ಹೊಸಪೇಟೆ(ಮೇ.10): ಹಂಪಿಗೆ ಕೊರೋನಾ ಹಿನ್ನಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಗೃಹ ರಕ್ಷಕ ದಳದ ಸಿಬ್ಬಂದಿ ಹಸಿದ ಕೋತಿಗಳಿಗೆ ಹಣ್ಣು-ಹಂಪಲ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಾದ ಕಳೆದ ಎರಡು ವಾರದಿಂದ ಕೋತಿಗಳಿಗೆ ಹಣ್ಣು, ಬಿಸ್ಕತ್ತು ಹಾಗೂ ಇತರೆ ತಿಂಡಿ-ತಿನಿಸುಗಳನ್ನು ನೀಡಿದ್ದಾರೆ. 

ನಿಲ್ಲದ ಕೊರೋನಾ ಕಾಟ: ಪ್ರವಾಸಿಗರಿಲ್ಲದೇ ಹಂಪಿ ಭಣಭಣ..!

ಜತೆಗೆ ವಿರೂಪಾಕ್ಷೇಶ್ವರ ದೇವಾಲಯದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ಜಲಾಶಯದ ಮೀನುಗಳಿಗೆ ಮಂಡಕ್ಕಿ, ಶೇಂಗಾ ಹಾಕಿದರು. ಪಿ. ಭಾಷಾಸಾಬ್‌, ಹೆಚ್‌. ಸಿದ್ದಪ್ಪ, ಬಿ. ಗಂಗಾಧರ, ದಾದ್‌ಫೀರ್‌, ಶ್ರೀಶೈಲ ಹಲಸಂಗಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.