ರಾಷ್ಟ್ರಕ್ಕೆ ಹೊಸಪೇಟೆ ರೈಲು ನಿಲ್ದಾಣ ಸಮರ್ಪಣೆ

ಹಂಪಿ ಸ್ಮಾರಕಗಳ ಮಾದರಿಯಲ್ಲಿ ಈ ನಿಲ್ದಾಣವನ್ನು 13.5 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ದೇಶ- ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮಾದರಿಯಲ್ಲಿ ಈ ನಿಲ್ದಾಣ ನವೀಕರಣ ಮಾಡಲಾಗಿದೆ. ಐತಿಹಾಸಿಕ ಸ್ಮಾರಕಗಳ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ರೈಲ್ವೆ ಸಚಿವಾಲಯ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸಹಭಾಗಿತ್ವದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಧಾನಿ ಮೋದಿ ಅವರು ವರ್ಚುವಲ್‌  ಮೂಲಕ ಹೊಸಪೇಟೆ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು.

Hosapete Railway Station Dedicated to the Nation grg

ಹೊಸಪೇಟೆ(ಮಾ.13): ಹಂಪಿ ಸ್ಮಾರಕಗಳ ಮಾದರಿಯಲ್ಲಿ ನವೀಕೃತಗೊಂಡ ಹೊಸಪೇಟೆ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡದಿಂದಲೇ ವರ್ಚುವಲ್‌ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು.

ಹಂಪಿ ಸ್ಮಾರಕಗಳ ಮಾದರಿಯಲ್ಲಿ ಈ ನಿಲ್ದಾಣವನ್ನು 13.5 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ದೇಶ- ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮಾದರಿಯಲ್ಲಿ ಈ ನಿಲ್ದಾಣ ನವೀಕರಣ ಮಾಡಲಾಗಿದೆ. ಐತಿಹಾಸಿಕ ಸ್ಮಾರಕಗಳ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ರೈಲ್ವೆ ಸಚಿವಾಲಯ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸಹಭಾಗಿತ್ವದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಧಾನಿ ಮೋದಿ ಅವರು ವರ್ಚುವಲ್‌ ಮೂಲಕ ಹೊಸಪೇಟೆ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು.

ಎಲ್ಲಿಯ ಸಿಯಾಟ್ಟಲ್‌, ಎಲ್ಲಿಯ ತುಂಗೆ, ಅಮೆರಿಕ ಪುರಾತತ್ವಜ್ಞನ ಅಸ್ಥಿ ಹಂಪಿಯ ತುಂಗಭದ್ರೆಯಲ್ಲಿ ಲೀನ!

ಧಾರವಾಡದ ಪರಿಸರಸ್ನೇಹಿ ಐಐಟಿ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಹಂಪಿ ಸ್ಮಾರಕ ಮಾದರಿಯ ಹೊಸಪೇಟೆ ರೈಲು ನಿಲ್ದಾಣ, ಹೊಸಪೇಟೆ- ಹುಬ್ಬಳ್ಳಿ- ತಿನ್ನೆ ೖಘಾಟ್‌ ಎಲೆಕ್ಟ್ರಿಕಲ್‌ ರೈಲು ಸೇವಾ ಕಾಮಗಾರಿಗೂ ಚಾಲನೆ ನೀಡಿದರು. ನೈರುತ್ಯ ರೈಲ್ವೆ ವಲಯದಲ್ಲಿ ಬರುವ ಹೊಸಪೇಟೆ ಭಾಗದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ರೀತಿ ರೈಲು ನಿಲ್ದಾಣ ನವೀಕರಿಸಲಾಗಿದೆ.

ಈ ರೈಲು ನಿಲ್ದಾಣವನ್ನು ಲೋಕಾರ್ಪಣೆ ಹಿನ್ನೆಲೆ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಜತೆಗೆ ಡಿಜಿಟಲ್‌ನಲ್ಲಿ ಇಡೀ ಲೋಕವೇ ನೋಡುವ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಮೋದಿ ಅವರೇ ಈ ನಿಲ್ದಾಣವನ್ನು ಸಮರ್ಪಿಸಿದ್ದಾರೆ. ಅಲ್ಲದೇ, ಸ್ವತಃ ಪ್ರಧಾನಿ ಅವರೇ ತಮ್ಮ ಟ್ವೀಟರ್‌ ಖಾತೆಯಲ್ಲಿ ನಿಲ್ದಾಣದ ಫೋಟೊಗಳನ್ನು ಹಂಚಿಕೊಂಡು, ಈ ಪಾರಂಪರಿಕ ನಿಲ್ದಾಣ ಲೋಕಾರ್ಪಣೆ ಮಾಡಲಾಗುವುದು ಎಂದು ಟ್ವೀಟ್‌ ಮಾಡಿದ್ದು, ಈ ಭಾಗದ ರೈಲು ಪ್ರಯಾಣಿಕರು ಹಾಗೂ ಪ್ರವಾಸಿಗರ ಮೆಚ್ಚುಗೆ ಗಳಿಸಿದೆ.

Latest Videos
Follow Us:
Download App:
  • android
  • ios