ಉಡುಪಿಯಲ್ಲಿ ಸಿಡಿಲುಮಳೆ, ಮಲ್ಪೆಯಲ್ಲಿ ಸುಂಟರಗಾಳಿ

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿರುವುದರಿಂದ ರಾಜ್ಯದ ಕರಾವಳಿಯಲ್ಲಿ 48 ಗಂಟೆಗಳಲ್ಲಿ ಗುಡುಗುಸಿಡಿಲಿನೊಂದಿಗೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯ ಭವಿಷ್ಯ ನಿಜವಾಗಿದೆ. ಶುಕ್ರವಾರ ಸಂಜೆ ಜಿಲ್ಲಾದ್ಯಂತ ಗಾಳಿ, ಸಿಡಿಲು, ಗುಡುಗಿನೊಂದಿಗೆ ಭಾರಿ ಮಳೆಯಾಗಿದೆ.

Heavy rain lashes in udupi Tornado in Malpe beach

ಉಡುಪಿ(ಮೇ 16): ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿರುವುದರಿಂದ ರಾಜ್ಯದ ಕರಾವಳಿಯಲ್ಲಿ 48 ಗಂಟೆಗಳಲ್ಲಿ ಗುಡುಗುಸಿಡಿಲಿನೊಂದಿಗೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯ ಭವಿಷ್ಯ ನಿಜವಾಗಿದೆ. ಶುಕ್ರವಾರ ಸಂಜೆ ಜಿಲ್ಲಾದ್ಯಂತ ಗಾಳಿ, ಸಿಡಿಲು, ಗುಡುಗಿನೊಂದಿಗೆ ಭಾರಿ ಮಳೆಯಾಗಿದೆ.

ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು 1 ಗಂಟೆ ಕಾಲ ಸುರಿದಿದೆ. ಜೊತೆಗೆ ವಿಪರೀತ ಗಾಳಿಯೂ ಇದ್ದುದರಿಂದ ಮಳೆಯ ತಾಂಡವ ಜೋರಾಗಿತ್ತು. ಇದರಿಂದ ದಟ್ಟವಾಗಿ ಕವಿದ ಮೋಡಗಳು ಚದುರಿ ಮಳೆ ಕಡಿಮೆಯಾಯಿತು.

ಬಂಗಾಳಕೊಲ್ಲಿಯಲ್ಲಿ ಚಂಡ ಮಾರುತ: ರಾಜ್ಯಕ್ಕೆ ತಡವಾಗಿ ಮುಂಗಾರು ಪ್ರವೇಶ

ಮಣಿಪಾಲ, ಪರ್ಕಳ, ಹಿರಿಯಡ್ಕ ಪ್ರದೇಶಗಲ್ಲಿ ಮಳೆಯಿಂದಾಗಿ ವಿದ್ಯುತ್‌ ಪೂರೈಕೆ ವ್ಯತ್ಯಯವಾಗಿದೆ. ಮುಂದಿನ 5 ದಿನಗಳ ಕಾಲ ಗಾಳಿಮಳೆ ಮುಂದುವರಿಯುವ ಬಗ್ಗೆ ಬೆಂಗಳೂರು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

ಮಲ್ಪೆಯಲ್ಲಿ ಸುಂಟರಗಾಳಿ:

ಇದೇ ಸಂದರ್ಭದಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ಪ್ರಾಕೃತಿಕ ವೈಚಿತ್ರ್ಯವೊಂದು ಸಂಭವಿಸಿದೆ. ಇಲ್ಲಿನ ಸೈಂಟ್‌ ಮೇರಿಸ್‌ ದ್ವೀಪದ ಹಿಂದೆ ಸಮುದ್ರದ ನಡುವೆ ಸುಂಟರಗಾಳಿ ಸೃಷ್ಟಿಯಾಗಿತ್ತು.

ಬಾಲ್ಯದ ದಿನಗಳಲ್ಲಿ ಹೀಗಿದ್ರು ಮುತ್ತಪ್ಪ ರೈ, ಚೈಲ್ಡ್‌ಹುಡ್ ಫ್ರೆಂಡ್ ಏನ್ ಹೇಳ್ತಾರೆ ಕೇಳಿ

ಈ ಸುಂಟರಗಾಳಿಯು ವೇಗವಾಗಿ ತಿರುಗುತ್ತಾ ಭಾರಿ ಪ್ರಮಾಣದಲ್ಲಿ ಸಮುದ್ರದ ನೀರನ್ನು ಮೇಲೆ ಮೋಡಗಳ ಕಡೆಗೆ ಸೆಳೆಯುತ್ತಿತ್ತು. ಇದನ್ನು ಕಂಡು ಸಮುದ್ರ ತೀರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಆದರೇ ಕೆಲವು ನಿಮಿಷಗಳ ನಂತರ ಈ ಸುಂಟರಗಾಳಿ ಮರೆಯಾಯಿತು. ಈ ಸುಂಟರಗಾಳಿ ಭೂಮಿಯ ಮೇಲೆ ಜನವಸತಿ ಪ್ರದೇಶದಲ್ಲಿ ಸಂಭವಿಸುತ್ತಿದ್ದರೆ ಭಾರಿ ಪ್ರಮಾಣದಲ್ಲಿ ಅಪಾಯಕ್ಕೆ ಕಾರಣವಾಗುತ್ತಿತ್ತು ಎಂದು ಮೀನುಗಾರರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios