ಚಿತ್ರದುರ್ಗ(ಸೆ.27): ಮೊಳಕಾಲ್ಮುರಿನಲ್ಲಿ ಕಳೆದೆರೆಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಚೆಕ್‌ಡ್ಯಾಂಗಳು ಭರ್ತಿಯಾಗಿವೆ ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ದೇವಸಮುದ್ರ ಹೋಬಳಿಯ ಪಕ್ಕುರ್ತಿ ಕೆರೆಯಲ್ಲಿ 4 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ವಡೇರಹಳ್ಳಿ ಮತ್ತು ತಮ್ಮೇನಹಳ್ಳಿ ರಾಮಸಾಗರ ಹಳ್ಳ ತುಂಬಿ ಹರಿಯುತ್ತಿದ್ದು, ಜನರಿಗೆ ಸಂತೋಷ ಉಂಟು ಮಾಡಿದೆ.

ಸೆ. 30 ರೊಳಗೆ ಅನರ್ಹರು ಬಿಪಿಎಲ್‌ ಕಾರ್ಡ್ ಹಿಂದಿರುಗಿಸಿ: ಡಿಸಿ

ದೇವಸಮುದ್ರ ಹೋಬಳಿಯ ಎಲ್ಲ ಚೆಕ್‌ಡ್ಯಾಂ, ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿ ಜೀವ ಕಳೆ ಬಂದಂತಾಗಿದೆ. ಕಸಬಾ ಹೋಬಳಿಯ ಮರ್ಲಹಳ್ಳಿ, ಗುಂಡ್ಲೂರು, ರಾಯಾಪುರ ಸಿದ್ದಯ್ಯನಕೋಟೆ ಪಿಕಪ್‌ಗಳಲ್ಲಿ ನೀರು ಭರ್ತಿಯಾಗಿದೆ. ಕೊಂಡ್ಲಹಳ್ಳಿ 1, ಗುಂಡ್ಲೂರು 1, ಪಟ್ಟಣದ ಕಟುಗರ ಬೀದಿಯಲ್ಲಿ 1 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಪಟ್ಟಣ ಸಮೀಪದ ನೇರ್ಲೂಟೆ ಹಳ್ಳವು ಹರಿಯುತ್ತಿದೆ. ಮೊಳಕಾಲ್ಮುರು 51.2, ರಾಯಾಪುರ 27.4,ಬಿಜಿಕೆರೆ 10.2,ರಾಂಪುರ 34,ದೇವಸಮುದ್ರ 34 ಮಿಮೀ ಮಳೆಯಾಗಿದೆ.

ಅಂದು ರಾಜೀನಾಮೆ ನೀಡಿದ್ಯಾಕೆ: ಮುಕ್ತ ಕಂಠದಿಂದ ಕಾರಣ ಕೊಟ್ಟ ಅರ್ನಹ ಶಾಸಕ