ಹುಕ್ಕೇರಿ (ಅ.18): ಮೈಸೂರು ದಸರಾ ನಾಡಿಗೆ ಹೆಸರಾದರೆ, ಹುಕ್ಕೇರಿ ದಸರಾ ಭಾವೈಕ್ಯತೆಯಲ್ಲಿ ಜನಜನೀತವಾಗಿದ್ದು, ಈ ಬಾರಿ ದಸರಾ ಉತ್ಸವವನ್ನು ಮುಸ್ಲಿಂ ಸಮಾಜದ ಮುಖಂಡರಿಂದ ಚಾಲನೆ ನೀಡುವ ಮೂಲಕ ಭಾವೈಕ್ಯತೆಯ ಸಂಕೇತ ಸಾರಲಾಗಿದೆ. 

ಪಟ್ಟಣದ ಹಿರೇಮಠದಲ್ಲಿ ಶನಿವಾರದಿಂದ ಆರಂಭವಾದ ದಸರಾ ಉತ್ಸವಕ್ಕೆ ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಮುಕ್ತಾರಹುಸೇನ ಪಠಾಣ ಚಾಲನೆ ನೀಡಿದರು.

 ಈ ವೇಳೆ ಮಾತನಾಡಿದ ಶಾಸಕ ಉಮೇಶ ಕತ್ತಿ, ಕೋವಿಡ್‌-19 ಹಿನ್ನೆಲೆಯಲ್ಲಿ ಈ ಸಲ ಇಲ್ಲಿಯ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಉತ್ಸವಕ್ಕೆ ಮುಕ್ತಾರಹುಸೇನ ಪಠಾಣ ಚಾಲನೆ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.