ಹುಬ್ಬಳ್ಳಿ(ಸೆ.13): ಕೆಎಲ್‌ಇ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್‌ನ ಸಿವಿಲ್ ವಿಭಾಗೀಯ ವಿದ್ಯಾರ್ಥಿಗಳಾದ ಮಾರುತಿ ಬದ್ದಿ, ವಿನಾಯಕ ಜಡಿ ಎಂಬವರು ಡಿಐಪಿ- ಎಸ್‌ಕ್ಯೂ ಎಂಬ ಆ್ಯಪ್ ರೂಪಿಸಿದ್ದು, ಇದರಲ್ಲಿ ಡಿಪ್ಲೊಮಾದ ಎಲ್ಲ ವಿಭಾಗಗಳ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಳವಡಿಸಿದ್ದಾರೆ ಎಂದು ಪ್ರಾಚಾರ್ಯ ಪ್ರೊ. ವೀರೇಶ ಅಂಗಡಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆ್ಯಪ್‌ನಲ್ಲಿ ಸಿವಿಲ್, ಮೆಕ್ಯಾನಿಕಲ್, ಆಟೋಮೊಬೈಲ್, ಇ ಆ್ಯಂಡ್ ಸಿ, ಇ ಆ್ಯಂಡ್ ಇ ಹಾಗೂ ಆರ್ಕಿಟೆಕ್ಚರ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಎಲ್ಲ ಪಠ್ಯಕ್ರಮಗಳ ಡಿಸಿಇಟಿ ಪ್ರಶ್ನೆಪತ್ರಿಕೆಯನ್ನು ಇದರಲ್ಲಿ ಅಳವಡಿಸಲಾಗಿದೆ. ಇದನ್ನು ಬಳಸಿಕೊಂಡರೆ ವಾರ್ಷಿಕ ಪರೀಕ್ಷೆಗಳಲ್ಲಿ ಸಾಕಷ್ಟು ಅನುಕೂಲಗಳಾಗಲಿವೆ. ಆ್ಯಪ್ ತಯಾರಿಸಿದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಕಾಲೇಜಿನಲ್ಲಿಯೆ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿದ್ಯಾರ್ಥಿಗಳಾದ ಮಾರುತಿ ಬದ್ದಿ, ವಿನಾಯಕ ಜಡಿ ಮಾತನಾಡಿ, ಬಿಡುವಿನ ವೇಳೆಯಲ್ಲಿ ಆ್ಯಪ್ ಸಿದ್ಧಪಡಿಸಿದ್ದು, ಯಾವುದೆ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತದೆ. ಅಲ್ಲದೇ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿವಿಲ್ ವಿಭಾಗದ ಪ್ರೊ. ವಿಜಯಾ ಪಾಟೀಲ್ ಹಾಗೂ ಇತರ ವಿಭಾಗದ ಮುಖ್ಯಸ್ಥರಿದ್ದರು.

ಹುಬ್ಬಳ್ಳಿ: ಹೊಂಡ ಬಿದ್ದ ರಸ್ತೆಯಲ್ಲಿ ಓಡಾಡಿ ಬಸ್‌ಗಳೆಲ್ಲ ಗ್ಯಾರೇಜ್‌ಗೆ, ಜನ ಆಸ್ಪತ್ರೆಗೆ..!