ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯ ಕೆಲ ಭಾಗಕ್ಕೆ ನೀರು ನುಗ್ಗಿ ರೋಗಿಗಳು ಹಾಗೂ ಕುಟುಂಬಸ್ಥರು ಕೆಲಕಾಲ ಸಮಸ್ಯೆ ಅನುಭವಿಸಿದರು. ಇನ್ನು, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಯ ನೆಲಮಹಡಿಯಲ್ಲಿ ಭಾರೀ ನೀರು ಸಂಗ್ರಹವಾದ ಪರಿಣಾಮ ವಿದ್ಯುತ್ ಕಡಿತಗೊಂಡಿತ್ತು. ಇದರಿಂದ ರೋಗಿಗಳಿಗೆ ಪೂರೈಕೆಯಾಗ ಬೇಕಿದ್ದ ಆಕ್ಸಿಜನ್‌ನಲ್ಲಿ ಕೊರತೆಯಾಗಿ ಕೆಲಕಾಲ ಆತಂಕ ವ್ಯಕ್ತವಾಗಿತ್ತು.  

ರಾಯಚೂರು/ಬೀದರ್(ಸೆ.05): ರಾಯಚೂರು, ಬೀದ‌ರ್ ಸೇರಿ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಾಯಚೂರು, ಬೀದರಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. 

ರಾಯಚೂರು ತಾಲೂಕಿನ ಪತ್ತೇಪುರದಲ್ಲಿ ಗೋಕುಲ ಸಾಬ್ ಹಳ್ಳ ದಾಟಲು ಹೋದ ಬಸವರಾಜ (33) ಎಂಬುವರು ಕೊಚ್ಚಿಕೊಂಡು ಹೋಗಿದ್ದಾರೆ. ಮೂಲತ: ತಾಲೂಕಿನ ಜಾಗೀರ ವೆಂಕಟಾಪುರ ಗ್ರಾಮದವರಾದ ಬಸವರಾಜ ಅವರು ತಮ್ಮ ಊರಿಗೆ ಹೋಗುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. 

ಭಾರೀ ಮಳೆ, 69 ರೈಲು ರದ್ದು ಮಾಡಿದ ಸೌತ್‌ ಸೆಂಟ್ರಲ್‌ ರೈಲ್ವೇಸ್‌!

ಆಸ್ಪತ್ರೆಗೆ ನುಗ್ಗಿದ ನೀರು: 

ರಾಯಚೂರು, ಬೀದರ್ ಎರಡೂ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗುಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿ, ಜನ ರಾತ್ರಿಯಿಡೀ ಜಾಗರಣೆ ಮಾಡು ರಾಯಚೂರು ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಜಲಾವೃತವಂತಾಯಿತು. 

ರಣಭೀಕರ ಮಳೆಗೆ ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ತತ್ತರ: 31 ಬಲಿ

ರಾಯಚೂರಿನ ರಿಮ್ಸ್ ಮತ್ತು ಬೀದರ್‌ನ ಬ್ರಿಮ್ಸ್‌ನಲ್ಲಿ ಮಳೆ ಅವಾಂತರದಿಂದಾಗಿ ರೋಗಿಗಳು ಪರದಾಡುವಂತಾಯಿತು. ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯ ಕೆಲ ಭಾಗಕ್ಕೆ ನೀರು ನುಗ್ಗಿ ರೋಗಿಗಳು ಹಾಗೂ ಕುಟುಂಬಸ್ಥರು ಕೆಲಕಾಲ ಸಮಸ್ಯೆ ಅನುಭವಿಸಿದರು. ಇನ್ನು, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಯ ನೆಲಮಹಡಿಯಲ್ಲಿ ಭಾರೀ ನೀರು ಸಂಗ್ರಹವಾದ ಪರಿಣಾಮ ವಿದ್ಯುತ್ ಕಡಿತಗೊಂಡಿತ್ತು. ಇದರಿಂದ ರೋಗಿಗಳಿಗೆ ಪೂರೈಕೆಯಾಗ ಬೇಕಿದ್ದ ಆಕ್ಸಿಜನ್‌ನಲ್ಲಿ ಕೊರತೆಯಾಗಿ ಕೆಲಕಾಲ ಆತಂಕ ವ್ಯಕ್ತವಾಗಿತ್ತು. 

ತಕ್ಷಣ ರೋಗಿಗಳನ್ನು ಪಕ್ಕದ ಸರ್ಕಾರಿ ಆಸತ್ರೆ ಹಾಗೂ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಗೊಳಿಸಿ ಚಿಕಿತ್ಸೆ ಕಲ್ಪಿಸಬೇಕಾಯಿತು. ಆಕ್ಸಿಜನ್ ಪೂರೈಕೆ ಯಂತ್ರಗಳು ಸೇರಿ ಮತ್ತಿತರ ವಿದ್ಯುತ್ ಚಾಲಿತ ಯಂತ್ರಗಳಿಗೆ ಜನ ರೇಟ‌ರ್ ಮೂಲಕ ವಿದ್ಯುತ್ ಪೂರೈಸುವ ಪ್ರಯತ್ನ ನಡೆಸ ಲಾಯಿತಾದರೂ ಕೊನೆಗೆ ಎನ್‌ಐಸಿಯು ವಿಭಾಗದಲ್ಲಿದ್ದ ಸುಮಾರು 14 ಶಿಶುಗಳನ್ನು, ಐಸಿಯುನಲ್ಲಿದ್ದ ದೃ ಮೂವರು ರೋಗಿಗಳನ್ನು ಇನ್ನೊಂದು ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಗತ್ಯವಿರುವ ರೋಗಿಗಳಿಗೆ ಕೃತಕ ಬಲೂನ್ ಪಂಪಿಂಗ್ ವ್ಯವಸ್ಥೆ ಮೂಲಕ ಆ ಆಕ್ಸಿಜನ್ ಪೂರೈಸಲಾಯಿತು.