ಎಸ್‌.ಎಂ.ಕೃಷ್ಣ ಯೋಜನೆಗಳ ಹಿಂದೆ ನನ್ನ ಪರಿಶ್ರಮವಿತ್ತು:ಡಿ.ಸಿ.ತಮ್ಮಣ್ಣ

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಯೋಜನೆಗಳ ಹಿಂದೆ ನನ್ನ ಪರಿಶ್ರಮ ಸಾಕಷ್ಟುಇತ್ತು ಎಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.

 I was Behind SM krishna  Works Says DC Thammanna snr

 ಭಾರತೀನಗರ (ನ.02): ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಯೋಜನೆಗಳ ಹಿಂದೆ ನನ್ನ ಪರಿಶ್ರಮ ಸಾಕಷ್ಟುಇತ್ತು ಎಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.

ಕೆ.ಎಂ.ದೊಡ್ಡಿಯಲ್ಲಿ ಆಯೋಜಿಸಿದ್ದ ಭಾರತೀನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಎಸ್‌.ಎಂ.ಕೃಷ್ಣ (Sm Krishna ) ಸಿಎಂ ಆಗಿದ್ದ ವೇಳೆ ಬೆಂಗಳೂರು (Bengaluru)  -ಮೈಸೂರು ಹೆದ್ದಾರಿ, ವಿಕಾಸಸೌಧ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಹಲವು ರೈತರಿಗೆ ಉಪಯುಕ್ತವಾಗುವಂತಹ ಕೆಲಸಗಳನ್ನು ಮಾಡಿಸಿದ್ದೆ ಎಂದರು.

ಯಾವುದೇ ಸರ್ಕಾರ ಬಂದರೂ ಅಂದಿನಿಂದ ಇಲ್ಲಿಯವರೆವಿಗೂ ನನ್ನೊಂದಿಗೆ ಎಲ್ಲಾ ಜನಪ್ರತಿನಿಧಿಗಳು ಬೆಂಬಲ ನೀಡುತ್ತಾ ಬಂದಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ರಸ್ತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸಹಕಾರವಾಯಿತು ಎಂದು ಹೇಳಿದರು.

ಎಸ್‌.ಎಂ.ಕೃಷ್ಣ ಅವರಿಗೆ ರಾಜ್ಯದಲ್ಲಿ ಸ್ತ್ರೀಶಕ್ತಿ ಸಂಘವನ್ನು ತೆರೆಯಲು ನಾನು ಸಲಹೆ ನೀಡಿದ್ದೆ. ಅದರಂತೆ ಈ ಯೋಜನೆಯ ಜವಾಬ್ದಾರಿಯನ್ನು ಮೋಟಮ್ಮ ಅವರಿಗೆ ನೀಡಿದ್ದರು. ಇದು ರಾಜ್ಯದಲ್ಲಿ ಯಶಸ್ವಿಗೊಂಡಿತು. ಮಹಿಳೆಯರಿಗೆ ಮೀಸಲಾತಿಯನ್ನು ಮಾಜಿ ಪ್ರಧಾನಿ ಎಚ….ಡಿ.ದೇವೇಗೌಡರು ಜಾರಿಗೆ ತಂದರು. ಇದರಿಂದ ಮಹಿಳೆಯರಿಗೆ ಎಲ್ಲಾ ಕ್ಷೇತ್ರ ದಲ್ಲೂ ಮೀಸಲಾತಿ ಸಿಕ್ಕಿದೆ. ಇದರಿಂದ ಸ್ಥಳೀಯ ಚುನಾವಣೆಗಳಲ್ಲೂ ಸ್ಪರ್ಧಿಸುವಂಥ ಅವಕಾಶಗಳು ಮಹಿಳೆಯರಿಗೆ ದೊರೆತಿದೆ ಎಂದು ತಿಳಿಸಿದರು.

ಜೆಡಿಎಸ್‌ ಮುಖಂಡ ಹಾಗಲಹಳ್ಳಿ ಪ್ರಕಾಶ್‌ ಮಾತನಾಡಿ, ಡಿ.ಸಿ.ತಮ್ಮಣ್ಣ ಫ್ಲೆಕ್ಸ್‌ ಹಾಕಿಸಿಕೊಂಡು ರಾಜಕಾರಣ ಮಾಡಲ್ಲ. ಕ್ಷೇತ್ರದ ಪ್ರತಿಯೊಂದು ಕಂಬಗಳಲ್ಲಿ ಫ್ಲೆಕ್ಸ್‌ನಲ್ಲಿ ಫೋಟೋ ಹಾಕಿಸಿಕೊಂಡು ಕೆಲವರು ನಾಯಕರಾಗಲು ಹೊರಟ್ಟಿದ್ದಾರೆ ಎಂದು ವಿಪಕ್ಷದ ಮುಖಂಡರನ್ನು ಟೀಕಿಸಿದರು.

ಇಳಿ ವಯಸ್ಸಿನಲ್ಲೂ ಕ್ಷೇತ್ರದ ಜನರ ಸೇವೆಗಾಗಿ ನಿಂತಿದ್ದಾರೆ. ತಮ್ಮಣ್ಣ ಅವರನ್ನು ಕೈ ಬಲಪಡಿಸಿದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಸಬಹುದು. ಕ್ಷೇತ್ರದ ಬಗ್ಗೆ ಸದಾ ಚಿಂತನೆ ಮಾಡುವಂತಹ ಶಾಸಕರಿದ್ದರೆ ಅದು ಮದ್ದೂರು ಕ್ಷೇತ್ರದ ಶಾಸಕರು ಮಾತ್ರ ಎಂದು ಹೇಳಿದರು.

ಈ ವೇಳೆ ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಪ್ರಧಾನ ಕಾರ್ಯದರ್ಶಿ ಸ್ವಾಮೀಗೌಡ, ಚಿಕ್ಕತಿಮ್ಮೇಗೌಡ, ಎಚ್‌.ಎಂ.ಮರಿ ಮಾದೇಗೌಡ, ತಾಪಂ ಮಾಜಿ ಅಧ್ಯಕ್ಷ ಶಿವಶಂಕರ್‌ ಸದಸ್ಯರಾದ ಪುಟ್ಟಸ್ವಾಮಿ,ಮಧು, ಅಣ್ಣೂರು ಶಂಕರ್‌, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್‌, ಯುವಮುಖಂಡ ನಗರಕೆರೆ ಸಂದೀಪ್‌, ಹಾಗಲಹಳ್ಳಿ ಜೋಗಪ್ಪ, ಆಸರೆ ಸೇವಾಟ್ರಸ್ಟ… ಅಧ್ಯಕ್ಷ ರಘು, ಅಣ್ಣೂರು ಯೋಗೇಂದ್ರ, ಗುರುದೇವರಹಳ್ಳಿ ಅರವಿಂದ… ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರೈತರ 45 ಸಾವಿರ ಕೋಟಿ ರು.ಸಾಲಮನ್ನಾ ಎಚ್‌ಡಿಕೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುತ್ತೇವೆಂದು ಘೋಷಣೆ ಮಾಡಿದ್ದರು. ಆದರೂ ಬಹುಮತದಿಂದ ಬರಲಿಲ್ಲ. ಆದರೆ, ಮಾತಿಗೆ ತಪ್ಪಬಾರದೆಂದು ಸಮ್ಮಿಶ್ರ ಸರ್ಕಾರದಲ್ಲೇ ಕುಮಾರಸ್ವಾಮಿ ಮಾತು ಕೊಟ್ಟಂತೆ ರೈತರ 45 ಸಾವಿರ ಕೋಟಿ ರು.ಸಾಲಮನ್ನಾ ಮಾಡಿದರು. ಇದೀಗ ಜೆಡಿಎಸ್‌ ಪಂಚರತ್ನ ಯೋಜನೆಯನ್ನು ಜಾರಿಗೆ ತಂದಿದೆ. 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಮತ್ತಷ್ಟುಅನುಕೂಲವಾಗಲಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಯೋಜನೆಗಳ ಹಿಂದೆ ನನ್ನ ಪರಿಶ್ರಮ ಸಾಕಷ್ಟುಇತ್ತು ಎಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.

  ಎಸ್‌.ಎಂ.ಕೃಷ್ಣ ಸಿಎಂ ಆಗಿದ್ದ ವೇಳೆ ಬೆಂಗಳೂರು -ಮೈಸೂರು ಹೆದ್ದಾರಿ, ವಿಕಾಸಸೌಧ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಹಲವು ರೈತರಿಗೆ ಉಪಯುಕ್ತವಾಗುವಂತಹ ಕೆಲಸಗಳನ್ನು ಮಾಡಿಸಿದ್ದೆ

ಇಳಿ ವಯಸ್ಸಿನಲ್ಲೂ ಕ್ಷೇತ್ರದ ಜನರ ಸೇವೆಗಾಗಿ ನಿಂತಿದ್ದಾರೆ. ತಮ್ಮಣ್ಣ ಅವರನ್ನು ಕೈ ಬಲಪಡಿಸಿದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಸಬಹುದು

Latest Videos
Follow Us:
Download App:
  • android
  • ios