ರೈತರು ಏನು ಬೆಳೆದರೂ ಅದಕ್ಕೆ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಎಲ್ಲಾ ನ್ಯೂನತೆಯನ್ನ ಸರಿಪಡಿಸುವ ನಾಯಕ ಬೇಕಾಗಿದೆ ಎಂದು ನೊಣವಿನಕೆರೆಯ ಕರಿವೃಷಭ ದೇಶಿಕೇಂದ್ರ ಸ್ವಾಮಿಗಳು ಹೇಳಿದರು.

ತುಮಕೂರು (ಮೇ.15): ರೈತರು ಏನು ಬೆಳೆದರೂ ಅದಕ್ಕೆ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಎಲ್ಲಾ ನ್ಯೂನತೆಯನ್ನ ಸರಿಪಡಿಸುವ ನಾಯಕ ಬೇಕಾಗಿದೆ ಎಂದು ನೊಣವಿನಕೆರೆಯ ಕರಿವೃಷಭ ದೇಶಿಕೇಂದ್ರ ಸ್ವಾಮಿಗಳು ಹೇಳಿದರು.

ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭೇಟಿ ಸಂಬಂಧ ಮಾತನಾಡಿದರು. ಅವರ ಯೋಗಾಯೋಗ ಏನಿರುತ್ತೆ ಅದನ್ನ ಅವರು ಪಡೆಯುತ್ತಾರೆ. ಅವರೇ ಸಿಎಂ ಆಗುತ್ತಾರೆ ಅಂತಾ ಹೇಳೋಕೆ ನಾವೇನು ಭಗವಂತನಲ್ಲ. ಸಿಎಂ ಆಗಲಿ ಅಂತಾ ಆಶೀರ್ವಾದ ಮಾಡೋಕೆ ನಾವೇನು ಹೈಕಮಾಂಡ್‌ ಅಲ್ಲ. ಶ್ರೀ ಮಠ ಸರ್ವೆ ಜನೋ ಸುಖಿನೋ ಭವಂತು ಅನ್ನುತ್ತೆ. ದೇಶಕ್ಕೆ ಒಳ್ಳೆಯದನ್ನ ಮಾಡಲಿ ಎಂದರು.

ಅಜ್ಜಯ್ಯರ ಆಶೀರ್ವಾದವೇ ನನ್ನ ಸಾಧನೆಗೆ ಕಾರಣ:ಡಿಕೆಶಿ

ಮಾಜಿ ಸಚಿವ, ಬಿಜೆಪಿ ಮುಖಂಡ ಸೋಮಣ್ಣ ಕೂಡ ಶ್ರೀ ಮಠದ ಮಗನೆ. ಶಿವಕುಮಾರ್‌ ಕೂಡ ಶ್ರೀ ಮಠದ ಮಗನೆ. ಸೋಮಣ್ಣ ಎರಡೂ ಕಡೆಯಲ್ಲೂ ಸೋತಿದ್ದಾರೆ. ಅಂದ ಮಾತ್ರಕ್ಕೆ ಸ್ವಾಮಿಗಳು ಸೋಮಣ್ಣಗೆ ಸರಿಯಾಗಿ ಆಶೀರ್ವಾದ ಮಾಡಲಿಲ್ಲ ಅಂತಾ ಅರ್ಥನಾ ಎಂದು ಸ್ವಾಮಿಗಳು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ದೇನೇವಾಲಾ ಭಗವಾನ್‌ ಹೇ ಎಂದರು. ಜನರ ಅಪೇಕ್ಷೆಯಂತೆ ಬಹುಮತದ ಸರ್ಕಾರ ಬಂದಿದೆ. ಈಗ ಯಾರು ಸಿಎಂ ಆಗಬೇಕು ಎಂದು ಹೈಕಮಾಂಡನವರು ನಿರ್ಧಾರ ಮಾಡುತ್ತಾರೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಡಿಕೆ​ಶಿಗೆ ಸಿಎಂ ಹುದ್ದೆ ನೀಡ​ಬೇಕು: ಚೂಡ​ಲಿಂಗೇ​ಶ್ವ​ರ​ಯ್ಯ

-ರಾಮನಗರ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ವರಿ​ಷ್ಠರು ರಾಜ್ಯದ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ರಾಮನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚೂಡಲಿಂಗೇಶ್ವರಯ್ಯ ಒತ್ತಾ​ಯಿ​ಸಿ​ದರು.

ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಠಾವಂತರಾಗಿ ದುಡಿದು ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವ​ಕು​ಮಾರ್‌ ಕನಕಪುರ ಕ್ಷೇತ್ರ ಪ್ರತಿನಿಧಿ​ಸಿ ಜಿಲ್ಲೆ ಮತ್ತು ತಾಲೂಕಿಗೆ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿ​ದ್ದಾರೆ. ಪಕ್ಷಕ್ಕಾಗಿ ಹಗ​ಲಿ​ರುಳು ಶ್ರಮಿ​ಸು​ತ್ತಿ​ರುವ ಅವ​ರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಹೇಳಿದರು.

ಶಿವ​ಕು​ಮಾರ್‌ ತಮ್ಮ ಅಧಿ​ಕಾ​ರ​ವ​ಧಿಯಲ್ಲಿ ಇಂಧನ ಸಚಿ​ವ​ರಾಗಿ ರಾಜ್ಯದ ರೈತರಿಗೆ ನೆರವಾಗುವ ದೃಷ್ಟಿ​ಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಸಹಕಾರಿಯಾದವರು. ಕೆಪಿ​ಸಿಸಿ ಅಧ್ಯ​ಕ್ಷ​ರಾದ ಎರಡು ವರ್ಷದಲ್ಲೇ ಪಕ್ಷವನ್ನು ಉತ್ತಮವಾಗಿ ಸಂಘಟಿಸಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 135 ಸ್ಥಾನದಲ್ಲಿ ನಿಚ್ಚಳ ಬಹುಮತದೊಂದಿಗೆ ಅ​ಧಿಕಾರದ ಗದ್ದುಗೆ ಏರುವಂತೆ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮುನ್ನಡೆ ಸಾ​ದಿಸಲು ಮೇಕೆದಾಟು ಹೋರಾಟ, ಬಿಜೆಪಿ ಬೆಲೆ ಏರಿಕೆ ವಿರುದ್ಧ ನಿರಂತರ ಹೋರಾಟ, ಭಾರತ್‌ ಜೋಡೋ ಯಾತ್ರೆ, ಪ್ರಜಾಧ್ವನಿ ಯಾತ್ರೆ ಸಂಘಟಿಸಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷದ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ಹೇಳಿ​ದ​ರು.

DK Shivakumar Birthday: ಅದ್ದೂರಿಯಾಗಿ ಡಿಕೆಶಿ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ನಾಯಕರು!

ಎಲ್ಲಾ ವರ್ಗದ ಜನರಿಗೆ ಹತ್ತಿರವಾಗಿ ಉತ್ತಮ ರಾಜಕೀಯ ಪಟುವಾಗಿ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ ಈ ನಾಡಿನ ಮುಖ್ಯಮಂತ್ರಿಯಾಗಬೇಕು. ಅವರನ್ನು ಮುಖ್ಯಮಂತ್ರಿ ಪದವಿಯಿಂದ ವಂಚಿತರಾಗುವಂತೆ ಮಾಡಬಾರದು ಎಂಬುದು ಒಕ್ಕಲಿಗ ಸಮಾಜದ ಬೇಡಿಕೆಯಾಗಿದೆ. ಕೂಡಲೇ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಉತ್ತಮ ಸರ್ಕಾರದ ಆಡಳಿತ ನೀಡುವ ಸಲುವಾಗಿ ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರಕಿಸಿಕೊಡಬೇಕು ಎಂಬುದು ಸಮಾಜದ ಆಗ್ರಹವಾಗಿದೆ ಎಂದು ಹೇಳಿದರು.