ಮೈಸೂರು(ಫೆ.24): ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯಳ ತೀವ್ರ ವಿಚಾರಣೆ ನಡೆಯುತ್ತಿದೆ. ಅವಳ ಹಿಂದೆ ಯಾರಿದ್ದಾರೆ, ಯಾವ ಸಂಘಟನೆ ಇದೆ ಎಂಬ ಕುರಿತು ಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಅಮೂಲ್ಯಗೆ ನಕ್ಸಲ್‌ ನಂಟು ಸಾಬೀತು: ಸಿಎಂ

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ಪ್ರಕರಣ ಒಂದು ಷಡ್ಯಂತ್ರ. ಇದನ್ನು ಭೇದಿಸುವ ಕೆಲಸ ಸದ್ಯ ನಡೆಯುತ್ತಿದೆ. ಡಿಜಿಪಿ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದೆ. ಸಿಐಡಿ ಸೇರಿ ಎಲ್ಲ ವಿಂಗ್‌ಗಳ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ದೇಶದ್ರೋಹಿ ಘೋಷಣೆ: ಅಮೂಲ್ಯ ಲಿಯೋನಾ ಜತೆ ಪರಪ್ಪನ ಅಗ್ರಹಾರ ಸೇರಿದ ಅರುದ್ರಾ

ಕೆಲ ಸಂಘಟನೆಗೆ ಎನ್‌ಜಿಒ ಹಣ ವರ್ಗಾವಣೆ ನಡೆಸುವ ಹಿನ್ನೆಲೆಯಲ್ಲಿ ಬ್ಲಾಕ್‌ ಲಿಸ್ಟ್‌ ಮಾಡಲಾಗಿದೆ. ಅಂತಹವರ ಮೇಲೆ ಇಡಿ ನಿಗಾ ಕೂಡ ಇಟ್ಟಿದ್ದು, ಮಾಹಿತಿ ಕಲೆ ಹಾಕುತ್ತಿದೆ. ಪ್ರಚಾರಕ್ಕಾಗಿ ಇವರು ದಿನಕ್ಕೊಂದು ಹೇಳಿಕೆ ಕೊಡುತ್ತಿಲ್ಲ. ಬದಲಿಗೆ ಪ್ರಜಾಪ್ರಭುತ್ವದ ಮೂಲಕ ಯಾವುದು ಎದುರಿಸಲು ಆಗುವುದಿಲ್ಲವೋ, ಅಂತವರು ಈ ಮಾರ್ಗ ಹಿಡಿಯುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಹಲವು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಈ ರೀತಿ ಶಕ್ತಿ ಹುಟ್ಟಿಕೊಂಡಿದೆ. ಅದನ್ನು ಸಮರ್ಥವಾಗಿ ನಾವು ಎದುರಿಸುತ್ತೇವೆ ಎಂದು ಹೇಳಿದರು.

'ದೇಶದ್ರೋಹಿ ಹೇಳಿಕೆ ನೀಡುವವರನ್ನ ಕಂಡಲ್ಲಿ ಗುಂಡಿಕ್ಕಿದ್ರೆ ಮಾತ್ರ ನಿಯಂತ್ರಣಕ್ಕೆ ಬರುತ್ತೆ'

ಮಹದಾಯಿ ಆದೇಶ ವಿಳಂಬ ಆಗಲ್ಲ:

ಮಹದಾಯಿ ನ್ಯಾಯಾಧಿಕರಣದ ಅವಧಿ 6 ತಿಂಗಳ ವಿಸ್ತರಣೆ ಆಗುತ್ತದೆ. ಸಮಸ್ಯೆ ಆಗುತ್ತೆ ಅನ್ನೋದು ತಪ್ಪು ಗ್ರಹಿಕೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಲು ಆದೇಶವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಲಿದೆ. 5:3 ಸೂತ್ರದ ಅಡಿಯಲ್ಲಿ ಟ್ರಿಬ್ಯುನಲ್‌ ಮುಂದೆ ಇಡಲು ಹೇಳಿದ್ದಾರೆ. 6 ತಿಂಗಳ ಕಾಲಾವಕಾಶ ಕೇಳಿದ್ದಾರೆ. ಇದರಿಂದ ಯಾವುದೇ ಕಾರಣಕ್ಕೂ ಈ ಆದೇಶ ವಿಳಂಬವಾಗುವುದಿಲ್ಲ ಎಂದು ತಿಳಿಸಿದರು.