ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಮಳೆರಾಯ ಅಬ್ಬರಿಸಿದ್ದಾನೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪೆರೆದಿದ್ದಾನೆ.

ಸಿಲಿಕಾನ್ ಸಿಟಿಯ ಕಾರ್ಪೊರೇಷನ್, ಯಶವಂತಪುರ, ಮೆಜೆಸ್ಟಿಕ್  ಸುತ್ತಮುತ್ತ ಗಾಳಿ ಸಹಿತ ಮಳೆಯಾಗಿದೆ.  ಮಲ್ಲೇಶ್ವರಂ ಪ್ರದೇಶದಲ್ಲಿಯೂ ಕೂಡ ಹೆಚ್ಚಿನ ಮಳೆ ಸುರಿದಿದೆ.

ಇತ್ತ ಬೆಂಗಳೂರು ಗ್ರಾಮಾಂತರ ಪ್ರದೇಶವಾದ ಆನೇಕಲ್ ತಾಲೂಕಿನಲ್ಲಿಯೂ ಬಾರಿ ಗುಡುಗು, ಮಿಂಚು ಗಾಳೀ ಸಹಿತ ಮಳೆ ಸುರಿದಿದೆ. ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಸೇರಿದಂತೆ ಹಲವೆಡೆ ವರುಣ ಅಬ್ಬರಿಸಿದ್ದಾನೆ. 

ಭಾರೀ ಮಳೆಯಿಂದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದು,  ವಾಹನ ಸವಾರರು ಪರದಾಡುವಂತಾಗಿದೆ.