Asianet Suvarna News Asianet Suvarna News

ಸಾವಯವ ಕೃಷಿಯಲ್ಲಿ ಶುಂಠಿ, ತೆಂಗು : ಭರ್ಜರಿ ಲಾಭ

ಎಚ್‌.ಡಿ. ಕೋಟೆ ತಾಲೂಕಿನ ಪಡುಕೋಟೆ ಬಳಿಯ ಮುಷ್ಕೆರೆಯಲ್ಲಿ ರಮೇಶ್‌ ಅವರು ಸಾವಯವ ಕೃಷಿಯಲ್ಲಿ ಶುಂಠಿ ಹಾಗೂ ತೆಂಗು ಬೆಳೆಯುತ್ತಿದ್ದು, ವಾರ್ಷಿಕ 6 ಲಕ್ಷ ರೂ. ನಿವ್ವಳ ಆದಾಯ ಗಳಿಸುತ್ತಿದ್ದಾರೆ.

 huge profit from Ginger coconut  organic farming  snr
Author
First Published Jul 3, 2023, 8:43 AM IST

 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಎಚ್‌.ಡಿ. ಕೋಟೆ ತಾಲೂಕಿನ ಪಡುಕೋಟೆ ಬಳಿಯ ಮುಷ್ಕೆರೆಯಲ್ಲಿ ರಮೇಶ್‌ ಅವರು ಸಾವಯವ ಕೃಷಿಯಲ್ಲಿ ಶುಂಠಿ ಹಾಗೂ ತೆಂಗು ಬೆಳೆಯುತ್ತಿದ್ದು, ವಾರ್ಷಿಕ 6 ಲಕ್ಷ ರೂ. ನಿವ್ವಳ ಆದಾಯ ಗಳಿಸುತ್ತಿದ್ದಾರೆ.

ಮೂಲತಃ ಮಂಡ್ಯದ ಹಾಲಹಳ್ಳಿಯವರಾದ ರಮೇಶ್‌ 2005 ರಲ್ಲಿ ಅಲ್ಲಿ 24 ಎಕರೆ ಜಮೀನು ಖರೀದಿಸಿ ವ್ಯವಸಾಯ ಮಾಡುತ್ತಿದ್ದಾರೆ. ನಾಲ್ಕು ಕೊಳವೆ ಬಾವಿ ಕೊರೆಸಿದ್ದಾರೆ. 5 ಎಕರೆಯಲ್ಲಿ ಶುಂಠಿ ಬೆಳೆದಿದ್ದಾರೆ. ಅರಿಶಿನವನ್ನು 50 ಕೆಜಿ ಬಿತ್ತನೆಯಾಗಿ ಬೆಳೆದಿದ್ದಾರೆ.

ತೆಂಗು- 1200, ಅಡಕೆ- 300, ಮಾವು- 30, ತೇಗ- 150, ಸಿಲ್ವರ್‌- 500, ಹೆಬ್ಬೇವು- 25, ನಾಟಿ ಬೇವು- 70, ಹಲಸು-2, ಶ್ರೀಗಂಧ- 300 ಮರಗಳಿವೆ. ಇವರು ಜಮೀನಿಗೆ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿ ಹಾಗೂ ಕೀಟನಾಶಕ ಹಾಕುವುದಿಲ್ಲ. ಬದಲಿಗೆ ಕೊಟ್ಟಿಗೆ ಗೊಬ್ಬರ ಬಳಸುತ್ತಾರೆ.

ಹಿಂದೆ ಏಲಕ್ಕಿ, ಪಚ್ಚ ಬಾಳೆ ಹಾಗೂ ನೇಂದ್ರ ಬಾಳೆ ಹಾಕಿದ್ದರು. ಇತ್ತೀಚೆಗೆ ತೆಗೆದಿದ್ದಾರೆ. ಒಂದು ಗಿರ್‌ ಹಾಗೂ 6 ನಾಟಿ ಹಸುಗಳು ಇವೆ.

ಶುಂಠಿ ಹಾಗೂ ಬಾಳೆಯನ್ನು ಜಮೀನಿನ ಬಳಿಯೇ ಬಂದು ಖರೀದಿಸುತ್ತಾರೆ. ಅದರಲ್ಲೂ ಸಾವಯವ ಶುಂಠಿಗೆ ಬೆಂಗಳೂರಿನ ಸಂಸ್ಥೆಯೊಂದರಿಂದ ಭಾರೀ ಬೇಡಿಕೆ ಇದೆ. ಕಳೆದ ವರ್ಷ ಶುಂಠಿಯಿಂತದ 3 ಲಕ್ಷ ಹಾಗೂ ತೆಂಗಿನಿಂದ ಲಕ್ಷ ರೂ. ಬಂದಿತು. ಈ ಪೈಕಿ 3 ಲಕ್ಷ ರೂ. ವೆಚ್ಚವಾಗಿದೆ.

ಸಾವಯವ ತೆಂಗಿನ ನರ್ಸರಿ: ರಮೇಶ್‌ ಅವರು ಕಳೆದ ಐದು ವರ್ಷಗಳಿಂದ ಸಾವಯವ ತೆಂಗಿನ ನರ್ಸರಿ ಕೂಡ ನಡೆಸುತ್ತಾರೆ. ಪ್ರತಿ ವರ್ಷ 5000 ತೆಂಗಿನ ಸಸಿಗಳು ಮಾರಾಟವಾಗುತ್ತಿವೆ. ತುಮಕೂರು, ರಾವಂದೂರು, ಟಿ. ನರಸೀಪುರ, ಮಂಡ್ಯ, ಚಿಕ್ಕಬಳ್ಳಾಪುರ ಮತ್ತಿತರ ಕಡೆಯಿಂದ ರೈತರು ಬಂದು ತೆಂಗಿನ ಸಸಿಗಳನ್ನು ಖರೀದಿಸುತ್ತಾರೆ.

ಸಂಪರ್ಕ ವಿಳಾಸ: ರಮೇಶ್‌ ಬಿನ್‌ ಬಸವೇಗೌಡ, ಮುಷ್ಕೆರೆ, ಪಡುಕೋಟೆ ಕಾವಲ್‌, ಎಚ್‌.ಡಿ. ಕೋಟೆ ತಾಲೂಕು ಮೊಃ 9902662910

ಶುಂಠಿ ಬೆಳೆಗೆ ಸ್ಪೆಷಲ್ ಬೇಸಾಯ

 ಮೈಸೂರು :  ಶುಂಠಿ ಬೇಸಾಯ ಕ್ರಮಗಳು ಮತ್ತು ಶುಂಠಿ ಸ್ಪೆಷಲ್‌ ಬಳಕೆ ಕುರಿತು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕ ರಾಹುಲ್‌ ದಾಸ್‌ ಅವರು ರೈತರಿಗೆ ಸಲಹೆ ನೀಡಿದ್ದಾರೆ.

ಶುಂಠಿ ಬೆಳೆಗೆ ಹೆಚ್ಚು ಸಾವಯವ ಪದಾರ್ಥಗಳನ್ನೊಳಗೊಂಡ ಚೆನ್ನಾಗಿ ನೀರು ಬಸಿದು ಹೋಗುವಂತಹ ಮರಳು, ಮರಳು ಮಿಶ್ರಿತ ಗೋಡು, ಕೆಂಪುಗೋಡು ಅಥವಾ ಗೋಡು ಮಿಶ್ರಿತ ಜಂಬಟ್ಟಿಗೆ ಮಣ್ಣು ಉತ್ತಮ. ಇದನ್ನು ಉಷ್ಣ ವಲಯದಲ್ಲಿ 125- 150 ಸೆಂ.ಮಿ. ಮಳೆ ಬೀಳುವ 28- 35 ಸೆ. ಉಷ್ಣತೆಯಿರುವ ಪ್ರದೇಶದಲ್ಲಿ ಬೆಳೆಯಬಹುದು.

ಈ ಬೆಳೆಯನ್ನು ಯಶಸ್ವಿಯಾಗಿ ಸಾಗುವಳಿ ಮಾಡಲು ಬಿತ್ತನೆ ಸಮಯದಿಂದ ಗಡ್ಡೆಗಳು ಮೊಳಕೆ ಬರುವವರೆಗೆ ಸಾಧಾರಣ ಮಳೆಯೂ, ಬೆಳವಣಿಗೆಯ ಅವಧಿಯಲ್ಲಿ ಚೆನ್ನಾಗಿ ಹಂಚಿಕೆಯಾಗಿ ಬೀಳುವ ಅಧಿಕ ಮಳೆಯು ಹಾಗೂ ಕೊಯಿಲು ಮಾಡುವುದಕ್ಕಿಂತ ಮುಂಚೆ ಒಂದು ತಿಂಗಳವೆರೆಗೆ ಒಣ ಹವೆಯೂ ಅವಶ್ಯಕವಾಗಿ ಬೇಕಾಗುತ್ತದೆ.

ಮಾರನ್‌, ಕುರುಪ್ಪಂಪಾಡಿ, ಎರ್ನಾಡ್‌, ವೈನಾಡ್‌, ಹಿಮಾಚಲ ಮತ್ತು ನಾಡಿಯಾ ಇವುಗಳು ಪ್ರಮುಖವಾದ ದೇಶೀಯ ತಳಿಗಳು. ರಿಯೊ-ಡಿ-ಜನೈರೋದಂತಹ ವಿದೇಶಿ ತಳಿಗಳೂ ಬೆಳೆಗಾರರಲ್ಲಿ ಜನಪ್ರಿಯವಾಗಿವೆ. ಭಾರತದ ಪಶ್ಚಿಮ ತೀರ ಪ್ರದೇಶದಲ್ಲಿ ಮಳೆಗಾಲ ಆರಂಭವಾದಾಗ ಮೇ ತಿಂಗಳ ಆರಂಭದ 15 ದಿನಗಳವರೆಗೆ ಬಿತ್ತನೆ ಗೆಡ್ಡೆಗಳನ್ನು ಬಿತ್ತನೆ ಮಾಡಲು ಅತ್ಯಂತ ಸೂಕ್ತ ಸಮಯ. ನೀರಾವರಿ ಆಶ್ರಯದಲ್ಲಿ ಫೆಬ್ರವರಿ ಮಧ್ಯದಲ್ಲಿ ಅಥವಾ ಮಾಚ್‌ರ್‍ ಆರಂಭದಲ್ಲಿ ನಾಟಿ ಮಾಡಬಹುದು. ಬೇಸಿಗೆ ಮಳೆ ಬಂದಾಗ ಬಿತ್ತನೆ ಮಾಡುವುದರಿಂದ ಅಧಿಕ ಇಳುವರಿ ಪಡೆಯುವುದರ ಜೊತೆಗೆ ರೋಗಗಳ ಬಾಧೆ ಕಡಿಮೆ ಮಾಡಬಹುದು. ಹೆಚ್ಚಿಗೆ ಮಳೆ ಬಂದಾಗ ಮಡಿಗಳ ಮೇಲಿರುವ ಮಣ್ಣು ಚದುರುವುದು ಮತ್ತು ಕೊಚ್ಚಿ ಹೋಗುವುದನ್ನು ತಡೆಗಟ್ಟಲು ಮಡಿಗಳ ಮಣ್ಣಿನ ಮೇಲೆ ಹಸಿರು ಎಲೆ/ ಸಾವಯವ ತ್ಯಾಜ್ಯ ವಸ್ತುಗಳನ್ನು ಹರಡಿ, ಹೊದಿಕೆ ಹಾಕಬೇಕು (12-15 ಟನ್‌/ಹೆಕ್ಟೇರ್‌ಗೆ).

ಟೊಮೆಟೋ, ಆಲೂಗೆಡ್ಡೆ, ಮೆಣಸಿನಕಾಯಿ, ಬದನೆಕಾಯಿ ಮತ್ತು ಶೇಂಗಾ ಬೆಳೆಗಳನ್ನು ಶುಂಠಿ ಬೆಳೆಯ ನಂತರ ಬೆಳೆಯಬಾರದು. ಏಕೆಂದರೆ ಈ ಬೆಳೆಗಳು ಸೊರಗುರೋಗ ಉಂಟು ಮಾಡುವ ರಾಲ್‌ಸ್ಟೋನಿಯಾ ಸೊಲಾನೇಸಿಯಾರಂ ಎಂಬ ಸೂಕ್ಷ್ಮಾಣುಜೀವಿಗೆ ಆಶ್ರಯ ಸಸ್ಯಗಳಾಗಿವೆ. ಬಿತ್ತನೆಗಿಂತ ಮುಂಚೆ ಬೀಜದ ಗಡ್ಡೆಗಳನ್ನು 1 ಗ್ರಾಂ ಮೆಟಲಾಕ್ಸಿಲ್‌ ಎಂಝಡ್‌-72, 1 ಗ್ರಾಂ ಸ್ಟೆ್ರಪೊ್ಟೕಸೈಕ್ಲಿನ್‌ ಮತ್ತು 2 ಮಿ.ಲೀ. ಕ್ಲೋರೋಪೈರಿಫಾಸ್‌ ಕೀಟನಾಶಕಗಳನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ತಯಾರಿಸಿದ ದ್ರಾವಣದಲ್ಲಿ 30 ನಿಮಿಷ ನೆನೆಸಿ ನೆರಳಿನಲ್ಲಿ ಹರಡಿ ನಾಟಿಗೆ ಬಳಸಿ. ಇದರಿಂದ ಗಡ್ಡೆ ಕೊಳೆ ರೋಗ ಮತ್ತು ಶಲ್ಕ ಕೀಟಗಳ ಬಾಧೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ. ನಾಟಿ ಮಾಡಿದ 60ನೇ, 90ನೇ ಮತ್ತು 120ನೇ ದಿನಗಳ ನಂತರ ಇಂಡಿಯನ್‌ ಇನ್ಸಿ$್ಟಟ್ಯೂಟ್‌ ಆಫ್‌ ಸ್ಪೆತ್ರೖಸಸ್‌ ರಿಸಚ್‌ರ್‍ (ಐಐಎಸ್‌ಆರ್‌), ಕೋಜಿಕೋಡ್‌, ಕೇರಳದಿಂದ ಅನುಮೋದನೆಯಾದ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವಾದ ಶುಂಠಿ ಸ್ಪೆಶಲ್‌ ಅನ್ನು ಸಿಂಪರಣೆ ಮಾಡುವುದರಿಂದ ಶೇ.10-15 ರಷ್ಟುಹೆಚ್ಚಿನ ಮತ್ತು ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios