ಹಾವೇರಿ(ಜ.20): ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿ ಬಂದು ಒಂದು ಬ್ಯಾಗ್ ಪ್ಯಾಕ್ ಇಟ್ಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಸಯಾಸ್ಪದ ಇರುವುದರಿಂದ ಅದನ್ನು ನಮ್ಮ ಸಿಐಎಸ್‌ಎಫ್, ಪೊಲೀಸರು ಅದನ್ನು ಕಂಡು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ‌. ಬಾಂಬ್ ನಿಷ್ಕ್ರೀಯ ದಳ ಚೆಕ್ ಮಾಡಿದ ಮೇಲೆ ಸಜೀವ್ ಬಾಂಬ್ ವಸ್ತುಗಳು ಸಿಕ್ಕಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

"

ಸೋಮವಾರ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಬಳಿಯ ಜಾನಪದ ವಿಶ್ವ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಾಥಮಿಕ ವರದಿಯಲ್ಲಿ ಸುಧಾರಿತ ಸ್ಫೋಟಕಗಳು ಇರುವುದು ಕಂಡು ಬಂದಿದೆ. ಅವುಗಳನ್ನು ನಿಷ್ಕ್ರೀಯಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಪೊಲೀಸರು  ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಕರಣದ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಈಗಾಗಲೇ ತನಿಖೆ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಮಂಗಳೂರು ಏರ್ಪೋರ್ಟ್‌ನಲ್ಲಿ ಸಜೀವ ಬಾಂಬ್ ಪತ್ತೆ!

ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕಟ್ಟೆಚ್ಚರ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ದೇಶ ದ್ರೋಹ ಶಕ್ತಿಗಳು ಭಯೋತ್ಪಾನೆ ಮಾಡಿ, ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದಾರೆ. ನಮ್ಮ ದೇಶದ ಆರ್ಥಿಕ ಚಟುವಟಿಕೆಗಳಿಗೆ ಭಂಗ ತರುವ ಕೃತ್ಯವಿದು. ಈ ಪ್ರಕರಣವನ್ನ ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 

ಏಳೆಂಟು ವರ್ಷದಿಂದ ದೊಡ್ಡ ಪ್ರಮಾಣದಲ್ಲಿ ದೇಶಾದ್ಯಂತ ವಿಧ್ವಂಸಕ ಕೃತ್ಯಗಳನ್ನು ಮಾಡುವ ಪ್ರಯತ್ನ ‌ನಡೆಯುತ್ತಿದೆ. ಗಣರಾಜೋತ್ಸವ ಬಂದಾಗ ಈ ರೀತಿ ವಿದ್ವಂಸಕ ಕೃತ್ಯ ಮಾಡುವಂತದ್ದು, ಅವರ ಪ್ರಯತ್ನವನ್ನು ನಾವು ಭಂಗ ಮಾಡುತ್ತಾ ಬಂದಿದ್ದೇವೆ. ಮಂಗಳೂರು ಅವರ ಚಟುವಟಿಕೆಗಳ ಹಿನ್ನಲೆ ಇರುವ ತಾಣ ಎಂದು ಗುರುತಿಸಿದ್ದೇವೆ. ಅದಕ್ಕೆ ತೀವ್ರ ತನಿಖೆಯನ್ನು ಮಂಗಳೂರು, ಬೆಂಗಳೂರು, ಹುಬ್ಬಳ್ಳಿಯಲ್ಲಿ ನಡೆಸಿದ್ದೇವೆ ಎಂದು ಹೇಳಿದ್ದಾರೆ. 

ಮಂಗಳೂರು ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಿಯ ಪ್ರಕ್ರಿಯೆ!

ದೇಶದಲ್ಲಿ ಭಯೋತ್ಪಾದನೆ ಮಾಡುವಂತದ್ದು, ಶಾಂತಿಗೆ ಭಂಗ ತರುವಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅನುಹುತ ಮಾಡಬೇಕು ಎಂದು ಏರ್‌ಪೋರ್ಟ್‌ನಲ್ಲಿ ಈ ರೀತಿ ಕೃತ್ಯ ಮಾಡುತ್ತಿದ್ದಾರೆ. ಆರ್ಥಿಕ ಚಟುವಟಿಕೆ ಕೇಂದ್ರ ಇರುವುದರಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.