ಉತ್ತರಕನ್ನಡದಲ್ಲಿ ಹಾರ್ನ್‌ಬಿಲ್ ಪಕ್ಷಿಯ ಮನುಷ್ಯ ಪ್ರೀತಿ, ಹಕ್ಕಿ ಬರೋದನ್ನೇ ಕಾಯುವ ಕುಟುಂಬ

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಗೋಪಾಲ್ ನಾಯ್ಕ ಎಂಬವರ ಮನೆಗೂ ಮೊದ ಮೊದಲು ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಈ ಹಾರ್ನ್ ಬಿಲ್ ಪಕ್ಷಿ, ಪ್ರಸ್ತುತ ನಿತ್ಯವೂ ಬರಲಾರಂಭಿಸಿದೆ. ಪ್ರತಿನಿತ್ಯ ದಿನದಲ್ಲಿ ಒಂದೆರಡು ಬಾರಿಯಾದ್ರೂ ಹಾರ್ನ್ ಬಿಲ್ ಮನೆಗೆ ಬಾರದೆ ಇರಲ್ಲ.

hornbill bird is a family friend and waits for food in uttara kannada Honnakeri village  gow

ಉತ್ತರಕನ್ನಡ (ಡಿ.18): ಹಾರ್ನ್ ಬಿಲ್ ಪಕ್ಷಿಗಳು ಹೆಚ್ಚಾಗಿ ಪಶ್ಚಿಮ ಘಟ್ಟಗಳ ಕಾಡುಗಳ ಮಧ್ಯದಲ್ಲಿ ಎತ್ತರದ ಮರಗಳಿರುವ ಪ್ರದೇಶದಲ್ಲಿ ಕಾಣಸಿಗುತ್ತವೆ. ಆದ್ರೆ, ಇತ್ತೀಚೆಗೆ ಕಾಡಿನಿಂದ ನಾಡಿನ ಕಡೆ ಆಗಾಗ ಬರುವ ಈ ಪಕ್ಷಿಗಳು ಜನರೊಂದಿಗೆಯೂ ಬೆರೆಯಲಾರಂಭಿಸಿವೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಗೋಪಾಲ್ ನಾಯ್ಕ ಎಂಬವರ ಮನೆಗೂ ಮೊದ ಮೊದಲು ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಈ ಹಾರ್ನ್ ಬಿಲ್ ಪಕ್ಷಿ, ಪ್ರಸ್ತುತ ನಿತ್ಯವೂ ಬರಲಾರಂಭಿಸಿದೆ. ಮೊದ ಮೊದಲು ಬರುವಾಗ ಮನೆಯ ಆವರಣದ ಗಿಡ ಮರಗಳ ಮೇಲೆ ಮಾತ್ರ ಕುಳಿತುಕೊಳ್ಳುತ್ತಿದ್ದ ಹಾರ್ನ್ ಬಿಲ್ ಈಗಂತೂ ಮನೆಯ ಒಳಗೆ ಹೋಗಿ ಬರಲಾರಂಭಿಸಿದೆ. ಪ್ರತಿನಿತ್ಯ ದಿನದಲ್ಲಿ ಒಂದೆರಡು ಬಾರಿಯಾದ್ರೂ ಹಾರ್ನ್ ಬಿಲ್ ಮನೆಗೆ ಬಾರದೆ ಇರಲ್ಲ. ಮನೆವರು ಕೂಡಾ ಅದು ಬರೋದನ್ನೇ ಕಾಯತ್ತಿರುತ್ತಾರೆ‌‌. ಒಂದಿನ ಈ ಪಕ್ಷಿ ಬಂದಿಲ್ಲಾಂದ್ರೂ ಮನೆ‌ ಮಂದಿಯೆಲ್ಲಾ ಬೇಸರಿಸುತ್ತಾರೆ. ಕಳೆದ‌ ಮೂರ್ನಾಲ್ಕು ತಿಂಗಳಿಂದ ಇವರ ಮನೆಗೆ ಹಾರ್ನ್‌ಬಿಲ್ ಬರುತ್ತಿದ್ದು, ಮನೆಗೆ ಬಂದಾಗಲ್ಲೆಲ್ಲಾ ಅದಕ್ಕೆ ತಿಂಡಿ ತಿನಿಸು ನೀಡಿ ಮಕ್ಕಳು ಕೆಲ‌ವು ಕಾಲ ಅದರ ಜತೆ ತುಂಬಾ ಸಲುಗೆಯಿಂದ ಆಟ ಆಟವಾಡುತ್ತಿದ್ದಾರೆ. 

ಹಾರ್ನ್ ಬಿಲ್ ಮನೆಗೆ ಬಂತು ಎಂದರೆ ಸಾಕು ಮನೆ ಮಂದಿಯೆಲ್ಲಾ ತುಂಬಾನೆ ಖುಷಿ ಪಡತ್ತಾರೆ‌. ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿದ್ರೂ ಅದು ಮಾತ್ರ ಬೇರೆಲ್ಲಿಯೂ ಹೋಗದೆ ನೇರವಾಗಿ ಗೋಪಾಲ ನಾಯ್ಕ್ ಅವರ ಮನೆಗೆ ಮಾತ್ರ ಬಂದು ಆಹಾರ ಸೇವಿಸಿ ಹೋಗತ್ತದೆ. ಇದು ಗ್ರೇಟ್ ಹಾರ್ನ್ ಪ್ರಬೇಧಕ್ಕೆ ಸೇರಿದ್ದ ಪಕ್ಷಿಯಾಗಿದ್ದು, ಕನ್ನಡದಲ್ಲಿ ಇದಕ್ಕೆ ಮಂಗಟ್ಟೆ ಎಂದು ಕರೆಯಾಗುತ್ತೆ‌. ಈ ಹಾರ್ನ್ ಬಿಲ್ ಪಕ್ಷಿಗೆ ಸ್ವಲ್ಪ ನಾಚಿಕೆ ಹೆಚ್ಚು ಅಂತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಪರಿಸದಲ್ಲಿ ಪಕ್ಷಿಗಳಿಲ್ಲದೆ ಮಾನವ ಬದುಕಲಾರ: ಶ್ಯಾಂಕುಮಾರ್‌
ಉಡುಪಿ: ಇಲ್ಲಿನ ಹಾವಂಜೆಯ ಭಾವನಾ ಪ್ರತಿಷ್ಠಾನ ವತಿಯಿಂದ ಗ್ರಾಮೀಣ ಮಟ್ಟದಲ್ಲಿ ಜೀವ ವೈವಿಧ್ಯತೆಗಳನ್ನು ಗುರುತಿಸುವ ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪಕ್ಷಿ ವೀಕ್ಷಣೆಯ ದ್ವಿತೀಯ ಕಾರ್ಯಕ್ರಮವನ್ನು ಹಾವಂಜೆ ಪಂಚಾಯಿತಿ, ಜೀವ ವೈವಿಧ್ಯ ಸಮಿತಿ ಹಾಗೂ ಗ್ರಾಮ ವಿಕಾಸ ಸಮಿತಿ ಮತ್ತು ಮಣಿಪಾಲ ಬರ್ಡರ್ಸ್‌ ಕ್ಲಬ್‌ ಸಹಯೋಗದಲ್ಲಿ ನಡೆಯಿತು.

ಸುಮಾರು ಎರಡು ಘಂಟೆಗಳ ಅವಧಿಯಲ್ಲಿ 93 ಪ್ರಬೇಧದ ಪಕ್ಷಿಗಳನ್ನು ಗುರುತಿಸುತ್ತ ಮಾರ್ಗದರ್ಶನ ಮಾಡಿದ ಪರಿಸರವಾದಿ ಮತ್ತು ಆರ್ಕಿಟೆಕ್ಟ್ ಕಾಸರಗೋಡಿನ ಶ್ಯಾಂ ಕುಮಾರ್‌ ಪೂರ್ವಂಕರ ಮಾತನಾಡಿ, ಮಾನವರಿಲ್ಲದೆ ಪಕ್ಷಿಗಳು ಬದುಕಬಹುದು, ಆದರೆ ಪಕ್ಷಿಗಳಿಲ್ಲದೇ ನಾವು ಜೀವಿಸಲಾರೆವು, ಅದನ್ನು ನಾವು ಅರ್ಥೈಸಿಕೊಂಡು ಈ ಜೀವ ವೈವಿಧ್ಯತೆಗಳನ್ನು ಸಂರಕ್ಷಿಸಿ ಕಾಪಿಡಬೇಕು ಎಂದು ಹೇಳಿದರು.

ಮನೆಯಲ್ಲಿ ಬರ್ಡ್ಸ್ ಇವೆಯಾ? ಯಶಸ್ಸಿಗೆ ಅಡ್ಡಿಗಾಲು ಪಂಜರದಲ್ಲಿರುವ ಪಕ್ಷಿ

ಬಹಳ ಅಪರೂಪದಲ್ಲಿ ಕಾಣಸಿಗುವ ಒರಿಯಂಟಲ್‌ ಟರ್ಟಲ್‌ ಡವ್‌, ಬ್ರವ್‌್ನ ಬ್ರಿಸ್ಟೆಡ್‌ ಫ್ಲೈಕ್ಯಾಚರ್‌, ಬೇ ಬ್ಯಾಕ್‌ ಶ್ರೈಕ್‌ ಮೊದಲಾದ ಪಕ್ಷಿಗಳು ಹಾಗೂ ಹಲವಾರು ವಲಸೆ ಹಕ್ಕಿಗಳನ್ನು ಗುರುತಿಸಲಾಯಿತು.

ಏರ್ಪೋರ್ಟ್‌ನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡ ಪ್ರಣಯ ಪಕ್ಷಿಗಳು; ವಿದೇಶಕ್ಕೆ ಹಾರಿದ ಹರಿಪ್ರಿಯಾ-ವಸಿಷ್ಠ

ಪಕ್ಷಿ ವೀಕ್ಷಣಾ ಕಾರ್ಯಕ್ರಮವನ್ನು ಸಂಯೋಜಿಸಿದ ಡಾ. ಜನಾರ್ದನ ಹಾವಂಜೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವ್ಯಾ, ಪಂಚಾಯಿದಿ ಅಧ್ಯಕ್ಷ ಅಜಿತ್‌ ಗೋಳಿಕಟ್ಟೆ, ಸದಸ್ಯರಾದ ಉದಯ ಕೋಟ್ಯಾನ್‌, ಮಣಿಪಾಲ ಬರ್ಡರ್ಸ್‌ ಕ್ಲಬ್‌ನ ತೇಜಸ್ವಿ ಆಚಾರ್ಯ, ಡಾ. ಕೇತಕಿ, ಲಯನ್ಸ್‌ ಕ್ಲಬ್‌ನ ರಮಾನಂದ ಪ್ರಭು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios