Asianet Suvarna News Asianet Suvarna News

ವೃದ್ಧೆಯ ಖಾತೆ ಸ್ಥಗಿತ: ಬ್ಯಾಂಕ್‌ಗೆ ಹೈಕೋರ್ಟ್‌ ಚಾಟಿ

ವೃದ್ಧೆ ಬದಲು ಅಧಿಕಾರಿಗಳಿಂದ ಹಣ ವಸೂಲಿಗೆ ಹೈಕೋರ್ಟ್‌ ಆದೇಶ, ಹಿರಿಯ ನಾಗರಿಕರ ಬಗ್ಗೆ ಬ್ಯಾಂಕ್‌ಗಳು ಕಾಳಜಿ ತೋರಲು ತಾಕೀತು

High Court of Karnataka Slams Bank in Bengaluru grg
Author
First Published Nov 23, 2022, 6:30 AM IST

ಬೆಂಗಳೂರು(ನ.23): ವೃದ್ಧೆಯೊಬ್ಬರ ಬ್ಯಾಂಕ್‌ ಖಾತೆಗೆ ಹೆಚ್ಚಿನ ಪಿಂಚಣಿ ಪಾವತಿಸಿದ ನಂತರ ಖಾತೆಯನ್ನು ಸ್ಥಗಿತಗೊಳಿಸಿದ ಬ್ಯಾಂಕ್‌ವೊಂದರ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿರುವ ಹೈಕೋರ್ಟ್‌, ಹಿರಿಯ ನಾಗರಿಕರ ಬಗ್ಗೆ ಕಾಳಜಿ ಹಾಗೂ ಸಹಾನುಭೂತಿ ತೋರುವ ಅಗತ್ಯವಿದೆ ಎಂದು ನುಡಿದಿದೆ.

ಖಾತೆಯನ್ನು ಸ್ಥಗಿತಗೊಳಿಸಿದ ಬ್ಯಾಂಕ್‌ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ವಿಜಯನಗರದ ನಿವಾಸಿಯಾದ ವೃದ್ಧೆ ನಳಿನಿ ದೇವಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ, ಬ್ಯಾಂಕ್‌ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು: ಇನ್ನು 3 ದಿನದಲ್ಲಿ ಆಟೋ ದರ ನಿಗದಿ?

ಅಲ್ಲದೆ, ಹೆಚ್ಚುವರಿಯಾಗಿ ಪಾವತಿಸಿದ ಪಿಂಚಣಿ ಮೊತ್ತವನ್ನು ಸಂಬಂಧಪಟ್ಟ ಬ್ಯಾಂಕ್‌ ಅಧಿಕಾರಿಗಳಿಂದ ವಸೂಲಿಗೆ ಮಾಡಬೇಕು. ಪಿಂಚಣಿದಾರ ಮಹಿಳೆಯಿಂದ ಹಣ ವಸೂಲು ಮಾಡಬಾರದು ಎಂದು ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಬ್ಯಾಂಕಿಗೆ ತೆರಳಿ, ಹೆಚ್ಚುವರಿ ಪಾವತಿಯಾದ ಪಿಂಚಣಿ ಹಿಂಪಡೆಯುವಂತೆ ಕೋರಿದರೂ ಸಿಬ್ಬಂದಿ ಸ್ಪಂದಿಸಿರಲಿಲ್ಲ. ಬಳಿಕ ವರ್ಷಗಳು ಉರುಳಿದಂತೆ ಒಟ್ಟು 2,34,158 ರು. ಹೆಚ್ಚುವರಿಯಾಗಿ ಪಾವತಿ ಮಾಡಿದ್ದಾರೆ. ಆದರೆ, ಬ್ಯಾಂಕ್‌ ಖಾತೆ ಮೇಲೆ ಹೇರಿದ ನಿರ್ಬಂಧವನ್ನು ಮಾತ್ರ ತೆರವುಗೊಳಿಸಿರಲಿಲ್ಲ. ಇದರಿಂದ ನಳಿನಿ ದೇವಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಅರ್ಜಿದಾರರು ವೃದ್ಧೆಯಾಗಿದ್ದಾರೆ. 2016ರಲ್ಲಿ ಖಾತೆ ಸ್ಥಗಿತಗೊಳಿಸಲಾಗಿದೆ. ಅಂದಿನಿಂದ ಬ್ಯಾಂಕ್‌ ಕಚೇರಿಗೆ ಪದೇ ಪದೇ ಅಲೆದರೂ ಸಮಸ್ಯೆ ಬಗೆಹರಿದಿಲ್ಲ. ಪಿಂಚಣಿದಾರರ ಧ್ವನಿಗೆ ಸರ್ಕಾರ ಹಾಗೂ ಬ್ಯಾಂಕ್‌ಗಳು ಕಿವುಡಾಗಬಾರದು. ಹಿರಿಯ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟಿತು.

Karnataka High Court: ನಿವೃತ್ತ ಕರ್ನಲ್‌ಗೆ ಸಿಕ್ತು 4 ಎಕ್ರೆ ಗೇಣಿ ಭೂಮಿ

ಕೂಡಲೇ ಅರ್ಜಿದಾರರ ಬ್ಯಾಂಕ್‌ ಖಾತೆ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕು. ಹೆಚ್ಚುವರಿ ಪಾವತಿಯಾದ ಹಣವನ್ನು ಅದಕ್ಕೆ ಕಾರಣರಾದ ಬ್ಯಾಂಕ್‌ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಹಾಗೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅರ್ಜಿದಾರರಿಗೆ ಪಿಂಚಣಿ ಪಾವತಿಗೆ ಬ್ಯಾಂಕ್‌ ಯಾವುದೇ ಅಡಚಣೆ ಉಂಟು ಮಾಡುವಂತಿಲ್ಲ ಎಂದು ನಿರ್ದೇಶಿಸಿದ ಹೈಕೋರ್ಟ್‌ ವೃದ್ಧೆ ಅರ್ಜಿಯನ್ನು ಪುರಸ್ಕರಿಸಿದೆ.

ಏನಿದು ಪ್ರಕರಣ ?

ಅರ್ಜಿದಾರರ ಪತಿ ಸರ್ಕಾರಿ ನೌಕರರಾಗಿದ್ದು, 22 ವರ್ಷ ಸೇವೆ ಸಲ್ಲಿಸಿ 2014ರಲ್ಲಿ ಸಾವನ್ನಪ್ಪಿದ್ದರು. ನಂತರ ಅರ್ಜಿದಾರಿಗೆ ಕುಟುಂಬ ಪಿಂಚಣಿ ಹಣವನ್ನು ಬ್ಯಾಂಕಿನ ಮೂಲಕ ಪಾವತಿಸಲಾಗುತ್ತಿತ್ತು. ಪಿಂಚಣಿದಾರೆಯಾ ಗಿರುವ ಅರ್ಜಿದಾರರ ಖಾತೆಗೆ 2016ರಲ್ಲಿ ಹೆಚ್ಚುವರಿಯಾಗಿ 50 ಸಾವಿರ ಹಣವನ್ನು ರಾಷ್ಟ್ರೀಕೃತ ಬ್ಯಾಂಕೊಂದರ ಅಧಿಕಾರಿಗಳು ಪಾವತಿ ಮಾಡಿದ್ದರು. ನಂತರ ಅಧಿಕಾರಿಗಳು ಅರ್ಜಿದಾರರ ಬ್ಯಾಂಕ್‌ ಖಾತೆಯನ್ನು ಸ್ಥಗಿತಗೊಳಿಸಿದ್ದರು.
 

Follow Us:
Download App:
  • android
  • ios