯಪುರ [ಡಿ.31]: ಲಕ್ಷ್ಮಣ್ ಸವದಿ ಚುನಾವಣೆಯಲ್ಲಿ ಗೆಲ್ಲದೇ ಇದ್ದರೂ ಕೂಡ ನಸೀಬು ಸರಿ ಇದ್ದಿದ್ದರಿಂದ ಉಪ ಮುಖ್ಯಮಂತ್ರಿ ಆದರು. ಹಾಗೇ ನಾನು 2024ಕ್ಕೆ ನಾನು ನಂಬರ್ 1 ಆಗಿರುತ್ತೇನೆ ಎನ್ನುವ ಮೂಲಕ ತಾವೇ ಸಿಎಂ ಆಗುತ್ತೇನೆ ಎನ್ನುವ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಪರೋಕ್ಷ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸವದಿ ಉಪ ಮುಖ್ಯಮಂತ್ರಿ ಆಗಿದ್ದಕ್ಕೆ ಹೊಟ್ಟೆ ಕಿಚ್ಚೇನು ಇಲ್ಲ. ಆದ್ರೆ 2020ಕ್ಕೆ ನಾನೇ ನಂಬರ್ 1 ಸ್ಥಾನಕ್ಕೆ ಏರೋದು ಖಚಿತ ಎಂದಿದ್ದಾರೆ.
"
2024 - 25 ರಲ್ಲಿ ನಾನು ರಾಜ್ಯ ರಾಜಕೀಯದಲ್ಲಿ ನಂಬರ್ 1 ಸ್ಥಾನದಲ್ಲಿ ಇರುವುದರಿಂದ ನಾನೇ ಮುಖ್ಯಮಂತ್ರಿ ಆದರೆ ಇದನ್ನು ಯಾರಾದ್ರೂ ಕಸಿದುಕೊಳ್ಳಲು ಆಗುತ್ತಾ ಎಂದಿದ್ದಾರೆ ಯತ್ನಾಳ್. ನಸೀಬು ಇದ್ರೆ ಎಲ್ಲವೂ ಸಾಧ್ಯ ಎಂದರು.
ಇನ್ನು ಸಚಿವ ಸ್ಥಾನಕ್ಕಾಗಿ ಬಿಜೆಪಿ ಮುಖಂಡ ಉಮೇಶ ಕತ್ತಿ ಲಾಬಿ ನಡೆಸುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಅವರು ಮುಖ್ಯಮಂತ್ರಿ ಸುತ್ತ ಗಿರಕಿ ಹೊಡೆಯುವ ಅವಶ್ಯಕತೆ ಇಲ್ಲ. ಕತ್ತಿಗೆ ಸಚಿವ ಸ್ಥಾನ ಸಿಗೋದು ಪಕ್ಕಾ ಆಗಿದೆ. ಅಥಣಿ ಹಾಗೂ ಕಾಗವಾಡದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಚಿವ ಸ್ಥಾನ ನೀಡಲಾಗುತ್ತೆ ಎಂದು ಮುಖಂಡರು ಹೇಳಿದ್ದರು. ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಗೆದ್ದಿದ್ದು, ಕಾಗವಾಡದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಗೆದ್ದಿದ್ದು, ಕತ್ತಿ ಈ ನಿಟ್ಟಿನಲ್ಲಿ ಅವರು ಆತಂಕ ಪಡುವ ಅಗತ್ಯ ಇಲ್ಲ ಎಂದರು.
3 ಡಿಸಿಎಂಗಳನ್ನ ಕೈಬಿಡುವುದು ಒಳ್ಳೆಯದು ಎಂದು ಸಲಹೆ ಕೊಟ್ಟ ಬಿಜೆಪಿ ನಾಯಕ...
ಮಹಾ ಗಡಿ ಖ್ಯಾತೆ : ಇನ್ನು ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರವಾಗಿಯೂ ಶಾಸಕ ಯತ್ನಾಳ್ ಮಾತನಾಡಿದ್ದು, ಭಾಷೆ ಗಡಿ ವಿಚಾರ ಬಿಟ್ಟು, ಅಭಿವೃದ್ಧಿ ಗಮನಹರಿಸಲಿ. ಬೆಳಗಾವಿ ನಮ್ಮದು ಅಂದಾಗ ಬಿಡಲು ಆಗಲ್ಲ. ನಾವು ಕೈಯಲ್ಲಿ ಬಳೆ ತೊಟ್ಟು ಕುಳಿತಿಲ್ಲ. ಅವರಿಗೆ ತಾಕತ್ ಇದ್ರೆ ತೆಗೆದುಕೊಳ್ಳಲಿ. ಮತ್ತೊಬ್ಬ ನಾಯಕ ಹುಟ್ಟಿ ಬಂದರೂ ಬೆಳಗಾವಿ ಪಡೆಯಲು ಆಗಲ್ಲ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಳು ಹಾಕಿದ್ದಾರೆ.