Asianet Suvarna News Asianet Suvarna News

ಶಿವಮೊಗ್ಗದಲ್ಲಿ ರಿಯಾಯಿತಿ ದರದಲ್ಲಿ ತೋಟಗಾರಿಕಾ ಸಸಿಗಳು ಲಭ್ಯ

ಮುಂಗಾರು ಆರಂಭಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ತೋಟಗಾರಿಕಾ ಇಲಾಖೆ ತಮ್ಮಲ್ಲಿರುವ ಉತ್ತಮ ತಳಿಯ ಗಿಡಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ತೀರ್ಮಾನಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Horticulture Plants  are available in Reasonable rate in Shivamogga district
Author
Shivamogga, First Published May 30, 2020, 5:54 PM IST

ಶಿವಮೊಗ್ಗ(ಮೇ.30): ತೋಟಗಾರಿಕೆ ಇಲಾಖೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ವಿವಿಧ ತೋಟಗಾರಿಕೆ ಕಸಿ, ಸಸಿಗಳನ್ನು ಉತ್ಪಾದಿ​ಸುತ್ತಿದ್ದು, ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ಜೂನ್‌ ತಿಂಗಳಿನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. 

ತೆಂಗು, ಅಡಕೆ, ಕಾಳುಮೆಣಸು, ಕೋಕೋ, ಗೇರು, ಮಾವು, ಸಪೋಟ, ಅಪ್ಪೆಮಿಡಿ , ನುಗ್ಗೆ, ಕರಿಬೇವು, ನುಗ್ಗೆ ಮತ್ತು ವಿವಿಧ ಅಲಂಕಾರಿಕ ಗಿಡಗಳು ಲಭ್ಯವಿರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಆರ್ಥಿಕತೆಗಿಂತ ಜನರ ಆರೋಗ್ಯಕ್ಕೆ ನಮೋ ಆದ್ಯತೆ: ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ

ಹೆಚ್ಚಿನ ಮಾಹಿತಿಗಾಗಿ ತೀರ್ಥಹಳ್ಳಿಯ ಕುರುವಳ್ಳಿ ತೋಟಗಾರಿಕೆ ಕ್ಷೇತ್ರ-9448815755, 9740759597 ಮತ್ತು ಕುಶಾವತಿ ಕ್ಷೇತ್ರ- 9480494714,  ಸಾಗರದ ಯಳವರಸಿ ತೋಟಗಾರಿಕೆ ಕ್ಷೇತ್ರ-9148610219, ಭದ್ರಾವತಿಯ ಬಿಆರ್‌ಪಿ ತೋಟಗಾರಿಕೆ ಕ್ಷೇತ್ರ-9483155292 ಮತ್ತು ಕಚೇರಿ ನರ್ಸರಿ-8095391909, ಶಿಕಾರಿಪುರದ ಕಾಳೇನಹಳ್ಳಿ ಕ್ಷೇತ್ರ-9448671602 ಮತ್ತು ಕಚೇರಿ ನರ್ಸರಿ- 9008066068 , ಶಿವಮೊಗ್ಗದ ಜಿಲ್ಲಾ ನರ್ಸರಿ ಮತ್ತು ಡಿ.ಸಿ. ಕಾಂಪೌಂಡ್‌ ನರ್ಸರಿ-9632666596, ಹೊಸನಗರದ ಗಂಗನಕೊಪ್ಪ ಕ್ಷೇತ್ರ -9844865581 (ಜುಲೈ ನಂತರ) ದೂರವಾಣಿ ಸಂಖ್ಯೆಗಳಿಗೆ ಕರೆಮಾಡಿ ಆಯಾ ಕ್ಷೇತ್ರದ ಅ​ಧಿಕಾರಿಗಳನ್ನು ಸಂಪರ್ಕಿಸಬಹುದು.

Follow Us:
Download App:
  • android
  • ios