Asianet Suvarna News Asianet Suvarna News

ಮಂಡ್ಯ: ಮಿಮ್ಸ್ ಸಿಬ್ಬಂದಿ ಮತ್ತೆ ಎಡವಟ್ಟು: ಗಂಡನ ಕತ್ತರಿಸಿದ ಕಾಲು ಮಣ್ಣುಮಾಡಲು ಪತ್ನಿಗೆ ಹಸ್ತಾಂತರ

Mandya News: ಪದೇ ಪದೇ ವಿವಾದಗಳ ಕೇಂದ್ರ ಬಿಂದು ಆಗುತ್ತಿರುವ ಮಂಡ್ಯ ಮಿಮ್ಸ್ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟಾಗಿದೆ 

Hospital Staff Hands Over Husbands leg to wife after gangrene operation in Mandya mnj
Author
First Published Sep 6, 2022, 5:03 PM IST

ಮಂಡ್ಯ (ಸೆ. 06):  ಪದೇ ಪದೇ ವಿವಾದಗಳ ಕೇಂದ್ರ ಬಿಂದು ಆಗುತ್ತಿರುವ ಮಂಡ್ಯ ಮಿಮ್ಸ್ (Mims Mandya)ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟಾಗಿದೆ.  ಗ್ಯಾಂಗ್ರಿನ್ ರೋಗಿಯ (Gangrene Patient)ಕಾಲು ಕತ್ತರಿಸಿ  ಸಿಬ್ಬಂದಿ ಪತ್ನಿ ಕೈಗೆ ನೀಡಿದ್ದಾರೆ.  ಶಸ್ತ್ರಚಿಕಿತ್ಸೆ ಬಳಿಕ ಕತ್ತರಿಸಿದ ಕಾಲನ್ನು ಸಿಬ್ಬಂದಿ ಪತ್ನಿಗೆ ಹಸ್ತಾಂತರಿಸಿದ್ದಾರೆ. ಗಂಡನ ಕಾಲು ಹಿಡಿದು ಕೀಲಾರ ಗ್ರಾಮದ ವೃದ್ಧೆ ಭಾಗ್ಯಮ್ಮ ಅಳುತ್ತಾ ನಿಂತಿದ್ದಾರೆ. ಗ್ಯಾಂಗ್ರೀನ್ ಖಾಯಿಲೆಗೆ ತುತ್ತಾಗಿದ್ದ ಪತಿ ಪ್ರಕಾಶ್‌ಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಕಳೆದ ಮೂರ್ನಾಲ್ಕು ದಿನಗಳ ಚಿಕಿತ್ಸೆ ಬಳಿಕ ಇಂದು (ಸೆ. 06) ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. 

ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಪ್ರಕಾಶ್‌ ಕಾಲು ಕತ್ತರಿಸಿದ್ದರು. ಬಳಿಕ ಕತ್ತರಿಸಿದ ಕಾಲನ್ನು ಪತ್ನಿ ಕೈಗೆ ನೀಡಿ ಸಿಬ್ಬಂದಿಗಳ ಎಡವಟ್ಟು ಮಾಡಿದ್ದಾರೆ.  ಕತ್ತರಿಸಿದ ಕಾಲನ್ನು ಎಲ್ಲಾದರೂ ಮಣ್ಣು ಮಾಡುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ  ದಿಕ್ಕು ತೋಚದೆ ಭಾಗ್ಯಮ್ಮ ತಬ್ಬಿಬ್ಬಾಗಿದ್ದಾರೆ. ಗಂಡನ ಕಾಲನ್ನು ಹಿಡಿದು ಆಸ್ಪತ್ರೆ ಬಳಿ ಭಾಗ್ಯಮ್ಮ ಅಳುತ್ತಾ ನಿಂತಿದ್ದಾರೆ. ಇನ್ನು ಕಾಲನ್ನು ತಾವೇ ಮಣ್ಣು ಮಾಡಲು ಆಸ್ಪತ್ರೆ ಸಿಬ್ಬಂದಿಗಳು ಸಾವಿರಾರು ರೂಪಾಯಿ ಹಣ ಕೇಳಿದ ಆರೋಪ ಕೇಳಿ ಬಂದಿದೆ.  ಮಿಮ್ಸ್ ಸಿಬ್ಬಂದಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ರೂಲ್ಸ್ ಪ್ರಕಾರ ಕೊಡಬಾರದು: ಡಿಸ್ಪೋಸ್ ಮಾಡಿಸಬೇಕು: ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ  ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ "ರೋಗಿಯ ಮೊಣಕಾಲಿನ ಕಳೆಭಾಗವನ್ನು ತೆಗೆಯಲಾಗಿತ್ತು. ಅದನ್ನ ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಆಂಡ್ ಹ್ಯಾಡ್ಲಿಂಗ್ ರೂಲ್ಸ್ ಪ್ರಕಾರ ಕೊಡಬಾರದು. ಡಿಸ್ಪೋಸಲ್ ಅಗ್ರಿಮೆಂಟ್ ಮಾಡಿಕೊಂಡಿರುವವರ ಮೂಲಕ ಡಿಸ್ಪೋಸ್ ಮಾಡಿಸಬೇಕು. ದುರಾದೃಷ್ಟಾವಶಾತ್ ತೆಗೆದ ಭಾಗವನ್ನು ರೋಗಿಯ ಪತ್ನಿಗೆ ಡಿ ಗ್ರೂಪ್ ಸಿಬ್ಬಂದಿ ಕೊಟ್ಟಿದ್ದಾರೆ" ಎಂದಿದ್ದಾರೆ. 

"ಆಕೆಗೆ ಗಾಬರಿಯಾಗಿ ಕಣ್ಣೀರು ಹಾಕಿದ್ದಾರೆ. ನನ್ನ ಗಮನಕ್ಕೆ ಬಂದ ತಕ್ಷಣ ವಾಪಸ್ ಪಡೆಯಲಾಗಿದೆ.ರೂಲ್ಸ್ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ. ಸದ್ಯ ಘಟನೆ ಬಗ್ಗೆ 24 ಗಂಟೆಯೊಳಗೆ ವರದಿ ನೀಡುವಂತೆ ಸರ್ಜರಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ.  ಅಲ್ಲದೆ ಆಸ್ಪತ್ರೆಯ ಯಾವುದೇ ತ್ಯಾಜ್ಯವನ್ನು ರೂಲ್ಸ್ ಪ್ರಕಾರವೇ ವಿಲೇವಾರಿ ಮಾಜುವಂತೆ ಸುತ್ತೋಲೆ ಹೊರಡಿಸಿದ್ದೇನೆ. ಕಾನೂನು ಬಾಹಿರವಾಗಿ ವಿಲೇವಾರಿ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ" ಎಂದಿದ್ದಾರೆ. 

ಇನ್ನು ರೋಗಿಯ ಪತ್ನಿ ಬಳಿ ಸಿಬ್ಬಂದಿ ಹಣ ಕೇಳಿದ್ದಾರೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಇದು ನನ್ನ ಗಮನಕ್ಕೆ ಬಂದಿಲ್ಲ. ವಿಚಾರಣೆ ವೇಳೆ ಸಾಬೀತಾದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ" ಎಂದಿದ್ದಾರೆ. 

ದಾವಣಗೆರೆ: ಮಹಿಳೆಯ ಶಸ್ತ್ರಚಿಕಿತ್ಸೆ ಬಳಿಕ ಹೊಲಿಗೆ ಹಾಕದೇ ನಿರ್ಲಕ್ಷ್ಯ: ಹೊಟ್ಟೆಯಲ್ಲಿ ಗಡ್ಡೆ ಇದೆಯೆಂದು ಆಪರೇಷನ್‌ ಮಾಡಿದ್ದ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತಮ್ಮ ತಾಯಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸಿದ್ದು, ನಿರ್ಲಕ್ಷ್ಯ ತೋರಿದ ವೈದ್ಯರು, ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಇಲ್ಲಿನ ಜಯನಗರ ನಿವಾಸಿ ನಳಿನಾ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ತಳ್ಳೋ ಗಾಡಿಯಲ್ಲಿ ಗರ್ಭಿಣಿ ಪತ್ನಿಯ ಆಸ್ಪತ್ರೆ ಕರೆ ತಂದ ಪತಿಗೆ ಶಾಕ್, ತನಿಖೆಗೆ ಆದೇಶಿಸಿದ ಸರ್ಕಾರ!

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಯನಗರ ನಿವಾಸಿಯಾದ ತಮ್ಮ ತಾಯಿ ಅನ್ನಪೂರ್ಣಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಜೂ.8ರಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿ ವಿವಿಧ ಪರೀಕ್ಷೆ ಮಾಡಿಸಿದ ವೈದ್ಯರು ನಿಮ್ಮ ತಾಯಿಯ ಹೊಟ್ಟೆಯಲ್ಲಿ ಗಡ್ಡೆ ಇದೆ. ಸಣ್ಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂಬುದಾಗಿ ಹೇಳಿದ್ದರು ಎಂದರು.

ಶಸ್ತ್ರಚಿಕಿತ್ಸೆಗಾಗಿ 1 ಲಕ್ಷ ರು. ಕಟ್ಟಿಸಿಕೊಂಡ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ ನಂತರ ಹೊಲಿಗೆ ಹಾಕದೇ ನಿರ್ಲಕ್ಷ್ಯ ತೋರಿದ್ದಾರೆ. ಸರಿಯಾಗಿ ಡ್ರೆಸ್ಸಿಂಗ್‌ ಸಹ ಮಾಡಿಲ್ಲ. ತಮ್ಮ ತಾಯಿ ಹೊಟ್ಟೆಯ ಭಾಗದಲ್ಲಿ ತೆರೆದಿದ್ದು, ಅಲ್ಲಿ ಈಗ ಕೀವು ತುಂಬಿದೆ, ಸಾವು, ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂದು ಹೇಳಿದರು.

Follow Us:
Download App:
  • android
  • ios