ಮಂಗಳೂರು (ಮಾ.24):  ಮಂಗಳೂರಿನ ಬಿಲ್ಡರ್ ಹಾಗೂ ಉದ್ಯಮಿಯನ್ನು ಅಪಹರಿಸಿ ಮುಸ್ಲಿಂ ಯುವತಿ ಜೊತೆ ಮದುವೆ  ಮಾಡಲಾಗಿದೆ ಎಂದು ಆರೋಪಿಸಿ ಆತನ ಪತ್ನಿಗೆ ದೂರು ನೀಡಿದ್ದಾರೆ. 

ಪಾಂಡೇಶ್ವರ ಠಾಣೆಗೆ ಬೋಳಾರದ ಯಶೋಧಾ (54) ಎಂಬಾಕೆ ದೂರು ನೀಡಿದ್ದಾರೆ.  ತನ್ನ ಪತಿ ಗಂಗಾಧರ (62) ಎಂಬವರನ್ನ ಅಪಹರಿಸಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ಬಿಲ್ಡರ್ ಮತ್ತು ಅಲೂಗಡ್ಡೆ, ಈರುಳ್ಳಿ ಹೋಲ್ ಸೇಲ್ ವ್ಯಾಪಾರಿಯಾಗಿದ್ದ ಗಂಗಾಧರ ಅವರನ್ನು ಮತಾಂತರ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ವ್ಯವಹಾರದ ಹಿನ್ನೆಲೆ ಜನವರಿಯಲ್ಲಿ ‌ಮನೆಯಿಂದ ಹೊರ ಹೋಗಿದ್ದ ಗಂಗಾಧರ  ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದರು.  ಆದರೆ ವ್ಯವಹಾರ ನಿಮಿತ್ತ ಹೋದ ಕಾರಣ ನಾಪತ್ತೆ ದೂರು ನೀಡಿರಲಿಲ್ಲ. 

ಗರ್ಲ್‌ಫ್ರೆಂಡ್‌ ಜತೆ ಮಾತನಾಡಿದ್ದಕ್ಕೆ ಹೀಗ್‌ ಮಾಡೋದಾ..!

ಸದ್ಯ ಮುಸ್ಲಿಂ ಯುವತಿ ಜೊತೆ ಗಂಗಾಧರ್ ಗೆ ವಿವಾಹವಾಗಿರುವ ಮಾಹಿತಿ ಲಭ್ಯವಾಗಿದ್ದು ವಿವಾಹದ ಫೋಟೋಗಳ ಸಹಿತ ಗಂಗಾಧರ್ ಸ್ನೇಹಿತ ಪತ್ನಿ ಯಶೋಧಾಗೆ ಮಾಹಿತಿ ನೀಡಿದ್ದಾರೆ. 

ದುಷ್ಕರ್ಮಿಗಳು ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿ ಮತಾಂತರ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.  ಅಲ್ಲದೇ ಮತಾಂತರದ ಬಳಿಕ ಮುಸ್ಲಿಂ ಯುವತಿ ಜೊತೆ ಬಲವಂತದ ಮದುವೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಮದುವೆ ಫೋಟೋಗಳ ಸಹಿತ ಪಾಂಡೇಶ್ವರ ಠಾಣೆಗೆ ಯಶೋಧಾ ದೂರು ನೀಡಿದ್ದು, ಪತಿಯನ್ನ ಪತ್ತೆ ಮಾಡಿ‌ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪ್ರಕರಣದ ವಿಶೇಷ ತನಿಖೆಗೆ ವಿಶ್ವಹಿಂದೂ ಪರಿಷತ್ ಬಜರಂಗದಳವೂ ಆಗ್ರಹಿಸಿದ್ದು,  ಸದ್ಯ ಪತ್ನಿ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.