ವಾರದಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಸಮಸ್ಯೆ ಪರಿಹಾರ: ಸಿಎಂ ಬೊಮ್ಮಾಯಿ
ಬೆಲೇಕರಿ ಬಂದರಿಗೆ ಸಂಪರ್ಕ ಸಾಧ್ಯವಾದಲ್ಲಿ ಕೈಗಾರಿಕೆ ಬೆಳವಣಿಗೆ ಪೂರಕ ಆಗಲಿದೆ. ಮುಂದಿನ ಒಂದು ವಾರದಲ್ಲಿ ಈ ರೈಲ್ವೆ ಮಾರ್ಗಕ್ಕೆ ಇದ್ದ ಪರಿಸರ ಸಂಬಂಧಿತ ಅಡ್ಡಿ ಬಗೆಹರಿಯುವ ಸಾಧ್ಯತೆ ಇದೆ.
ಹುಬ್ಬಳ್ಳಿ(ಜು.17): ಉತ್ತರ ಕರ್ನಾಟಕ ಹಾಗೂ ಕರಾವಳಿ ಸಂಪರ್ಕಿಸುವ, ಆ ಮೂಲಕ ಈ ಭಾಗದ ಕೈಗಾರಿಕೆಗಳಿಗೆ ಸರಕು ಸಾಗಣೆಗೆ ಹೆಚ್ಚಿನ ಪ್ರಯೋಜನ ಆಗಲಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆಗೆ ಅಡ್ಡಿಯಾಗಿರುವ ಸಮಸ್ಯೆ ಶೀಘ್ರ ನಿವಾರಣೆ ಆಗುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಬೆಂಗಳೂರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಬೆಲೇಕರಿ ಬಂದರಿಗೆ ಸಂಪರ್ಕ ಸಾಧ್ಯವಾದಲ್ಲಿ ಕೈಗಾರಿಕೆ ಬೆಳವಣಿಗೆ ಪೂರಕ ಆಗಲಿದೆ. ಮುಂದಿನ ಒಂದು ವಾರದಲ್ಲಿ ಈ ರೈಲ್ವೆ ಮಾರ್ಗಕ್ಕೆ ಇದ್ದ ಪರಿಸರ ಸಂಬಂಧಿತ ಅಡ್ಡಿ ಬಗೆಹರಿಯುವ ಸಾಧ್ಯತೆ ಇದೆ. ಕಾರವಾರದಲ್ಲಿ ನೌಕಾನೆಲೆಯಲ್ಲಿ ವಿಮಾನ ನಿಲ್ದಾಣವಾಗಿ ಬಳಸುವ ಪ್ರಯತ್ನ ಆಗಿದೆ. ಇದು ಕೂಡ ಹೆಚ್ಚಿನ ಪ್ರಯೋಜನ ಆಗಲಿದೆ ಎಂದರು.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಅಡ್ಡಿ ಈ ವರ್ಷ ತೆರವು: ಸಿಎಂ ಬೊಮ್ಮಾಯಿ
ತುಮಕೂರು-ದಾವಣಗೆರೆ, ಹುಬ್ಬಳ್ಳಿ-ಬೆಳಗಾವಿ ರೈಲ್ವೆ ಮಾರ್ಗಕ್ಕೆ ಈಗಾಗಲೆ ಅನುದಾನ ಮಂಜೂರಾಗಿದ್ದು, ಭೂಸ್ವಾಧೀನ ಆರಂಭ ಆಗಲಿದೆ. ಕಲ್ಯಾಣ ಕರ್ನಾಟಕ ಭಾಗ ಕಲಬುರ್ಗಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಶಿವಮೊಗ್ಗ, ವಿಜಯಪುರದಲ್ಲಿ ಏರ್‌ಪೋರ್ಚ್ ಸ್ಥಾಪನೆ ಆಗುತ್ತಿದೆ. ಪ್ರವಾಸೋದ್ಯಮ, ಕೈಗಾರಿಕೆ, ಉದ್ಯಮ ಏಕಕಾಲದಲ್ಲಿ ಬೆಳವಣಿಗೆ ಆಗಲು ಸರ್ಕಾರ ದೂರದೃಷ್ಟಿಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಎಂದರು.