Asianet Suvarna News Asianet Suvarna News

ಪ್ರಗತಿಯತ್ತ ದಾಪುಗಾಲು: ಹುಬ್ಬಳ್ಳಿ ಏರ್ಪೋರ್ಟ್‌ಗೆ ಉತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ‘ಉತ್ತಮ ವಿಮಾನ ನಿಲ್ದಾಣ’ ಪ್ರಶಸ್ತಿ| ಪ್ರಾದೇಶಿಕ ಸಂಪರ್ಕ ಯೋಜನೆ-ಉಡಾನ್‌ ಎರಡನೇ ಹಂತದ ಯೋಜನೆ| 

Hubballi Airport got Best Airport Award
Author
Bengaluru, First Published Mar 15, 2020, 7:27 AM IST

ಹುಬ್ಬಳ್ಳಿ(ಮಾ.15): ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಾದೇಶಿಕ ಸಂಪರ್ಕ ಯೋಜನೆ-ಉಡಾನ್‌ ಅಡಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ‘ಉತ್ತಮ ವಿಮಾನ ನಿಲ್ದಾಣ’ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಮಾನಯಾನ ಮಂತ್ರಾಲಯ, ಭಾರತೀಯ ವಾಣಿಜ್ಯೋದ್ಯಮ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಹೈದ್ರಾಬಾದ್‌ನ ಬೇಗಂಪೇಟೆಯಲ್ಲಿ ನಡೆಯುತ್ತಿರುವ ಏಷ್ಯಾದ ಅತಿದೊಡ್ಡ ವಿಮಾನಯಾನ ಕುರಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್‌ ಠಾಕ್ರೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಾದೇಶಿಕ ಸಂಪರ್ಕ ಯೋಜನೆ-ಉಡಾನ್‌ ಎರಡನೇ ಹಂತದ ಯೋಜನೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿವಿಧ ನಾಲ್ಕು ವಿಮಾನ ಸಂಸ್ಥೆಗಳಿಂದ 9 ಮಾರ್ಗಗಳನ್ನು ನೀಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿಂದೆ ನೀಡಲಾಗಿದ್ದ ಎಲ್ಲ 8 ಮಾರ್ಗಗಳನ್ನು ಈ ನಿಲ್ದಾಣ ಸಮರ್ಥವಾಗಿ ನಿರ್ವಹಿಸಿದೆ. ವರ್ಷದಿಂದ ಪ್ರಗತಿಯತ್ತ ದಾಪುಗಾಲಿಡುತ್ತಿದೆ. 2017-18 ಹಾಗೂ 2018-19ರ ಅವಧಿಯಲ್ಲಿ ವಿಮಾನ ಸಂಚಾರ ಬೆಳವಣಿಗೆಯು ಶೇ.500ರಷ್ಟು ಗೂ ಪ್ರಯಾಣಿಕರ ಓಡಾಟವೂ ಶೇ. 800ರಷ್ಟು ವೃದ್ಧಿಯಾಗಿದೆ. 4.6 ಲಕ್ಷ ಪ್ರಯಾಣಿಕರಿಗೆ ಒಟ್ಟು 6,694 ನಿರ್ಧಾರಿತ ಸಂಚಾರಗಳಲ್ಲಿ ಶೇ.85ರಷ್ಟು ಸೇವೆ ನೀಡಲಾಗಿದೆ.

ನಿರಂತರ ಪ್ರಯತ್ನದ ಪರಿಣಾಮವಾಗಿ 2019-20ನೇ ಸಾಲಿನಲ್ಲಿ ಕಳೆದ ಜನವರಿ ಅಂತ್ಯದವರೆಗೆ 4.11 ಲಕ್ಷ ಜನರಿಗೆ ಸೇವೆ ನೀಡಲಾಗಿದೆ. ಈ ಆರ್ಥಿಕ ವರ್ಷಾಂತ್ಯಕ್ಕೆ 5 ಲಕ್ಷ ಜನರನ್ನು ತಲುಪುವ ನಿರೀಕ್ಷೆ ಇದೆ ಎಂದು ಪ್ರಮೋದ್‌ ಠಾಕ್ರೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
 

Follow Us:
Download App:
  • android
  • ios