Asianet Suvarna News Asianet Suvarna News

ಪಾಕ್‌ಗೆ ಹೋಗಿ ಭಾರತ್‌ ಮಾತಾ ಕೀ ಜೈ ಎಂದಿದ್ರಂತೆ ಓವೈಸಿ..!

ಭಾರತ್‌ ಮಾತಾ ಕೀ ಜೈ ಎಂದಿದ್ದೆ. ಈ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಒವೈಸಿ ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ. ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಮೈದಾನದಲ್ಲಿ ‘ಹಿಂದೂ ಮುಸ್ಲಿಂ ಸಿಖ್‌ ಇಸಾಯಿ ಫೆಡರೇಷನ್‌’ ನೇತೃತ್ವದಲ್ಲಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರೋಧಿಸಿ ನಡೆದ ಬೃಹತ್‌ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದ್ದಾರೆ.

 

I said Bharath matha ki jai in pakisthan say Asaduddin Owaisi
Author
Bangalore, First Published Feb 21, 2020, 8:15 AM IST

ಬೆಂಗಳೂರು(ಫೆ.21): ಭಾರತ್‌ ಮಾತಾ ಕೀ ಜೈ ಎಂದಿದ್ದೆ. ಈ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಒವೈಸಿ ಪ್ರಶ್ನಿಸಿದ್ದಾರೆ. ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಮೈದಾನದಲ್ಲಿ ‘ಹಿಂದೂ ಮುಸ್ಲಿಂ ಸಿಖ್‌ ಇಸಾಯಿ ಫೆಡರೇಷನ್‌’ ನೇತೃತ್ವದಲ್ಲಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರೋಧಿಸಿ ನಡೆದ ಬೃಹತ್‌ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದ್ದಾರೆ.

2013ನೇ ಸಾಲಿನಲ್ಲಿ ಬಿಜೆಪಿ ಸಂಸದರು ಸೇರಿದಂತೆ ಪ್ರಮುಖರ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆವು. ಅಲ್ಲಿನ ಮಾಧ್ಯಮಗಳು ಭಾರತದ ವಿರುದ್ಧ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದವು. ಆಗ, ನಾನು ನೇರವಾಗಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೋಗಿ, ಅಲ್ಲಿನ ಮೌಲ್ವಿಯೊಂದಿಗೆ ಭಾರತದಲ್ಲಿ ಏಕತೆ, ಸೌಹಾರ್ದತೆ ಮತ್ತು ಸಂವಿಧಾನದ ಆಶಯಗಳ ಬಗ್ಗೆ ಹೇಳಿದ್ದೇ. ಅಷ್ಟೇ ಅಲ್ಲದೆ, ಅವರ ಮುಂದೆಯೇ ಭಾರತ್‌ ಮಾತಾ ಕೀ ಜೈ ಎಂದಿದ್ದೆ. ಈ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಒವೈಸಿ ಈ ಸಂದರ್ಭದಲ್ಲಿ ಪ್ರಶ್ನಿಸಿದರು.

‘ಜೈಲುಗಳೇ ಇಲ್ಲ!’

ದೇಶದಲ್ಲಿ ಹೋರಾಟಗಾರರನ್ನು ಬಂಧಿಸುವ ಕಾರ್ಯ ನಡೆಯುತ್ತಿದೆ. ಆದರೆ, ನಾವು ಒಗ್ಗೂಡಿ ಬೀದಿಗಿಳಿದರೆ, ನಮ್ಮನ್ನು ಬಂಧಿಸಿಡಲು ಜೈಲುಗಳೇ ಇಲ್ಲ. ದೇಶದಲ್ಲಿರುವ ಜೈಲುಗಳಲ್ಲಿ ಬರೀ 3 ಲಕ್ಷ ಮಂದಿಯನ್ನಿಡಲು ಮಾತ್ರ ಸಾಧ್ಯವಿದೆ.

ಸಾಫ್ಟ್‌ವೇರ್‌ ಕಂಪನಿಗಳಿಗೆ ಹಂದಿ ಜ್ವರ ಭೀತಿ! ಆಫೀಸ್‌ಗೆ ಬೀಗ

ಬೆಂಗಳೂರಿನ ಜನರು ಪ್ರತಿಭಟಿಸಿದರೆ ಅವರನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಡಬೇಕು. ಆಗ ಇಲ್ಲಿ ಐಪಿಎಲ್‌ ಪಂದ್ಯಗಳೇ ನಡೆಯುವುದಿಲ್ಲ ಎಂದು ಓವೈಸಿ ವ್ಯಂಗ್ಯವಾಡಿದರು.

‘ಸಂವಿಧಾನ ವಿರೋಧಿಗಳ ನಾಲಿಗೆ ಕತ್ತರಿಸಿ’

ಸಂವಿಧಾನ ವಿರೋಧಿ ಹೇಳಿಕೆ ನೀಡುವ ಹಾಗೂ ಸಂವಿಧಾನ ನಾಶ ಮಾಡಲು ಮುಂದಾಗುವವರ ನಾಲಿಗೆ ಕತ್ತರಿಸಿದರೆ 1 ಕೋಟಿ ರೂ.ಬಹುಮಾನ ನೀಡುವುದಾಗಿ 2017ರಲ್ಲೇ ಘೋಷಣೆ ಮಾಡಿದ್ದೇನೆ ಎಂದು ದಲಿತ ಮುಖಂಡ ಗುರುಶಾಂತ ಪಟ್ಟೇದಾರ್‌ ಹೇಳಿದ್ದಾರೆ.

Follow Us:
Download App:
  • android
  • ios