Davanagere: ಬೆಣ್ಣೆನಗರಿ ದಾವಣಗೆರೆಯಲ್ಲಿ ಐತಿಹಾಸಿಕ ವಿಶ್ವಕರ್ಮ ಸಮ್ಮೇಳನ
ವಿಶ್ವಕರ್ಮ ಸಮಾಜ ಇಲ್ಲಿಯವರೆಗೂ ತುಳಿತಕ್ಕೆ ಒಳಗಾಗಿತ್ತು ಆದರಿ ಇದೀಗ ವಿಶ್ವಕರ್ಮ ಸಮಾಜ ಬೆಳೆಸುವವರಿಗೆ ನಾಯಕತ್ವ ವಹಿಸಲಾಗಿದೆ ಎಂದು ಚನ್ನಗಿರಿ ವಡ್ನಾಳ್ ಕಾಶಿಮಠದ ಪರಮಪೂಜ್ಯ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತೀ ಸ್ವಾಮೀಜಿ ಬಹಿರಂಗ ಪಡಿಸಿದರು.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ: (ಜು.11): ವಿಶ್ವಕರ್ಮ ಸಮಾಜ ಇಲ್ಲಿಯವರೆಗೂ ತುಳಿತಕ್ಕೆ ಒಳಗಾಗಿತ್ತು ಆದರಿ ಇದೀಗ ವಿಶ್ವಕರ್ಮ ಸಮಾಜ ಬೆಳೆಸುವವರಿಗೆ ನಾಯಕತ್ವ ವಹಿಸಲಾಗಿದೆ ಎಂದು ಚನ್ನಗಿರಿ ವಡ್ನಾಳ್ ಕಾಶಿಮಠದ ಪರಮಪೂಜ್ಯ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತೀ ಸ್ವಾಮೀಜಿ ಬಹಿರಂಗ ಪಡಿಸಿದರು.
ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯಭವನದಲ್ಲಿ ಅಖಿಲ ಭಾರತ ವಿಶ್ವಕರ್ಮ ಪರಿಷತ್, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ವಿವಿಧ ಸಂಘಸಂಸ್ಥೆಗಳ ಸಹಕಾರದಿಂದ ಸಮ್ಮೇಳನ ಆಯೋಜಿಸಿಲಾಗಿತ್ತು. ಅಖಿಲ ಕರ್ನಾಟಕ ವಿಶ್ವಬ್ರಾಹ್ಮಣ ಪೀಠಾಧಿಪತಿಗಳ ಮತ್ತು ಮಠಾಧಿಪತಿಗಳ ಒಕ್ಕೂಟದ ಸಮ್ಮಿಲನ ಮತ್ತು ಜನಜಾಗೃತಿ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀಗಳು ಸಮಾಜದ ಅಭಿವೃದ್ಧಿ ಯ ಚಿಂತನೆ ಮಾಡಬೇಕು. ಸಮಾಜದ ಬಗ್ಗೆ ಬೇಜಾವಾಬ್ದಾರಿ ಇರುವವರು ನಮಗೆ ಬೇಕಾಗಿಲ್ಲ.ವಿಶ್ವಕರ್ಮ ಸಮಾಜ ಯಾವುದೇ ಜಾತಿಮತ ಪಂಥಕ್ಕೆ ಸೀಮಿತವಾಗಿಲ್ಲ ಎಲ್ಲರೊಟ್ಟಿಗೆ ಸೌಹಾರ್ದಯುತವಾಗಿದೆ.
ಹಿಂದೂ ಧರ್ಮ ದೊಡ್ಡ ಮಟ್ಟಕ್ಕೆ ಬೆಳೆಯಲು ವಿಶ್ವಕರ್ಮ ಸಮಾಜದಿಂದ ಸಾಧ್ಯವಾಗಿದೆ. ಸಮಾಜದ ಸಾಧಕರಿಗೆ ಪುರಸ್ಕಾರ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ವಿಶ್ವಕರ್ಮ ಸಮಾವೇಶ ಇಂದು ನಡೆದಿದೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಸಮಾರಂಭ ಯಶಸ್ವಿಯಾಗಿದೆ. ಡಿಸೆಂಬರ್- ಜನವರಿಯಲ್ಲಿ ಬೆಂಗಳೂರಿನಲ್ಲಿ ವಿಶ್ವಕರ್ಮ ಸಮಾವೇಶ ಜರುಗಲಿದೆ. ರಾಷ್ಟ್ರಮಟ್ಟದಲ್ಲಿ ಸಂಘಟನೆ ಮಾಡಲಾಗಿದೆ. ನಮ್ಮ ಕಾರ್ಯವ್ಯಾಪ್ತಿ ವಿಶಾಲವಾಗಿದೆ. ಸಂಘಟನೆ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ದೇಶಾದ್ಯಂತ ಸಂಘಟನೆ ಮಾಡಲಾಗಿದೆ. ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರ ನೇಮಕ ಮಾಡಲಾಗಿದೆ ಈ ಮೂಲಕ ನಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ನೀಡಲಾಗುವುದು ಎಂದರು.
ಕಾಳಿದೇವಿಯ ಅಪಮಾನಕ್ಕೆ ವಿಶ್ವಕರ್ಮ ಮಠಾಧೀಶರು, ಮುಖಂಡರ ಖಂಡನೆ
ಕೊರೊನೊ ಕಾಲದಲ್ಲಿ ವಿಶ್ವಕರ್ಮ ಸಮಾಜಕ್ಕೆ ಸರ್ಕಾರ ಯಾವುದೇ ಅನುದಾನ ನೀಡಲಿಲ್ಲ: ನಮ್ಮ ಸಮಾಜ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು. ವಿಶ್ವಕರ್ಮ ಸಮಾಜ ಸರಿಯಾದ ರೀತಿಯಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ದಬ್ಬಾಳಿಕೆ ಹಿಂಸೆಯ ಜೀವನ ನಡೆಸುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿ ಹಿಂದುಳಿದವರಾಗಿದ್ದಾರೆ. ಒಕ್ಕೂಟದ ಮೂಲಕ ನಮ್ಮ ಸಂದೇಶಗಳನ್ನು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಎಲ್ಲಾ ಪರಮಪೂಜ್ಯರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಸಂಘಟನೆ ರೂಪಿಸಲಾಗುವುದು. ನಮ್ಮ ಸಮಾಜ ಮುಂಚೂಣಿಗೆ ಬರಬೇಕಿದೆ.
ರಾಜಕೀಯವಾಗಿ ನಮಗೆ ಸ್ಥಾನ ಸಿಕ್ಕಿಲ್ಲ. ನಮ್ಮ ಸಮಾಜ ಸಾಕಷ್ಟು ಕೊಡುಗೆ ನೀಡಿದೆ. ಸರ್ಕಾರಗಳಾಗಲಿ ಪಕ್ಷಗಳಾಗಲಿ ನಮ್ಮ ಬಗ್ಗೆ ಕಿಂಚಿತ್ ಕಾಳಜಿ ತೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೋರೊನಾ ಮಹಾಮಾರಿ ಬಂದಾಗಿನಿಂದ ಸರ್ಕಾರ ಎಲ್ಲಾ ಸಮುದಾಯಕ್ಕೆ ಅನೇಕ ಅನುದಾನ ನೀಡಿದೆ. ಆದರೆ ನಮ್ಮ ಸಮಾಜಕ್ಕೆ ಯಾವುದೇ ಅನುದಾನ ನೀಡದಿರುವುದು ದುರಂತ. ನಿಗಮ ಸ್ಥಾಪನೆ ಮಾಡಿದ್ದಾರೆ ಆದರೆ ಯಾವುದೇ ಸೌಲಭ್ಯ ನೀಡಿಲ್ಲ ಆದ್ದರಿಂದ ಸಮಾಜ ಜಾಗೃತರಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಾಜ ಹಿಂದುಳಿಯಲಿದೆ. ಎಲ್ಲಾ ರೀತಿಯಲ್ಲಿ ಸಮಾಜ ಬಲಿಷ್ಟಗೊಳಿಸಬೇಕಿದೆ.
ನಮ್ಮ ಜನನದಿಂದ ಮರಣದವರೆಗೂ ವಿಶ್ವಕರ್ಮ ಸಮಾಜದವರ ಅವಶ್ಯಕತೆಯಿದೆ. ನಾವು ಒಟ್ಟಾಗಿದ್ದರೆ ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲು ಸಾಧ್ಯ.ಸಮಾಜ ಬಾಂಧವರು ಜಾಗೃತರಾಗಬೇಕು ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಸಮಾಜದ ನೇತೃತ್ವದಲ್ಲಿ ಒಕ್ಕೂಟ ಕಾರ್ಯನಿರ್ವಹಿಸಲಿದೆ. ಒಕ್ಕೂಟದ ನಡೆಯಂತೆ ಸಮಾಜ ಬಾಂಧವರು ಕೆಲಸ ಮಾಡಬೇಕೆಂದರು. ಶಿಲ್ಪ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕಸುಬು ಮುಂದುವರೆಸಲು ವಿವಿ ಅವಶ್ಯಕತೆ ಇದೆ ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಆದರೆ ಬೇಕಾಬಿಟ್ಟಿಯಾಗಿ ಸಂಘ ಹುಟ್ಟುಹಾಕಿದ್ದೇವೆ ಎಂಬ ಭ್ರಮೆ ಕೆಲವರಲ್ಲಿದೆ. ಅದು ತಪ್ಪು. ಮುಂದಿನ ದಿನಗಳಲ್ಲಿ ಸಂಘಟನೆಗೆ ಬೆಂಬಲ ನೀಡಬೇಕು.ರಾಷ್ಟ್ರ ಮಟ್ಟದಲ್ಲಿ ಅಷ್ಟೇ ಅಲ್ಲ ರಾಜ್ಯ,ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಒಕ್ಕೂಟ ವಿಸ್ತರಣೆಯಾಗಬೇಕು ಎಂದರು.
ನಟ ವಿಜಯ ರಾಘವೇಂದ್ರ ಮಾತನಾಡಿ ಜನರಲ್ಲಿ ಕಂಡು ಬಂದ ಉತ್ಸಾಹ ಸಂತೋಷ ತರುತ್ತಿದೆ. ನಾವೆಲ್ಲರೂ ಒಂದೇ ಮನೆಯವರು, ಕುಟುಂಬದವರು ನಾವೆಲ್ಲರೂ ಒಂದೇ ಸೂರಿನಡಿ ಜೀವಿಸುವವರು ನಮ್ಮವರ ಕೆಲಸ ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯ. ಕೊವಿಡ್ ನಂತರ ಇಷ್ಟು ಜನ ಸೇರಿದ್ದೇವೆ.ಪೂಜ್ಯರ ಆಶೀರ್ವಾದದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಹರಿಹರ ಶಾಸಕ ಎಸ್ ರಾಮಪ್ಪ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸಮಾಜದ ಜನಸಂಖ್ಯೆ ಹೆಚ್ಚಿದೆ. ಸವಾಲು ಹೆಚ್ಚಿದೆ ಆದ್ದರಿಂದ ಸಮಾಜ ಸಂಘಟನೆ ಮಾಡಬೇಕು ಅದಕ್ಕಾಗಿ ಎಲ್ಲೆಡೆ ಸಂಚಾರ ಮಾಡಬೇಕು. ಹೆಚ್ಚಿನ ಸಂಘಟನೆಯಿಂದ ರಾಜಕೀಯ ಪ್ರಾತಿನಿಧ್ಯ ದೊರೆಯಲಿದೆ. ವಿಶ್ವಕರ್ಮ ಸಮಾಜ ಎಲ್ಲಾ ಕರಕುಶಲ ತಯಾರಿಕೆಗೆ ಅವಶ್ಯಕ. ಒಂದು ಕಲ್ಲಿಗೆ ಮೂರ್ತಿ ಸ್ವರೂಪ ನೀಡುವ ಸಮಾಜ. ಹೆಚ್ಚು ಆಸೆಗಳಿಲ್ಲ ಕಲೆ ಹಾಗೂ ಬುದ್ದಿವಂತಿಕೆ ಹೊಂದಿದ್ದಾರೆ. ಆಸ್ತಿ ಹೊಂದಿಲ್ಲ ಆದ್ದರಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು.ಶ್ರೀ ಗಳು ಸಂಘಟನೆಗೆ ಮುಂದಾಗಿದ್ದಾರೆ ಅವರಿಗೆ ಸಮಾಜ ಬಾಂಧವರು ಬೆಂಬಲ ನೀಡಬೇಕು ಎಂದರು.
ಮಲೆನಾಡಲ್ಲಿ ನಿಲ್ಲದೆ ಮಳೆ: ದಾವಣಗೆರೆಯಲ್ಲಿ ಆತಂಕ, ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ
ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಷ್ಟ್ರೀಯ ಅಧ್ಯಕ್ಷರಾದ ಸತೀಶ್ ಕುಮಾರ್ ಹೆಚ್.ವಿ ದೇವಾಲಯ ನಿರ್ಮಿಸಿ ಜಗತ್ತಿಗೆ ಶಿಲ್ಪಕಲೆ ಪರಿಚಯಿಸಿದ ಕೀರ್ತಿ ವಿಶ್ವಕರ್ಮ ಸಮಾಜದ್ದು. ಶುದ್ದ ಕಾಯಕ ಮಾಡುವವರು ವಿಶ್ವಕರ್ಮ ಸಮಾಜದವರು. ದೇವಾಲಯ ಕಟ್ಟಿ ಗುಡಿಸಲ್ಲಿ ವಾಸಿಸುವವರು ವಿಶ್ವಕರ್ಮ ಸಮಾಜ. ನಮ್ಮದು 45 ಲಕ್ಷ ಜನಸಂಖ್ಯೆ ಇದೆ.ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕಿದೆ. ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇತ್ತು. ಆದರೆ ಇಂದು ಆ ಸಮಸ್ಯೆ ನೀಗಿದೆ. ಹಕ್ಕು ಪಡೆಯಬೇಕಾದರೆ ಸಂಘಟನೆಯ ಅವಶ್ಯಕತೆ ಇದೆ. ಪರಿಷತ್ತಿನಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡಲಾಗುವುದು. ಐಎಎಸ್ ಐಪಿಎಸ್ ಓದುವವರಿಗೆ ದೆಹಲಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಲಾಗುವುದು ಎಂದರು.
ಶ್ರೀ ವಿಭೂಷಿತ ಶಿಸುಜ್ಞಾನತೀರ್ಥ ಸ್ವಾಮೀಜಿ, ಶ್ರೀ ರಾಮಚಂದ್ರ ಸ್ವಾಮೀಜಿ,ಜಗನ್ನಾಥ ಶ್ರೀ ಮಹೇಂದ್ರ ಶ್ರೀ, ಸೋಮಲಿಂಗಯ್ಯ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಹೆಚ್.ಎಂ ರೇವಣ್ಣ, ಲಕ್ಷ್ಮೀ ನಾರಾಯಣ, ಮಾಜಿ ಶಾಸಕ ಬಿ.ಪಿ ಹರೀಶ್, ಪರಮೇಶ್ವರಾಚಾರ್, ಮಾಜಿ ಪರಿಷತ್ ಸದಸ್ಯ ರಘು ಆಚಾರ್, ಭಾಸ್ಕರ್ ರಾವ್, ಚಿತ್ರನಟರಾದ ವೀಣಾ ಸುಂದರ್, ಸುಂದರ್, ಗಣೇಶ್ ರಾವ್ ಸೇರಿದಂತೆ ಅನೇಕರಿದ್ದರು.