ಹುಬ್ಬಳ್ಳಿ [ಆ.22]: ಮಗುವಿಗೆ ಅನಾರೋಗ್ಯ ಎಂದು ಆಸ್ಪತ್ರೆಗೆ ಕರೆ ತಂದಿದ್ದ ದಂಪತಿ ಮಗು ಮೃತಪಟ್ಟಿದೆ ಎನ್ನುವ ಸುದ್ದಿ ತಿಳಿದು ಅಲ್ಲಿಯೇ ಮೃತದೇಹ ಬಿಟ್ಟು ಪರಾರಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

ಆಗಸ್ಟ್ 20ರ ಸಂಜೆ ಮಗುವನ್ನು ಹುಬ್ಬಳ್ಳಿಯ ಕಿಮ್ಸ್  ಆಸ್ಪತ್ರೆಗೆ ಕರೆತಂದಿದ್ದು, ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳುತ್ತಿದ್ದಂತೆ ಅಲ್ಲಿಯೇ ಮೃತದೇಹ ಬಿಟ್ಟು,  ದಾದಪೀರ್ ಶೇಕ್ ಹಾಗೂ ಪೂಜಾ ಠಾಕೂರ್ ಎಂಬುವರು ಪರಾರಿಯಾಗಿದ್ದಾರೆ. 

ನಾಲ್ಕು ವರ್ಷದ ಹೆಣ್ಣು ಮಗುವಿನ ಕೆನ್ನೆ, ತುಟಿ ಮತ್ತು ಹೊಟ್ಟೆ ಭಾಗದಲ್ಲಿ ಮಗುವಿಗೆ ಗಂಭೀರ ಗಾಯಗಳಾಗಿದ್ದು, ಮಗುವಿನ ಸಾವು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಮಗುವಿನ ಮೇಲೆ ಗಂಭೀರ ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಗೋಕುಲ ಗ್ರಾಮದ ಬಾಡಿಗೆ ಮನೆಯನ್ನು ಖಾಲಿಮಾಡಿ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ರೌಡಿಶೀಟರ್ ಆಗಿರುವ ದಾದಾಪೀರ್ ಮತ್ತು ಪೂಜಾ ವಿವಾಹವಾಗಿರುವ ಬಗ್ಗೆಯೂ ಅನುಮಾನವಿದ್ದು, ಇಬ್ಬರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.