'ದಿನೇಶ್ ಗುಂಡೂರಾವ್ ಒಬ್ಬ ಅಯೋಗ್ಯ ಅಧ್ಯಕ್ಷ, ಸಿದ್ದರಾಮಯ್ಯನ ಚೇಲಾ'

ಸಿದ್ದರಾಮಯ್ಯ, ಗುಂಡೂರಾವ್  ಸೇರಿಕೊಂಡು ಕಾಂಗ್ರೆಸ್ ಮುಗಿಸಿದ್ದರಿಂದಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಯವರು ಪ್ರಚಾರಕ್ಕೆ ಬರುತ್ತಿಲ್ಲ| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು ಪ್ರಚಾರ ವೇದಿಕೆಯಲ್ಲಿ ದುಡ್ಡು ಇಸ್ಕೊಳ್ಳಿ ಎಂದು ಹೇಳಿರುವುದು ಅಪರಾಧ| ಈ ಬಗ್ಗೆ ಸಿದ್ದರಾಮಯ್ಯ ಬಹಿರಂಗವಾಗಿ ಮತಯಾಚಿಸಬೇಕು ಎಂದ ಬಿ ಸಿ ಪಾಟೀಲ್| 

Hirekerur BJP Candidate B C Patil Talks Over Dinesh Gundurao

ಹಿರೇಕೆರೂರು(ನ.30): ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷನಾಗಿದ್ದಾನೆ, ದಿನೇಶ್ ಗುಂಡೂರಾವ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಚೇಲಾ ಆಗಿದ್ದಾನೆ. ಸಿದ್ದರಾಮಯ್ಯ, ಗುಂಡೂರಾವ್  ಸೇರಿಕೊಂಡು ಕಾಂಗ್ರೆಸ್ ಮುಗಿಸಿದ್ದಾರೆ ಎಂದು ಗುಂಡೂವಾರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ, ಗುಂಡೂರಾವ್  ಸೇರಿಕೊಂಡು ಕಾಂಗ್ರೆಸ್ ಮುಗಿಸಿದ್ದರಿಂದಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಯವರು ಪ್ರಚಾರಕ್ಕೆ ಬರುತ್ತಿಲ್ಲ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು ಪ್ರಚಾರ ವೇದಿಕೆಯಲ್ಲಿ ದುಡ್ಡು ಇಸ್ಕೊಳ್ಳಿ ಎಂದು ಹೇಳಿರುವುದು ಅಪರಾಧವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಬಹಿರಂಗವಾಗಿ ಮತಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. 
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಮ್ಮ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ ಸಿ ಪಾಟೀಲ್ ಅವರು, ಡಿ.ಕೆ. ಶಿವಕುಮಾರ್, ಸೋನಿಯಾ, ರಾಹುಲ್ ಬರಲಿ ಇಲ್ಲಿ ಎಲ್ಲರೂ, ಯಾರೇ ಬಂದರೂ ಹಿರೇಕೆರೂರಿನ ಮತದಾರರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

Latest Videos
Follow Us:
Download App:
  • android
  • ios