Hijab Row: ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಒಂದೇ ಅಂತ ತೋರಿಸಬೇಕು: ಸಚಿವ ಜ್ಞಾನೇಂದ್ರ

*  ಹಿಜಾಬ್ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ 
*  ಗೊಂದಲ ಸೃಷ್ಟಿಸುವರ ಮೇಲೆ ಸೂಕ್ತ ಕಾನೂನು ಕ್ರಮ 
*  ಮತಾಂಧ ಶಕ್ತಿಗಳು ಮಕ್ಕಳಲ್ಲಿ ವಿಷಬೀಜ ಬಿತ್ತುತ್ತಿವೆ 

Home Minister Araga Jnanendra React on Hijab Row in Karnataka grg

ಕಲಬುರಗಿ(ಫೆ.19):  ಶಾಲೆಯಲ್ಲಿ ಸಮವಸ್ತ್ರ(Uniform) ಕಡ್ಡಾಯವಾಗಿ ಪಾಲನೆ ಸಂಬಂಧ ಕೆಲ ಶಾಸಕರು ಭೇಟಿಯಾಗಿ ಮನವಿ ಪತ್ರವನ್ನ ಕೊಟ್ಟಿದ್ದಾರೆ. ಸಮವಸ್ತ್ರ ಅಂದರೆ ಅದು ಸಮಾನತೆ, ಸಂಸ್ಕಾರ ತುಂಬುವ ಕೆಲಸ ಆಗಬೇಕಿದೆ. ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಒಂದೇ ಅಂತ ತೋರಿಸಬೇಕು. ಕೋರ್ಟ್ ಆದೇಶದ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ತಿಳಿಸಿದ್ದಾರೆ. 

ಇಂದು(ಶನಿವಾರ) ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಕಾಲೇಜುಗಳಲ್ಲಿ ಇನ್ನೂ ಹಿಜಾಬ್(Hijab) ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ.  ಗೊಂದಲ ಸೃಷ್ಟಿಸುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೆಲವನ್ನ ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಕಣ್ಣಿನಿಂದ ನೋಡಿಕೊಂಡು ಸುಮ್ಮನಿರಲು ಸಾಧ್ಯವೇ ಇಲ್ಲ. ಅತಿರೇಕಕ್ಕೆ ಹೋದರೇ ಕೈಕಟ್ಟಿ ಕೂಡಲು ಆಗಲ್ಲ. ಇದರ ಹಿಂದೆ ಮತಾಂಧ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಮತಾಂಧ ಶಕ್ತಿಗಳು ಮಕ್ಕಳಲ್ಲಿ ವಿಷಬೀಜ ಬಿತ್ತುತ್ತಿವೆ. ವಿವಾದ(Controversy) ಸೃಷ್ಟಿಸುವ ಸಂಘಟನೆಗಳನ್ನ ನಿರ್ಜೀವ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೋರ್ಟಿನ ಮದ್ಯಂತರ ಆದೇಶವನ್ನ ಸರ್ಕಾರ ಪಾಲನೆ ಮಾಡುತ್ತಿದೆ ಅಂತ ಹೇಳಿದ್ದಾರೆ. 

ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು, ಇದಕ್ಕೆಲ್ಲಾ ಬಗ್ಗಲ್ಲ, ಜಗ್ಗಲ್ಲ, ನೋ ರಿಸೈನ್ ಎಂದ ಈಶ್ವರಪ್ಪ!

ಸಚಿವ ಈಶ್ವರಪ್ಪ(KS Eshwarappa) ವಿರುದ್ಧ ಕಾಂಗ್ರೆಸ್(Congress) ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಆರಗ ಜ್ಞಾನೇಂದ್ರ, ಈಶ್ವರಪ್ಪ ಯಾವ ಶಬ್ದ ಹೇಳಿದ್ದಾರೆ ಅನ್ನೋದು ಪೂರ್ತಿ ಪ್ರಸಾರ ಮಾಡಬೇಕು. ಈಶ್ವರಪ್ಪ ಹೇಳಿದ್ರಲ್ಲಿ ತಪ್ಪಿಲ್ಲ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಕೆಂಪು ಕೋಟೆ ಮೇಲೆ ಕೇಸರಿ ಧ್ವಜ(Saffron Flag) ಹಾರಿಸುವುದಾಗಿ ಈಶ್ವರಪ್ಪ ಅವರು ಹೇಳಿಲ್ಲ. ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ, ಮುಂದೊಂದು ದಿನ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಸಂದರ್ಭ ಬರಬಹುದು ಅಂದಿದ್ದಾರೆ ಅಷ್ಟೇ ಅಂತ ಹೇಳಿದ್ದಾರೆ. 

ಮುಳುಗುವವಗೆ ಹುಲ್ಲು ಕಡ್ಡಿ ಆಧಾರ ಎನ್ನುವ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದನ್ನ ಬಿಟ್ಟು ಕಾಂಗ್ರೆಸ್ ಕಾಲಹರಣ ಮಾಡುತ್ತಿದೆ. ಒಂದು ಸುಳ್ಳನ್ನ ನೂರು ಬಾರಿ ಹೇಳಿದ್ರೆ ಅದು ಸತ್ಯವಾಗೋದಿಲ್ಲ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಷ್ಟ್ರಧ್ವಜ ಬದಲಿಸುವುದು ಕಾಂಗ್ರೆಸ್‌ ಅಜೆಂಡಾ, ಸಾಕ್ಷಿ ಕೊಟ್ಟ ಬಿಜೆಪಿ

ರಾಷ್ಟ್ರಧ್ವಜ ವಿಚಾರವಾಗಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ(BJP) ನಾಯಕರ ನಡುವಿನ ಆರೋಪ-ಪ್ರತ್ಯಾರೋಪ ಜೋರಾಗಿದೆ. ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕಾಂಗ್ರೆಸ್ ಸದನದಲ್ಲಿ ಧರಣಿ ನಡೆಸುತ್ತಿದ್ರೆ, ಹೊರಗೆ ಕೂಡು ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ.

ರಾಷ್ಟ್ರ ಧ್ವಜಕ್ಕೆ ಕರ್ನಾಟಕದ ಮತ್ತೋರ್ವ ಸಚಿವ ಅಪಮಾನ, ಭುಗಿಲೆದ್ದ ಆಕ್ರೋಶ

ರಾಷ್ಟ್ರಧ್ವಜ ವಿಚಾರವಾಗಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ(BJP) ನಾಯಕರ ನಡುವಿನ ಆರೋಪ-ಪ್ರತ್ಯಾರೋಪ ಜೋರಾಗಿದೆ. ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕಾಂಗ್ರೆಸ್ ಸದನದಲ್ಲಿ ಧರಣಿ ನಡೆಸುತ್ತಿದ್ರೆ, ಹೊರಗೆ ಕೂಡು ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ.

ಹಿಜಾಬ್‌ ವಿವಾದ ನ್ಯಾಯಾಲಯದ ಮೆಟ್ಟಿಲೇರುವ ಹಿಂದೆ ಕಾಂಗ್ರೆಸ್‌ ಪಕ್ಷದ ಶ್ರಮವಿದೆ. ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳೇ ಹಿಜಾಬ್‌ ಪರವಾಗಿ ನ್ಯಾಯಾಲಯಕ್ಕೆ ಅರ್ಜಿಯ ಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಹಿಜಾಬ್‌ ಪರವಾಗಿ ಇರುವುದಕ್ಕಿಂತ ಹೆಚ್ಚಾಗಿ ಕುಂಕುಮ, ಬಳೆ, ಹೂವು ಮುಡಿಯುವುದರ ವಿರುದ್ದವಿದೆ. ಹಿಂದೂ ವಿರೋಧಿ ಕಾಂಗ್ರೆಸ್‌ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Latest Videos
Follow Us:
Download App:
  • android
  • ios