Asianet Suvarna News Asianet Suvarna News

ಹೊಸಕೋಟೆ ಕೋರ್ಟ್ ಸರ್ಕಲ್‌ನಲ್ಲಿ ತಿರುಪತಿ ಬಸ್‌ಗೆ ಕ್ಯಾಂಟರ್ ಡಿಕ್ಕಿ, ಓರ್ವ ಯುವತಿ ಸಾವು!

ಹೊಸಕೋಟೆ ಕೋರ್ಟ್‌ ಸರ್ಕಲ್ ಬಳಿ ಪಾದಾಚಾರಿಗೆ ಡಿಕ್ಕಿ ಹೊಡೆದ ಕ್ಯಾಂಟರ್ ನಂತರ ತಿರುಪತಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ.

Hoskote court circle near accident Canter collides to Tirupati bus in young woman dies sat
Author
First Published Feb 11, 2024, 5:59 PM IST

ಬೆಂಗಳೂರು ಗ್ರಾಮಾಂತರ / ಹೊಸಕೋಟೆ (ಫೆ.11): ಬೆಂಗಳೂರು ಹೊರವಲಯದ ಹೊಸಕೋಟೆ ಪಟ್ಟಣದ ಕೋರ್ಟ್‌ ಸರ್ಕಲ್‌ನಲ್ಲಿ ರಸ್ತೆ ದಾಟುವ ಪಾದಚಾರಿಗಳ ಡಿಕ್ಕಿ ಹೊಡೆದ ಕ್ಯಾಂಟರ್ ಡಿಕ್ಕಿ ಹೊಡೆದು ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಪಾದಾಚಾರಿಗಳ ಮೇಲೆ ಹರಿದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಮತ್ತೊಬ್ಬ ಬೈಕ್ ಸವಾರ ಹಾಗೂ ತಿರುಪತಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಹೊಸಕೋಟೆ ಕೋರ್ಟ್ ಸರ್ಕಲ್ ಬಳಿ ಸರಣಿ ಅಪಘಾತ ನಡೆದಿದೆ. ಕ್ಯಾಂಟರ್ ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ರಾಷ್ಟ್ರೀಯ ಹೆದ್ದಾರಿ 75ರ ಹೊಸಕೋಟೆ ಪೊಲೀಸ್ ಠಾಣೆಯ ಕೋರ್ಟ್ ಸರ್ಕಲ್ ಬಳಿ ಘಟನೆ ನಡೆದಿದ್ದು, ಬನ್ನೇರುಘಟ್ಟ ಮೂಲದ ಯುವತಿ ಸುಧಾ (20) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕ್ಯಾಂಟರ್ ಪಾದಾಚಾರಿಗಳ ಮೇಲೆ ಹರಿದ ನಂತರ ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಕೆಎಸ್ಆರ್ ಟಿಸಿ ಬಸ್ ಹಾಗೂ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರು ಹೊಸಕೋಟೆ ಹೆದ್ದಾರಿಯಲ್ಲಿ ಭೀಕರ ಅಪಘಾತ, ಮೊಬೈಲ್ ಹಿಡಿದುಕೊಂಡೇ ಪ್ರಾಣಬಿಟ್ಟ ಯುವಕ!

ಈ ಘಟನೆಯಲ್ಲಿ ಕ್ಯಾಂಟರ್ ಡಿಕ್ಕಿಗೆ ಮುಳಬಾಗಿಲಿನ  ಬೈಕ್ ಸವಾರ ನಜೀರ್ ಖಾನ್‌ಗೆ (65) ಗಂಭೀರ ಗಾಯವಾಗಿದೆ. ಕ್ಯಾಂಟರ್ ಚಾಲಕ ಕೊಲ್ಕತ್ತಾ ಮೂಲದ ಷರೀಪ್ ಉಲ್ಲಾನಿಗೂ (30) ಗಂಭೀರ ಗಾಯವಾಗಿದೆ. ಇನ್ನು ಕೆಎಸ್ ಆರ್ ಟಿಸಿ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಪ್ರಯಾಣಿಕರು ಪಾರಾಗಿದ್ದಾರೆ. ಈ ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವತಿಯನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಗಾಯಳುಗಳನ್ನು ಹೊಸಕೋಟೆ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾರು ಬೈಕ್‌ ಡಿಕ್ಕಿ ಓರ್ವ ಸ್ಥಳದಲ್ಲಿಯೇ ಸಾವು: ಬೆಂಗಳೂರು ಗ್ರಾಮಾಂತರ (ಫೆ.10): ಬೆಂಗಳೂರಿನ ಹೊರ ಹೊರವಲಯ ಹೊಸಕೋಟೆ ಕೆಆರ್ ಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿರುವ ದುರ್ಘಟನೆ ಶನಿವಾರ ನಡೆದಿದೆ. ಹೊಸಕೋಟೆ ಕೆಆರ್ ಪುರಂ ರಾಷ್ಟ್ರೀಯ ಹೆದ್ದಾರಿಯ ಅವಲಹಳ್ಳಿ ಸಮೀಪ ಅವಲಹಳ್ಳಿ ಸಮೀಪದ ಎಲೆ ಮರಿಯಪ್ಪ ಶೆಟ್ಟಿ ಕೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಹಾಗೂ ಬೈಕ್‌ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರು ಮತ್ತು ಮೋಟಾರ್ ಬೈಕ್ ನಜ್ಜುಗುಜ್ಜಾಗಿವೆ. ಈ ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ.

ಪ್ರೇಮಿಗಳ ದಿನದಂದು ಮದ್ಯ ಮಾರಾಟ ನಿಷೇಧ; ರಾಜ್ಯಕ್ಕೆ ಬರೋಬ್ಬರಿ ₹300 ಕೋಟಿ ನಷ್ಟ ಸಾಧ್ಯತೆ!

ಮೊಬೈಲ್‌ ಹಿಡಿದುಕೊಂಡೇ ಬಿದ್ದ ಯುವಕ: ಇನ್ನು ಕಾರಿನಲ್ಲಿದ್ದ ಗಾಯಾಳುಗಳಿಗೆ ತೀವ್ರ ಪೆಟ್ಟಾಗಿದೆ. ಅಪಘಾತದ ನಂತರ ಸ್ಥಳೀಯರು ಸಹಾಯಕ್ಕಾಗಮಿಸಿ ಕಾರಿನಲ್ಲಿದ್ದ ಗಾಯಾಳುಗಳನ್ನು ರಕ್ಷಿಸಿ ಹೊರಗೆ ಕೂರಿಸಿದ್ದಾರೆ. ಆದರೆ, ಅದರಲ್ಲೊಬ್ಬ ಯುವಕ ತನ್ನ ಪ್ರಾಣ ಹೋಗುವಂತಹ ಪರಿಸ್ಥಿತಿಯಲ್ಲಿಯೂ ತನ್ನ ಮೊಬೈಲ್‌ ಅನ್ನು ಗಟ್ಟಿಯಾಗಿಯೇ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಇನ್ನು ಜನರು ಕೂಡ ನಿಮ್ ಮನೆಯವರಿಗೆ ಕರೆ ಮಾಡುತ್ತೇವೆ ಎಂದು ಕೇಳಿದರೂ ಕೊಡದೇ ಕೈಯಲ್ಲಿ ಹಿಡಿದುಕೊಂಡು ರಕ್ತಸ್ರಾವದ ಮಡುವಿನಲ್ಲಿ ಬಿದ್ದಿದ್ದನು.

Follow Us:
Download App:
  • android
  • ios