"ನನ್ನನ್ನು ಕ್ಷಮಿಸಿಬಿಡಿ": ಕಾರವಾರದಲ್ಲಿ ವಿಶೇಷ ರೀತಿಯಲ್ಲಿ ಹೆಲ್ಮೆಟ್ ಜಾಗೃತಿ

ಹೆಲ್ಮೆಟ್ ಹಾಕದೇ ವಾಹನ ಚಲಾಯಿಸುವವರನ್ನು ತಡೆದು ದಂಡ ವಿಧಿಸುವ ಬದಲು ಅವರ ಕೈಗೆ "ನನ್ನನ್ನು ಕ್ಷಮಿಸಿಬಿಡಿ" ಎಂಬ ಬೋರ್ಡನ್ನು ಕೊಟ್ಟ ಕಾರವಾರ ನಗರದ ಸಂಚಾರಿ ಪೊಲೀಸರು 

Helmet Awareness in Special Way in Karwar grg

ಉತ್ತರಕನ್ನಡ(ಡಿ.10):  ವಾಹನ ಸವಾರರ ಪ್ರಾಣ ರಕ್ಷಣೆಗಾಗಿ ಸರ್ಕಾರ ಎಷ್ಟೇ ಕಾನೂನು ಮಾಡಿದ್ರೂ ಜನರು ಕಾನೂನು ಪಾಲನೆ ಮಾಡದೇ ಅಸಡ್ಡೆ ತೋರುವುದು ಹೆಚ್ಚು. ಹೀಗಾಗಿ ಕಾರವಾರ ನಗರದ ಸಂಚಾರಿ ಪೊಲೀಸರು ಹೆಲ್ಮೆಟ್ ಹಾಕದೇ ವಾಹನ ಚಲಾಯಿಸುವವರನ್ನು ತಡೆದು ದಂಡ ವಿಧಿಸುವ ಬದಲು ಅವರ ಕೈಗೆ "ನನ್ನನ್ನು ಕ್ಷಮಿಸಿಬಿಡಿ" ಎಂಬ ಬೋರ್ಡನ್ನು ಕೊಟ್ಟಿದ್ದಾರೆ‌. ಈ ಮೂಲಕ ಸಂಚಾರ ಜಾಗೃತಿ ಮೂಡಿಸಲು ವಿನೂತನ ರೀತಿಯಲ್ಲಿ  ಜನರಿಗೆ ಪಾಠ ಕಲಿಸಿದ್ದಾರೆ. 

ಅಪರಾಧ ತಡೆ ಮಾಸಾಚಾರಣೆ ಪ್ರಯುಕ್ತ ಪಿ.ಎಸ್.ಐ ನಾಗಪ್ಪ ನೇತೃತ್ವದಲ್ಲಿ ಈ ವಿನೂತನ ಪ್ರಯೋಗ ಮಾಡಲಾಗಿದ್ದು , ಹೆಲ್ಮೆಟ್ ಹಾಕದವರಿಗೆ ದಂಡ ವಿಧಿಸುವ ಬದಲು ಜನರಲ್ಲಿ ಜಾಗೃತಿ ಮೂಡಿಸಿ ಹೆಲ್ಮೆಟ್ ಹಾಕಿ ದ್ವಿಚಕ್ರ ವಾಹನ ಚಲಾಯಿಸುವಂತೆ ತಿಳಿ ಹೇಳಲಾಗಿದೆ. 

ಅಂಕೋಲಾದಲ್ಲಿ ನಡೆದ 13ನೇ ರಾಜ್ಯ ನೋಟರಿಗಳ ಸಮ್ಮೇಳನ

ಹೆಲ್ಮೆಟ್ ಅವಶ್ಯಕತೆಯ ಬಗ್ಗೆ ತಿಳಿಸಿ ಜನರೇ ಅರಿತುಕೊಳ್ಳುವಂತೆ ವಿಶೇಷ ರೀತಿಯಲ್ಲಿ ತಿಳಿ ಹೇಳಲಾಗಿದೆ.
 

Latest Videos
Follow Us:
Download App:
  • android
  • ios