'ಕೊರೋನಾ ಹರಡಲು ಪ್ರಧಾನಿ ನರೇಂದ್ರ ಮೋದಿ ಕಾರಣ'

ವಿದೇಶದಲ್ಲಿ ಇದ್ದವರನ್ನು ಭಾರತಕ್ಕೆ ಕರೆತರುವಲ್ಲಿ ಪ್ರಧಾನಮಂತ್ರಿಗಳು ಹಾಗೂ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡದೆ ದೇಶದೊಳಗೆ ಬಿಟ್ಟಿರುವುದೇ ಕೋವಿಡ್‌-19 ಹರಡುವುದಕ್ಕೆ ಕಾರಣ| ಪ್ರಧಾನ ಮಂತ್ರಿಗಳು ಕಳೆದ ಮೂರು ತಿಂಗಳ ಹಿಂದೆ ಲಾಕ್‌ಡೌನ್‌, ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಂತೆ ಸುರಕ್ಷತಾ ಸಂದೇಶವನ್ನು ಜನತೆ ಪಾಲಿಸುತ್ತಿದ್ದಾರೆ|

Hunagund Former MLA Vijayanand Kashappannavar Says Coronavirus

ಇಳಕಲ್ಲ(ಮೇ.20): ದೇಶದಲ್ಲಿ ಮಹಾಮಾರಿ ಕೊರೋನಾ ಹರಡುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಕಾರಣ ಎಂದು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದ್ದಾರೆ. 

ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ಇದ್ದವರನ್ನು ಭಾರತಕ್ಕೆ ಕರೆತರುವಲ್ಲಿ ಪ್ರಧಾನಮಂತ್ರಿಗಳು ಹಾಗೂ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡದೆ ದೇಶದೊಳಗೆ ಬಿಟ್ಟಿರುವುದೇ ಕೋವಿಡ್‌-19 ಹರಡುವುದಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ. 

ಪ್ರಧಾನ ಮಂತ್ರಿಗಳು ಕಳೆದ ಮೂರು ತಿಂಗಳ ಹಿಂದೆ ಲಾಕ್‌ಡೌನ್‌, ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಂತೆ ಸುರಕ್ಷತಾ ಸಂದೇಶವನ್ನು ಜನತೆ ಪಾಲಿಸುತ್ತಿದ್ದಾರೆ. ಆದರೂ ಕೊರೋನಾ ನಿಯಂತ್ರಣಕ್ಕೆ ಬಾರದೆ ಇರುವುದು ವಿಷಾದನೀಯ ಸಂಗತಿ ಎಂದರು.

ಹಸಿದವರ ಪಾಲಿಗೆ ಅನ್ನದಾತ, ಕಷ್ಟದಲ್ಲಿರುವವರ ಆಪತ್ಬಾಂಧವ ಡಿಸಿಎಂ ಕಾರಜೋಳ.!

ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯ ಹೆಸರಿನಲ್ಲಿ ಮುಖ್ಯಮಂತ್ರಿಗಳು, ಕೆಲವು ಶಾಸಕರು ಹಾಗೂ ನಮ್ಮ ಮತಕ್ಷೇತ್ರದ ಶಾಸಕರು, ಅವರ ಹಿಂಬಾಲಕರು ಬೀದಿ ಬೀದಿ ಅಲೆದಾಡಿ ಚಂದಾ ಎತ್ತುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜನತೆ ಬದುಕುವುದಕ್ಕೆ ಏನು ಬೇಕು ಎಂಬುವುದನ್ನು ಅರಿತು ಸೂಕ್ತ ಮಾರ್ಗದರ್ಶನ ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ. ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ಮತ್ತು ಸರ್ಕಾರಿ ಅಧಿಕಾರಿಗಳ ಸಭೆಯನ್ನು ಕರೆದು ಲಾಕ್‌ಡೌನ್‌ ಸಡಿಲುಗೊಳಿಸಿದ್ದು ಇಂದು ಒಂದೇ 127ಕ್ಕೂ ಹೆಚ್ಚು ಕೊರೋನಾ ರೋಗ ಉಲ್ಬಣಗೊಳ್ಳುವುದಕ್ಕೆ ಕಾರಣವಾಗಿದೆ. ಲಾಕ್‌ಡೌನ್‌ ಅನ್ನು ಸಡಿಲು ಬಿಡಬಾರದಾಗಿತ್ತು. ಅನಾಥ, ಬಡಜನರಿಗೆ ಸಹಾಯ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ ಎಂದರು.

ಗೋಷ್ಠಿಯಲ್ಲಿ ಅರಣ ಬಿಜ್ಜಲ, ಸುರೇಶ ಜಂಗ್ಲಿ, ಮೌಲಾ ಬಂಡಿವಡ್ಡರ, ಖಾಜೆಹುಸೇನ ಸೋನಾ, ಅಮೃತ ಬಿಜ್ಜಲ, ಶ್ರೀನಿವಾಸ ಜೋಶಿ ಹಾಗೂ ಇತರರು ಉಪಸ್ಥಿತರಿದ್ದರು.

ಉನ್ನತಮಟ್ಟದ ಅಧಿಕಾರಿಗಳಿಗೆ ದೂರು

ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ ಹಾಗೂ ಅವರ ಹಿಂಬಾಲಕರು ಅಕ್ರಮ ಮರಳುಗಾರಿಕೆಯನ್ನು ಹಾಗೂ ಕ್ಲಬ್‌ಗಳನ್ನು ನಡೆಸುವುದಕ್ಕೆ ಪೊಲೀಸ್‌ ಇಲಾಖೆಯ ಕೈವಾಡ ಇದೆ. ಇದರ ಬಗ್ಗೆ ಉನ್ನತಮಟ್ಟದ ಅಧಿಕಾರಿಗಳಿಗೆ ದೂರೊಂದನ್ನು ಸಲ್ಲಿಸಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಮತ್ತು ಕೆಲವು ಶಾಸಕರು ಚಂದಾ ಹಣವನ್ನು ಎತ್ತುವುದನ್ನು ಕೈಬಿಡಬೇಕು. ಯಾವುದಾದರೂ ಯೋಜನೆಗಳನ್ನು ಬಂದ್‌ ಮಾಡಿ ಅದರ ಹಣವನ್ನು ಕೊರೋನಾ ಬಳಸಿಕೊಳ್ಳಬೇಕು. ಬಡವರಿಗೆ ನೀಡುವ ಹಾಲು, ಹಿಟ್ಟು, ಪಡಿತರ ವಿತರಣೆಯಲ್ಲಿ ರಾಜಕೀಯ ಬೆರೆಸಬಾರದು. ನಗರಸಭೆ ಪೌರಾಯುಕ್ತ, ಪೊಲೀಸರು, ಕಂದಾಯ ಇಲಾಖೆಯವರು ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯವುದನ್ನು ಕೈಬಿಡಬೇಕು. ನಿಜವಾದ ಸಂಗತಿಯನ್ನು ಅರಿತು ನಿಷ್ಟೆಯ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ- ವಿಜಯಾನಂದ ಕಾಶಪ್ಪನವರ ಅವರು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios