ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಹೆಲಿಕಾಫ್ಟರ್‌ ಮೀನು ಬಲೆಗೆ  ಸ್ಥಳೀಯ ಮೀನುಗಾರರು ಇದನ್ನು ನೆಮ್ಮೀನ್‌ ಎಂದು ಕರೆಯುತ್ತಾರೆ

 ಉಡುಪಿ (ಅ.06): ಮಲ್ಪೆಯ (Malpe) ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಹೆಲಿಕಾಫ್ಟರ್‌ ಮೀನು (Helicopter Fish) ಬಲೆಗೆ ಬಿದ್ದಿದೆ. ಸ್ಥಳೀಯ ಮೀನುಗಾರರು ಇದನ್ನು ನೆಮ್ಮೀನ್‌ ಎಂದು ಕರೆಯುತ್ತಾರೆ. ನೋಡುವುದಕ್ಕೆ ಹೆಲಿಕಾಫ್ಟರ್‌ ಥರ ಕಾಣುವುದರಿಂದ ಅದನ್ನು ಹೆಲಿಕಾಫ್ಟರ್‌ ಮೀನು ಎಂದೂ ಕರೆಯುತ್ತಾರೆ.

ಭಾರಿ ಗಾತ್ರ, ಉದ್ದ ಬಾಲ, ಅಕ್ಕಪಕ್ಕ ಬೆನ್ನ ಮೇಲೆ ಅಗಲದ ರೆಕ್ಕೆ ಇರುವ ಮೀನು ಮಲ್ಪೆ ತೀರದಲ್ಲಿ ಸುಮಾರು 20 ನಾಟಿಕಲ್‌ ಮೈಲಿ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ (Arabian Sea) ಲುಕ್ಮನ್‌ ಎಂಬವವರ ಬೋಟಿನ (Boat) ಬಲೆಗೆ ಬಿದ್ದಿದೆ. ಈ ಮೀನು ಸುಮಾರು 84 ಕಿಲೋ ತೂಕವಿತ್ತು.

ಬಂಗುಡೆ ಬೇಕಾ, ಮಾಂಜಿ ಬೇಕಾ.? ಕರಾವಳಿ ತುಂಬೆಲ್ಲಾ ತಾಜಾ ಮೀನಿನ ಘಮಘಮ!

ಸ್ಥಳೀಯವಾಗಿ ಈ ಮೀನಿಗೆ ಬೇಡಿಕೆ ಇಲ್ಲ. ಕಾರಣ ಇಲ್ಲಿನವರಿಗೆ ಇದರ ರುಚಿ ಅಷ್ಟುಹಿಡಿಸುವುದಿಲ್ಲ. ಆದರೆ ಪಕ್ಕದ ಕೇರಳದಲ್ಲಿ (Kerala) ಕೆ.ಜಿ.ಗೆ ಐವತ್ತು ರೂಪಾಯಿ ಕೊಟ್ಟು ನೆಮ್ಮೀನ್‌ ಮೀನಿನ ಮಾಂಸ ಮಾರಾಟವಾಗುತ್ತದೆ. ಆದ್ದರಿಂದ ಮಲ್ಪೆಯಲ್ಲಿ ಸಿಕ್ಕಿದ ಈ ಮೀನನ್ನು ಮಂಗಳೂರು ಮೂಲಕ ಕೇರಳಕ್ಕೆ ಕಳುಹಿಸಲಾಯಿತು.

ಬಲೆಗೆ ಬಿದ್ದ ಚಿನ್ನದ ಮೀನು

 ಮಳೆಗಾಲ (Monsoo) ಹಾಗೂ ಲಾಕ್‌ಡೌನ್‌ (Lockdown) ಇದ್ದ ಕಾರಣ ತಿಂಗಳುಗಳ ಬಿಡುವಿನ ಬಳಿಕ ಸಮುದ್ರಕ್ಕೆ ಇಳಿದಿದ್ದ ಮಹಾರಾಷ್ಟ್ರದ (Maharashtra) ಪಾಲ್ಘಾರ್‌ ಜಿಲ್ಲೆಯ ಮೀನುಗಾರರು ಮೀನುಗಾರಿಕೆ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ. ಏಕೆಂದರೆ, ಅವರ ಬಲೆಗೆ ಸಿಕ್ಕಿದ್ದು ದೇಶದಲ್ಲೇ ಭಾರೀ ಬೇಡಿಕೆ ಹಾಗೂ ಅತ್ಯಂತ ದುಬಾರಿ ಮೀನು (Fish) ಎನಿಸಿಕೊಂಡ ಎನಿಸಿಕೊಂಡ ಘೋಲ್‌ ಫಿಶ್‌ಗಳು! ‘ಸಮುದ್ರದ ಚಿನ್ನ’ ಎಂದೇ ಕರೆಸಿಕೊಳ್ಳುವ 157 ಘೋಲ್‌ ಪಿಶ್‌ಗಳ ಒಂದು ಲಾಟ್‌ ಬರೋಬ್ಬರಿ ಬರೋಬ್ಬರಿ 1.33 ಕೋಟಿ ರು.ಗಳಿಗೆ ಮಾರಾಟವಾಗಿದೆ.

ಅದೃಷ್ಟದ ಬೇಟೆ:

ಪಾಲ್ಘಾರ್‌ನ ಮೀನುಗಾರ ಚಂದ್ರಕಾಂತ್‌ ತಾರೆ ಎನ್ನುವವರು 8 ಮಂದಿ ಸಂಗಡಿಗರ ಜೊತೆ ದೇವಿ ಬೋಟ್‌ನಲ್ಲಿ ಆ.15ರಂದು ಮೀನುಗಾರಿಕೆಗೆಂದು ಅರಬ್ಬೀ ಸಮುದ್ರಕ್ಕೆ ತೆರಳಿದ್ದರು. ಆ.28ರರಂದು ವಾಧ್ವನ್‌ ಬಂದರಿನಿಂದ 20ರಿಂದ 25 ನಾಟಿಕಲ್‌ ದೂರದ ಕಡಲ ಪ್ರದೇಶದಲ್ಲಿ ಹರ್ಬಾ ಮೀನುಗಾರಿಕೆ ನಡೆಸುತ್ತಿದ್ದ ವೇಳೆ 157 ಘೋಲ್‌ ಪಿಶ್‌ಗಳು ಬಲೆಗೆ ಬಿದ್ದಿವೆ. ಚಂದ್ರಕಾಂತ್‌ ಮತ್ತು ಅವರ ತಂಡ ಮೀನುಗಾರಿಕೆ ಮುಗಿಸಿ ದಡಕ್ಕೆ ಮರಳುವಷ್ಟರಲ್ಲಿ ಘೋಲ್‌ ಫಿಶ್‌ ಖರೀದಿಗೆ ವ್ಯಾಪಾರಿಗಳ ದಂಡೇ ನೆರೆದಿತ್ತು. ಪಾಲ್ಘಾರ್‌ನ ಮುರ್ಬೆ ಎಂಬಲ್ಲಿ ನಡೆಸಲಾದ ಹರಾಜಿನ ವೇಳೆ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವ್ಯಾಪಾರಿಗಳು ಘೋಲ್‌ ಫಿಶ್‌ಗಳ ಸಂಪೂರ್ಣ ಲಾಟ್‌ ಅನ್ನು 1.33 ಕೋಟಿ ರು.ಗಳಿಗೆ ಖರೀದಿಸಿದ್ದಾರೆ.