SSLC ಪರೀಕ್ಷೆ: ಸಹಾಯವಾಣಿ ಆರಂಭ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ರಜೆ| ಮನೆಯಲ್ಲಿಯೇ ಅಭ್ಯಸಿಸುವಾಗ ವಿಷಯವಾರು ಕಷ್ಟಕರ ವಿಷಯಗಳ ಬಗ್ಗೆ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಸಹಾಯವಾಣಿ ಪ್ರಾರಂಭಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ|
ಶಿವಮೊಗ್ಗ(ಏ.27): ಪ್ರಸ್ತುತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ರಜೆ ನೀಡಲಾಗಿದ್ದು, ಮನೆಯಲ್ಲಿಯೇ ಅಭ್ಯಸಿಸುವಾಗ ವಿಷಯವಾರು ಕಷ್ಟಕರ ವಿಷಯಗಳ ಬಗ್ಗೆ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಿಂದ ಸಹಾಯವಾಣಿ ಪ್ರಾರಂಭಿಸಲಾಗಿದೆ.
ನಿಗದಿತ ದಿನಾಂಕಗಳಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಸಂಬಂಧಪಟ್ಟ ವಿಷಯಗಳ ಸಂಪನ್ಮೂಲ ಶಿಕ್ಷಕರ ವೇಳಾಪಟ್ಟಿಯಂತೆ ಹಾಜರಿದ್ದು, ವಿದ್ಯಾರ್ಥಿಗಳು ಪ್ರಶ್ನಿಸುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
29ರಿಂದ SSLC ಪುನರ್ ಮನನ ತರಗತಿ ಪ್ರಾರಂಭ..!
ಏ.29ರಂದು ಗಣಿತ- ಶ್ರೀಧರ-9844420368, ಕಿಶೋರ್-8660267638, ವೆಂಕಟೇಶ್ ಬಿ.ಸಿ.-9481341707. ಏ.30ರಂದು ಸಮಾಜ ವಿಜ್ಞಾನ-ಯೋಗಾನಂದ-9901617742, ಗಂಗಾನಾಯ್‌್ಕ-9449552593, ಶಿವನಗೌಡ-9741226414. ಮೇ 1ರಂದು ಇಂಗ್ಲೀಷ್-ವೇದಾವತಿ-9449738979, ದಿವಾಕರ್-9611022418, ಸತೀಶ್ ಎಂ.-9591016553. ಮೇ 2ರಂದು ವಿಜ್ಞಾನ-ವಿಜಯಕುಮಾರ್-9980846146. ರುದ್ರಸ್ವಾಮಿ-9243974834, ಪರಶುರಾಮರಾವ್-9480695461. ಮೇ 6ರಂದು ಕನ್ನಡ - ಮಹೇಶ್ ಆಲೂರು-7899673075, ಬಸವರಾಜು-9916821734, ಸತೀಶ್ ಎಂ. 9591016553. ಮೇ 7ರಂದು ಹಿಂದಿ-ಗಿರಿಧರ-9448244264, ಕಿರುಬಾಕರ್-9480277367, ವೆಂಕಟೇಶ್ ಬಿ.ಸಿ.- 9481341707 ಹಾಗೂ ಕಚೇರಿ ದೂ: 08182-223851 ಸಂಪರ್ಕಿಸಿ ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ಉಪನಿರ್ದೇಶಕರು ತಿಳಿಸಿದ್ದಾರೆ.